Film News

ತನ್ನನ್ನು ವೀಕ್ ಎಂದು ಟ್ರೋಲ್ ಮಾಡಿದವರನ್ನು ಮುಟ್ಟಿ ನೋಡಿಕೊಳ್ಳುವಂತಹ ಕೌಂಟರ್ ಕೊಟ್ಟ ಸಮಂತಾ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇತ್ತೀಚಿಗಷ್ಟೆ ಮಯೋಸೈಟೀಸ್ ಎಂಬ ಕಾಯಿಲೆಗೆ ತುತ್ತಾದ ವಿಚಾರ ತಿಳಿದೇ ಇದೆ.  ಆಕೆ ಈ ವಿಚಾರವನ್ನು ಹೊರಹಾಕಿದ ಬಳಿಕ ಆಕೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುವುದರ ಜೊತೆಗೆ ಆಕೆಗೆ ಅನೇಕ ಸ್ಟಾರ್‍ ಗಳು ಧೈರ್ಯ ತುಂಬುವ ಕೆಲಸ ಮಾಡಿದರು. ಇನ್ನೂ ಆಕೆ ಮಯೋಸೈಟೀಸ್ ಕಾರಣದಿಂದ ಸಣ್ಣ ಆಗಿದ್ದು, ಕೆಲವರು ಆಕೆಯನ್ನು ಟ್ರೋಲ್ ಸಹ ಮಾಡಿದ್ದರು, ಇದೀಗ ಆಕೆ ಟ್ರೋಲರ್‍ ಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಕೌಂಟರ್‍ ಕೊಟ್ಟಿದ್ದಾರೆ.

ನಟಿ ಸಮಂತಾ ಸುಮಾರು ದಿನಗಳಿಂದ ಮಯೋಸೈಟಿಸ್ ವ್ಯಾಧಿಯಿಂದ ಬಳಲುತ್ತಿದ್ದಾರೆ. ಈ ವ್ಯಾಧಿಯಿಂದ ಹೊರಬರಲು ಆಕೆ ತುಂಬಾನೆ ಕಷ್ಟಪಡುತ್ತಿದ್ದಾರೆ. ಈ ಹಿಂದೆ ಆಕೆ ನಾಗಚೈತನ್ಯರೊಂದಿಗೆ ವಿಚ್ಚೇದನ ಪಡೆದುಕೊಂಡು ತುಂಬಾ ಮಾನಸಿಕವಾಗಿ ನೋವು ಪಟ್ಟಿದ್ದರು. ಆ ನೋವಿನಿಂದ ಹೊರಬಂದ ಕೆಲವೇ ದಿನಗಳಲ್ಲಿ ಇದೀಗ ಮಯೋಸೈಟೀಸ್ ಗೆ ಗುರಿಯಾಗಿದ್ದು, ಏಟಿನ ಮೇಲೇ ಏಟುಗಳು ಆಕೆಗೆ ಬೀಳುತ್ತಿದೆ. ಇನ್ನೂ ಈ ವ್ಯಾಧಿಯಿಂದ ಆಕೆ ಹೊರಬರಲು ತುಂಬಾನೆ ಹೋರಾಟ ಮಾಡುತ್ತಿದ್ದಾರೆ. ಏಕಾಂಗಿಯಾಗಿ ಹೋರಾಡಿ ಇನ್ನೇನು ಆ ವ್ಯಾಧಿಯಿಂದ ಹೊರಬರುತ್ತಿದ್ದಾರೆ. ಸದ್ಯ ಸಮಂತ ತನ್ನ ಮೊದಲಿನ ಜೀವನಕ್ಕೆ ಹಂತ ಹಂತವಾಗಿ ತೆರಳುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಒಂದು ಮಿಡಿಯಾ ಸಂಸ್ಥೆ ಸಮಂತಾ ವೀಕ್ ಆಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು. ಗ್ಲಾಮರ್‍, ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು.

ಇನ್ನೂ ಸಮಂತಾ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನಾನು ಅನುಭವಿಸುತ್ತಿರುವ ವ್ಯಾಧಿ ನಿಮಗೆ ಬರಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ. ನನ್ನ ಮೇಲೆ ಬಂದಂತಹ ವಿಮರ್ಶೆಗಳನ್ನು ನಾನು ಸವಾಲು ಎಂಬಂತೆ ತೆಗೆದುಕೊಂಡು ತಾನು ಏನು ಎಂಬುದನ್ನು ತೋರಿಸುತ್ತಿದ್ದಾರೆ. ಇನ್ನೂ ನಾನು ವೀಕ್ ಅಲ್ಲ ಎಂಬುದನ್ನು ನಿರೂಪಿಸುವ ನಿಟ್ಟಿನಲ್ಲಿ ಜಿಮ್ ನಲ್ಲಿ ಆಕೆ ವರ್ಕೌಟ್ ಮಾಡುತ್ತಾ ಬಲಿಷ್ಟವಾದ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ನಾನು ಅಷ್ಟೊಂದು ಸುಲಭವಲ್ಲ ಎಂಬಂತೆ ಫಿಟ್ ನೆಸ್ ಟ್ರೈನರ್‍ ಜುನೈದ್ ತೆಗೆದ ಪೊಟೋ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ನಟಿ ಯಶೋಧ ಮಯೋಸೈಟಿಸ್ ನಡುವೆಯೇ ಯಶೋಧ ಸಿನೆಮಾದ ಪ್ರಮೋಷನ್ ನಲ್ಲೂ ಸಹ ಭಾಗಿಯಾಗಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಫೆ.17 ರಂದು ಆಕೆ ಅಭಿನಯದ ಶಾಕುಂತಲಂ ಸಿನೆಮಾ ಸಹ ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ಗುಣಶೇಖರ್‍ ಹಾಗೂ ದಿಲ್ ರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲೂ ಸಹ ಸಮಂತಾ ಭಾಗಿಯಾಗುತ್ತಿದ್ದಾರೆ.

Most Popular

To Top