Film News

ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರಂತೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ..!

ತೆಲುಗು ಸಿನಿರಂಗದ ಸ್ಟಾರ್‍ ನಟ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ರಂತೆ ಅಲ್ಲು ಸ್ನೇಹಾ ಸಹ ತುಂಬಾನೆ ಕ್ರೇಜ್ ಹೊಂದಿದ್ದು, ಆಕೆಯನ್ನು ಫ್ಯಾಷನ್ ಐಕಾನ್ ಸ್ಟಾರ್‍ ಎಂತಲೂ ಕರೆಯಲಾಗುತ್ತಿದೆ. ಇದೀಗ ಸ್ನೇಹಾ ಶೀಘ್ರದಲ್ಲೇ ಸಿನೆಮಾದಲ್ಲಿ ಬಣ್ಣ ಹಚ್ಚಲಿದ್ದಾರಂತೆ. ಮಲಯಾಳಂ ಸಿನೆಮಾದ ಮೂಲಕ ಆಕೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಸೌಂದರ್ಯದಲ್ಲಿ ಯಾವುದೇ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸ್ಟಾರ್‍ ನಟಿಯರಂತೆ ಫ್ಯಾನ್ ಫಾಲೋಯಿಂಗ್ ಸಹ ಹೊಂದಿದ್ದಾರೆ. ಅಲ್ಲು ಸ್ನೇಹಾ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬ ಮಾತುಗಳು ಪ್ರಚಲಿತದಲ್ಲಿವೆ. ಆಕೆಯ ಮುಂದೆ ಸ್ಟಾರ್‍ ನಟಿಯರೂ ಸಹ ಹಿಂದೆ ಬೀಳುತ್ತಾರೆ ಆ ಮಟ್ಟಿಗೆ ಗ್ಲಾಮರ್‍ ಮೂಲಕ ಎಲ್ಲರನ್ನೂ ಡಾಮಿನೇಟ್ ಮಾಡುತ್ತಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಸ್ನೇಹಾ ಸಿನೆಮಾಗಳಲ್ಲಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ ಅಲ್ಲು ಸ್ನೇಹಾ ಮಲಯಾಳಂ ಸಿನೆಮಾದಲ್ಲಿ ನಟಿಸಲಿದ್ದಾರಂತೆ. ಅದೂ ಮಲಯಾಳಂ ಸ್ಟಾರ್‍ ನಟ ಪೃಥ್ವಿರಾಜ್ ಸುಕುಮಾರ್‍ ಜೊತೆಗೆ ನಟಿಸಲಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿರಂಗದಲ್ಲೂ ಸಹ ಹಾಟ್ ಟಾಪಿಕ್ ಆಗಿದೆ.

ಮಲಯಾಳಂ ಸಿನೆಮಾದ ಮೂಲಕ ಅಲ್ಲು ಸ್ನೇಹಾ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿತ್ತು. ಈ ಸುದ್ದಿ ಸುಮಾರ ದಿನಗಳ ಹಿಂದೆಯೆ ಹೇಳಲಾಗಿತ್ತು. ಆದರೆ ಯಾವ ಸಿನೆಮಾ, ಯಾರ ಜೊತೆಗೆ ನಟಿಸಲಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ. ಇದೀಗ ಹರಿದಾಡುತ್ತಿರುವ ಮಾಹಿತಿಯಂತೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್‍ ಜೊತೆಗೆ ಅಲ್ಲು ಸ್ನೇಹಾ ಡ್ಯುಯೆಟ್ ಹಾಡಲಿದ್ದಾರಂತೆ. ಸದ್ಯ ಸ್ನೇಹಾರೆಡ್ಡಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸ್ನೇಹಾರೆಡ್ಡಿ ಸಿನೆಮಾಗಳಿಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದ್ದು, ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸೌತ್ ಸಿನಿರಂಗದಲ್ಲಿ ಅಲ್ಲು ಅರ್ಜುನ್ ಎಷ್ಟು ಫೇಮಸ್ ಆಗಿದ್ದಾರೋ ಸ್ನೇಹಾ ಸಹ ಅಷ್ಟೆ ಫೇಮಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ಆಕೆ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಸ್ನೇಹಾರೆಡ್ಡಿ ಹಾಗೂ ಅಲ್ಲು ಅರ್ಜುನ್ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಕಳೆದ 2011 ರಲ್ಲಿ ಮದುವೆಯಾದರು. ಆಕೆಗೆ ಇಬ್ಬರು ಮಕ್ಕಳಿದ್ದು, ಆಕೆಯ ಫಿಟ್ ನೆಸ್ ನೋಡಿದರೇ ಆಕೆಯನ್ನು ಇಬ್ಬರು ಮಕ್ಕಳ ತಾಯಿ ಎನ್ನಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ.

Most Popular

To Top