Film News

ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರಂತೆ….!

ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದ ವಿಚಾರವೇ ಆಗಿದೆ. ಕಳೆದ ಅಕ್ಟೋಬರ್‍ 29 ರಂದು ಸೋಷಿಯಲ್ ಮಿಡಿಯಾ ಮೂಲಕ ಅವರು ಮಯೋಸೈಟೀಸ್ ವ್ಯಾದಿಗೆ ಗುರಿಯಾಗಿರುವುದಾಗಿ ತಿಳಿಸಿದ್ದರು.ಈ ಸುದ್ದಿ ಹೊರಬರುತ್ತಿದ್ದಂತೆಯೇ ಸಮಂತಾ ಅಭಿಮಾನಿಗಳೂ ಸೇರಿದಂತೆ ಇಡೀ ಸಿನಿರಂಗ ಶಾಕ್ ಆಗಿತ್ತು. ಬಳಿಕ ಅನೇಕ ಸ್ಟಾರ್‍ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳೂ ಸಹ ಆಕೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಇದೀಗ ಆಕೆ ವ್ಯಾಧಿಯಿಂದ ಗುಣಮುಖರಾಗಿದ್ದು ಶೀಘ್ರದಲ್ಲೇ ಶೂಟೀಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಮಂತಾ ಗುಣಮುಖರಾಗಿದ್ದು, ಶೀಘ್ರದಲ್ಲೇ ಶೂಟಿಂಗ್ ಕೆಲಸಗಳಲ್ಲೂ ಸಹ ಭಾಗಿಯಾಗುವುದಾಗಿ ಖ್ಯಾತ ಸುದ್ದಿ ಸಂಸ್ಥೆಯೊಂದು ವಿಚಾರ ಬಹಿರಂಗಗೊಳಿಸಿದೆ. ಅದರಂತೆ ಸಮಂತಾ ಟೀಂ ಸಮಂತಾ ಗುಣಮುಖರಾಗುತ್ತಿದ್ದು, ಶೀಘ್ರದಲ್ಲೇ ಶೂಟೀಂಗ್ ನಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದ ಸಮಂತಾ ಆರೋಗ್ಯದ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಿದ್ದು, ಆ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಮಯೋಸೈಟೀಸ್ ವ್ಯಾದಿಯಿಂದ ಸಮಂತ ಗುಣಮುಖರಾಗುತ್ತಿದ್ದಾರೆ. ಸಮಂತಾ ಯಾವುದೇ ವಿಚಾರವಿರಲಿ ಎದೆಗುಂದದೆ ಎದುರಿಸುವಂತಹ ವ್ಯಕ್ತಿ. ಆಕೆ ದೊಡ್ಡ ಫೈಟರ್‍ ಇದ್ದಂತೆ. ವಿಚ್ಚೇದನದ ವಿಚಾರದಲ್ಲಿ ಆಕೆ ಸೋಷಿಯಲ್ ಮಿಡಿಯಾ ಮೂಲಕ ತುಂಬಾ ವಿಮರ್ಶೆಗೆ ಒಳಗಾಗಿದ್ದರು. ಅದೆಲ್ಲವನ್ನೂ ಎದುರಿಸಿದ ಸಮಂತಾಗೆ ಮಯೋಸೈಟೀಸ್ ಎಂಬುದು ತುಂಬಾ ಸಣ್ಣ ವಿಚಾರ. ಆಕೆ ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ.

ಇನ್ನೂ ವಿಜಯ್ ದೇವರಕೊಂಡ ಜೊತೆಗೆ ಆಕೆ ಖುಷಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಸಿನೆಮಾದ ಶೂಟಿಂಗ್ ಸಹ ಮುಗಿಸಲಿದ್ದಾರೆ. ಇದಾದ ಬಳಿಕ ಸಿಟಾಡೆಲ್ ಎಂಬ ಸಿರೀಸ್ ಶೂಟಿಂಗ್ ನಲ್ಲೂ ಭಾಗಿಯಾಗಲಿದ್ದಾರೆ. ರಾಜ್ ಅಂಡ್ ಡಿಕೆ ನಿರ್ದೇಶಕ ಸಿಟಾಡೆಲ್ ಸೀರೀಸ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಬಾಲಿವುಡ್ ನಲ್ಲೂ ಸಹ ಸಮಂತಾ ರವರಿಗೆ ಅನೇಕ ಆಫರ್‍ ಗಳಿವೆ. ದೊಡ್ಡ ದೊಡ್ಡ ನಿರ್ಮಾಪಕರೂ ಸಹ ಆಕೆಯನ್ನು ತಮ್ಮ ಸಿನೆಮಾಗಳಲ್ಲಿ ನಟಿಸುವಂತೆ ಅಪ್ರೋಚ್ ಮಾಡುತ್ತಿದ್ದಾರೆ. ಈ ಹಾದಿಯಲ್ಲಿ ಸಮಂತಾ ಶೀಘ್ರ ಗುಣಮುಖರಾಗಿ ಸಿನೆಮಾಗಳಲ್ಲಿ ಸಕ್ರಿಯರಾಗಲಿದ್ದಾರೆ ಎಂದು ಆಕೆಯ ಟೀಂ ವಿಚಾರ ತಿಳಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೆಲವು ದಿನಗಳಿಂದ ಸಮಂತಾ ರವರ ಆರೋಗ್ಯದ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಿವೆ. ಚಿಕಿತ್ಸೆಗಾಗಿ ಆಕೆ ಕೇರಳಾಗೆ ಹೋಗಿದ್ದಾಗಿ, ಕೊರಿಯಾಗೆ ಹೋಗಿದ್ದಾಗಿ ಅನೇಕ ಕಥನಗಳು ಹರಿದಾಡಿದವು. ಜೊತೆಗೆ ಆಕೆ ಅನಾರೋಗ್ಯದ ಕಾರಣದಿಂದ ಆಕೆ ಸೈನ್ ಮಾಡಿದ ಸಿನೆಮಾಗಳಿಂದಲೂ ಸಹ ಆಕೆ ಹೊರಬಂದಿದ್ದಾಗಿಯೂ ಕೇಳಿಬಂದಿತ್ತು. ಸದ್ಯ ಸಮಂತಾ ಗುಣಮುಖರಾಗುತ್ತಿರುವ ಸುದ್ದಿಯಿಂದ ಆಕೆಯ ಅಭಿಮಾನಿಗಳು ಸಹ ಪುಲ್ ಖುಷಿಯಾಗಿದ್ದಾರೆ.

Most Popular

To Top