ತಂದೆಯ ವಯಸ್ಸಿನ ನಟನೊಂದಿಗೆ ರೊಮ್ಯಾನ್ಸ್ ಬೇಕಿತ್ತಾ ಎಂದು ಎದುರಾದ ಟ್ರೋಲ್ ಗಳಿಗೆ ಶ್ರುತಿ ಹಾಸನ್ ಕೌಂಟರ್…!

Follow Us :

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಸಾಗುತ್ತಿರುವ ನಟಿ ಶ್ರುತಿ ಹಾಸನ್ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ದೊಡ್ಡ ಸ್ಟಾರ್‍ ಗಳ ಜೊತೆಗೆ ಬಿಗ್ ಬಜೆಟ್ ಸಿನೆಮಾಗಳಲ್ಲಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಇದೀಗ ಆಕೆ ತೆಲುಗಿನ ಸೀನಿಯರ್‍ ಸ್ಟಾರ್‍ ನಟರಾದ ಚಿರಂಜೀವಿ ಹಾಗೂ ಬಾಲಕೃಷ್ಣ ಜೊತೆಗೆ ನಟಿಸುತ್ತಿದ್ದಾರೆ. ಇದೀಗ ಆಕೆಯನ್ನು ಕೆಲವರು ತಂದೆಯ ವಯಸ್ಸಿನ ನಟರ ಜೊತೆಗೆ ರೊಮ್ಯಾನ್ಸ್ ಮಾಡುತ್ತಿರುವ ಬಗ್ಗೆ ಟ್ರೋಲ್ ಮಾಡಿದ್ದು, ಅದಕ್ಕೆ ತನ್ನದೇ ಆದ ಸ್ಟೈಲ್ ನಲ್ಲಿ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಶ್ರುತಿ ಹಾಸನ್ ಕಾಲಿವುಡ್ ಸ್ಟಾರ್‍ ನಟ ಕಮಲ್ ಹಾಸನ್ ಪುತ್ರಿ. ಸ್ಟಾರ್‍ ಕಿಡ್ ಆದರೂ ಸಹ ಆಕೆ ಮಾತ್ರ ಸ್ವಂತ ಪ್ರತಿಭೆಯಿಂದ ಸಕ್ಸಸ್ ಕಂಡುಕೊಂಡ ನಟಿಯಾಗಿದ್ದಾರೆ. ಸಿನಿರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಮಾತ್ರ ಆಕೆ ಸ್ಟಾರ್‍ ಕಿಡ್ ಅನ್ನು ಬಳಸಿಕೊಂಡರು. ಬಳಿಕೆ ಆಕೆ ಸ್ವಂತ ಪ್ರತಿಭೆಯಿಂದಲೇ ಆಫರ್‍ ಗಳನ್ನು ಪಡೆದುಕೊಂಡರು. ಕಡಿಮೆ ಸಮಯದಲ್ಲೇ ಕಮರ್ಷಿಯಲ್ ನಟಿಯಾಗಿ ಖ್ಯಾತಿ ಪಡೆದುಕೊಂಡರು. ಆದರೆ ವೈಯುಕ್ತಿಕ ಕಾರಣಗಳಿಂದ ಆಕೆ ಸಿನೆಮಾಗಳಿಗೆ ಕೊಂಚ ಗ್ಯಾ‌ಪ್ ಕೊಟ್ಟರು. ಬಳಿಕ ಕ್ರಾಕ್ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡ ಈಕೆ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಆಕೆ ಸಲಾರ್‍, ವಾಲ್ತೇರು ವೀರಯ್ಯ, ವೀರಾಸಿಂಹರೆಡ್ಡಿ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನೂ ವಾಲ್ತೇರು ವೀರಯ್ಯ ಹಾಗೂ ವೀರಾಸಿಂಹಾರೆಡ್ಡಿ ಈ ಸಂಕ್ರಾತಿ ಹಬ್ಬದಂದು ಬಿಡುಗಡೆಯಾಗುತ್ತಿದೆ. ವಾಲ್ತೇರು ವೀರಯ್ಯ ಸಿನೆಮಾದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ಹಾಗೂ ವೀರಾಸಿಂಹಾರೆಡ್ಡಿ ಸಿನೆಮಾದಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಈಗಾಗಲೇ ಈ ಎರಡೂ ಸಿನೆಮಾಗಳಿಂದ ಕೆಲವು ಹಾಡುಗಳು ರಿಲೀಸ್ ಆಗಿದ್ದು, ಈ ಹಾಡುಗಳಲ್ಲಿ ಆಕೆ ಸೀನಿಯರ್‍ ನಟರೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಇದೀಗ ಶ್ರುತಿ ಹಾಸನ್ ಸೀನಿಯರ್‍ ನಟರೊಂದಿಗೆ ರೊಮ್ಯಾನ್ಸ್ ಮಾಡಿದ ಕಾರಣದಿಂದ ಕೆಲವರು ಆಕೆಯನ್ನು ವಿಮರ್ಶೆ ಮಾಡುತ್ತಿದ್ದಾರೆ. ತಂದೆಯ ವಯಸ್ಸಿನ ನಟರೊಂದಿಗೆ ರೊಮ್ಯಾನ್ಸ್ ಬೇಕಾ ಎಂದು ಕಾಮೆಂಟ್ ಮಾಡುತ್ತಾ, ಹಣಕ್ಕಾಗಿ ಈ ಕೆಲಸಕ್ಕೆ ಮುಂದಾದರೇ ಎಂದು, ಯಂಗ್ ನಟರ ಸಿನೆಮಾಗಳಲ್ಲಿ ಅವಕಾಶಗಳು ಬರುತ್ತಿಲ್ಲವೇ ಎಂದು ಪ್ರಶ್ನೆಗಳ ಜೊತೆಗೆ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಇದೀಗ ಶ್ರುತಿ ಹಾಸನ್ ಸ್ಟ್ರಾಂಗ್ ಡೋಸ್ ಕೊಟ್ಟಿದ್ದಾರೆ.

ಆಕೆಯ ವಿರುದ್ದ ಎದುರಾದ ಈ ಟ್ರೋಲ್ ಗಳಿಗೆ ಶ್ರುತಿ ಹಾಸನ್ ಸ್ಟ್ರಾಂಗ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಿನೆಮಾ ರಂಗದಲ್ಲಿ ವಯಸ್ಸು ಎಂಬುದು ಮ್ಯಾಟರ್‍ ಅಲ್ಲ. ವಯಸ್ಸು ಎಂಬುದು ಕೇವಲ ನಂಬರ್‍ ಮಾತ್ರ. ಟ್ಯಾಲೆಂಟ್, ಎನರ್ಜಿ ಇದ್ದರೇ ಸಾಯುವವರೆಗೂ ನಟಿಸುತ್ತಲೇ ಇರಬಹುದು. ಈ ಹಿಂದೆ ಅನೇಕ ಹಿರೋಗಳು ತಮಗಿಂತ ಅರ್ಧ ವಯಸ್ಸಿನ ಚಿಕ್ಕವರ ಜೊತೆಗೆ ನಟಿಸಿದ್ದಾರೆ. ವಯಸ್ಸಿಗಿಂತ ತಾನು ಅತೀತ ಎಂದು ಹೇಳಿದ್ದಾರೆ.  ಸದ್ಯ ಆಕೆಯ ಈ ಹೇಳಿಕೆಗೆ ಅಭಿಮಾನಿಗಳು ಸೇರಿದಂತೆ ಅನೇಕರು ಬೆಂಬಲ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಇಬ್ಬರೂ ಸ್ಟಾರ್‍ ನಟರ ಸಿನೆಮಾಗಳ ಮೂಲಕ ಶ್ರುತಿ ಹಾಸನ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ.