Film News

ಶಾರುಖ್ ಪುತ್ರ ಆರ್ಯನ್ ಹಾಗೂ ಬಾಲಿವುಡ್ ನಟಿ ನೋರಾ ಫತೇಹಿ ಡೇಟಿಂಗ್, ಸ್ಟಾರ್ ಕಿಡ ಲವ್ ಸ್ಟೋರಿ ಇದೀಗ ವೈರಲ್…!

ಬಾಲಿವುಡ್ ನಲ್ಲಿ ಇತ್ತೀಚಿಗೆ ತಮಗಿಂತ ವಯಸ್ಸಿನಲ್ಲಿ ದೊಡ್ಡವರ ಜೊತೆಗೆ ಲವ್, ಡೇಟಿಂಗ್, ಮದುವೆ ಹೆಚ್ಚಾಗಿ ನಡೆಯುತ್ತಿವೆ. ಕತ್ರಿನಾ ಕೈಫ್ ವಿಕ್ಕಿ, ಮಲೈಕಾ ಅರೋರಾ ಅರ್ಜುನ್ ಕಪೂರ್‍ ರವರಂತಹ ಅನೇಕ ಜೋಡಿಗಳು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಇದೀಗ ಮತ್ತೊಂದು ಜೋಡಿ ಈ ಸಾಲಿಗೆ ಸೇರಿಸಿಕೊಳ್ಳುತ್ತಿದೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ತನಗಿಂತ 5ವರ್ಷ ದೊಡ್ಡವಳಾದ ನೋರಾ ಫತೇಹಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರಂತೆ. ಸದ್ಯ ಈ ಸುದ್ದಿ ಬಿ ಟೌನ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸಿನಿರಂಗದಲ್ಲಿ ಸಾಮಾನ್ಯವಾಗಿ ಲವ್, ಬ್ರೇಕಪ್, ಡೇಟಿಂಗ್, ಮದುವೆ ವಿಚಾರಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಬಾಲಿವುಡ್ ಸ್ಟಾರ್‍ ಕಿಡ್ ಆರ್ಯನ್ ಖಾನ್ ಹಾಗೂ ಬಾಲಿವುಡ್ ನ ಖ್ಯಾತ ನಟಿ ಕಂ ಡ್ಯಾನ್ಸರ್‍ ನೋರಾ ಫತೇಹಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರಂತೆ. ಆರ್ಯನ್ ಖಾನ್ ಗೆ 25 ವರ್ಷ ವಯಸ್ಸಾಗಿದ್ದು, ನೋರಾಗೆ 30 ವರ್ಷ ವಯಸ್ಸಾಗಿದೆ. ಇನ್ನೂ ಇವರಿಬ್ಬರ ಡೇಟಿಂಗ್ ವಿಚಾರ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದಾಡುತ್ತಿವೆ. ಇಷ್ಟೆಲ್ಲಾ ಸುದ್ದಿ ಹರಡಲು ಕಾರಣ ಸಹ ಇತ್ತೀಚಿಗೆ ಅವರಿಬ್ಬರ ಪೊಟೋ ಎನ್ನಲಾಗುತ್ತಿದೆ.

ಇನ್ನೂ ಶಾರುಖ್ ಪುತ್ರ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಸಹ ಹೊಂದಿದ್ದಾರೆ. ಇನ್ನೂ ಆರ್ಯನ್ ಖಾನ್ ಪೊಟೋಗಳೂ ಸಹ ಆಗಾಗ ಹರಿದಾಡುತ್ತಲೇ ಇರುತ್ತದೆ. ಆರ್ಯನ್ ಖಾನ್ ಹೊಸವರ್ಷವನ್ನು ದುಬೈನಲ್ಲಿ ಆಚರಿಸಿಕೊಂಡಿದ್ದಾರೆ. ಆರ್ಯನ್ ಜೊತೆಗೆ ಸುಹಾನಾ ಖಾನ್ ಹಾಗೂ ಸ್ಟಾರ್‍ ನಿರ್ಮಾಪಕ ಕರಣ್ ಜೋಹರ್‍ ಸಹ ಇದ್ದಾರೆ. ಇವರ ಜೊತೆಗೆ ನೋರಾ ಫತೇಹಿ ಸಹ ಸೇರಿಕೊಂಡಿದ್ದಾರೆ. ಈ ವೇಳೆ ನೋರಾ ಹಾಗೂ ಆರ್ಯನ್ ಇಬ್ಬರ ಪೊಟೋಗಳು ಹೊರಬಂದಿದ್ದು, ಈ ಕಾರಣದಿಂದಾಗಿ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿದೆ. ಆದರೆ ಇಬ್ಬರೂ ಬೇರೆಯಾಗಿ ಪೊಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಎರಡೂ ಪೊಟೋಗಳು ಒಂದೇ ಸ್ಥಳದಲ್ಲಿ ತೆಗೆಯಲಾಗಿದೆ ಎಂಬುದನ್ನು ಗಮನಿಸಿದ ಕೆಲವರು ಅವರಿಬ್ಬರ ಪೊಟೋಗಳನ್ನು ಸೇರಿಸಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ಅವರಿಬ್ಬರ ನಡುವಣ ಡೇಟಿಂಗ್ ರೂಮರ್‍ ಗೆ ಕೆಲವರು ಪುಷ್ಟಿ ನೀಡುವಂತೆ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೆ ಕೆಲವರು ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಒಂದು ಪೊಟೋ ತೆಗೆಸಿಕೊಂಡ ಮಾತ್ರಕ್ಕೆ ಅವರ ನಡುವೆ ಅಫೈರ್‍ ಇದೆ ಎಂದು ಹೇಳುವುದು ತಪ್ಪು ಎಂದು ಸುಳ್ಳು ವದಂತಿಗಳ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಇನ್ನೂ ಆರ್ಯನ್ ಖಾನ್ ಶೀಘ್ರದಲ್ಲೇ ನಿರ್ದೇಶಕನಾಗಿ ಸಿನೆಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top