ಶೀಘ್ರದಲ್ಲೇ ಮಂಚು ಮನೋಜ್ ಎರಡನೇ ಮದುವೆ, ಜ.20 ರಂದು ಸ್ಪೇಷಲ್ ನ್ಯೂಸ್ ನೀಡುವುದಾಗಿ ಟ್ವೀಟ್…!

Follow Us :

ತೆಲುಗಿನ ಮಂಚು ಕುಟುಂಬದ ಖ್ಯಾತ ನಟ ಮಂಚು ಮನೋಜ್ ಕಳೆದೆರಡು ವರ್ಷಗಳ ಹಿಂದೆಯಷ್ಟೆ ಪ್ರಣತಿ ಯೊಂದಿಗೆ ವಿಚ್ಚೇದನ ಪಡೆದುಕೊಂಡರು. ಕಳೆದ 2019 ರಲ್ಲಿ ವಿಚ್ಚೇದನ ಪಡೆದುಕೊಂಡ ಮನೋಜ್ ಮೂರು ವರ್ಷಗಳಿಂದ ಸಿಂಗಲ್ ಆಗಿಯೇ ಇದ್ದಾರೆ. ರಾಜಕಾರಣಿ ಭೂಮಾ ನಾಗಿರೆಡ್ಡಿ ಎಂಬುವವರ ಎರಡನೇ ಪುತ್ರಿ ಭೂಮಾ ಮೌನಿಕ ರೆಡ್ಡಿ ಯವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ಮನೋಜ್ ಜ.20 ರಂದು ಸ್ಪೇಷಲ್ ನ್ಯೂಸ್ ನೀಡುವುದಾಗಿ ತಿಳಿಸಿದ್ದು, ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸುಮಾರು ದಿನಗಳಿಂದ ಮಂಚು ಮನೋಜ್ ಹಾಗೂ ಭೂಮಾ ಮೌನಿಕಾರೆಡ್ಡಿ ಮದುವೆಯಾಗಲಿದ್ದಾರೆ, ಇಬ್ಬರೂ ಈಗಾಗಲೇ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಕಳೆದ ಗಣೇಶ ಚರ್ತುಥಿಯಂದು ಇಬ್ಬರೂ ಜಂಟಿಯಾಗಿ ಗಣೇಶನ ಉತ್ಸವದಲ್ಲಿ ಭಾಗಿಯಾಗಿದ್ದು ಅವರ ಅಫೈರ್‍ ರೂಮರ್‍ ಗೆ ಮತಷ್ಟು ಬಲ ಬಂದಿತ್ತು. ಅಲ್ಲಿಂದ ಅವರಿಬ್ಬರ ನಡುವೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡತ್ತಲೇ ಇತ್ತು. ಕೆಲವು ದಿನಗಳ ಹಿಂದೆ ಕೂಡ ನಟ ಮನೋಜ್ ಶೀಘ್ರದಲ್ಲೆ ಹೊಸ ಸಿನೆಮಾದ ಘೋಷಣೆ ಮಾಡುವುದಾಗಿ ಹಾಗೂ ಹೊಸ ಜೀವನ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಇದೀಗ ಮನೋಜ್ ಮತ್ತೊಂದು ಟ್ವೀಟ್ ಮಾಡಿದ್ದು, ಟ್ವೀಟ್ ಮೂಲಕ ಸ್ಪೇಷಲ್ ನ್ಯೂಸ್ ನೀಡುವುದಾಗಿ ತಿಳಿಸಿದ್ದಾರೆ. ಸದ್ಯ ಆತನ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಜ.20 ರಂದು ಸ್ಪೇಷಲ್ ನ್ಯೂಸ್ ನೀಡುವುದಾಗಿ ಟ್ವಿಟರ್‍ ಮೂಲಕ ಸುದ್ದಿ ಹಂಚಿಕೊಂಡಿದ್ದಾರೆ. ಇನ್ನೂ ಈ ಟ್ವೀಟ್ ಎರಡನೇ ಮದುವೆಯನ್ನು ಉದ್ದೇಶಿಸಿ ಮಾಡಿರುವುದಾಗಿ ಅನೇಕರು ಭಾವಿಸುತ್ತಿದ್ದಾರೆ. ಜೊತೆಗೆ ಕೆಲವೊಂದು ಮಾಹಿತಿಗಳ ಪ್ರಕಾರ ಮಂಚು ಮನೋಜ್ ಹಾಗೂ ಭೂಮಾ ಮೌನಿಕಾ ರೆಡ್ಡಿ ರವರ ಮದುವೆಗೆ ಮೂಹೂರ್ತ ಸಹ ಫಿಕ್ಸ್ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಮನೋಜ್ ಟ್ವೀಟ್ ಬಳಿಕ ಫೆಬ್ರವರಿ ಮಾಹೆಯಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಈ ಹಾದಿಯಲ್ಲೇ ಜ.20 ರಂದು ಮದುವೆ ಸುದ್ದಿಯನ್ನು ಅಧಿಕಾರಯುತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅನೇಕ ನೆಟ್ಟಿಗರೂ ಸಹ ಆತನ ಪೋಸ್ಟ್ ಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಮನೋಜ್ ಗೆ ಅಭಿನಂದನೆಗಳನ್ನೂ ಸಹ ಹೇಳುತ್ತಿದ್ದಾರೆ.

ಇನ್ನೂ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿಯವರಿಗೆ ಈ ಹಿಂದೆ ಬೇರೆ ಬೇರೆ ಮದುವೆಯಾಗಿತ್ತು. ಆದರೆ ಮೌನಿಕಾ ಸಹ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದಾರೆ. ಅದೇ ರೀತಿ ಮನೋಜ್ ಸಹ ವಿಚ್ಚೇಧನ ಪಡೆದುಕೊಂಡಿದ್ದಾರೆ. ಇಬ್ಬರೂ ಸಹ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಫೆಬ್ರವರಿ ಮಾಹೆಯ ಮೊದಲನೇ ವಾರದಲ್ಲೇ ಈ ಜೋಡಿಯ ಮದುವೆ ಸಹ ನಡೆಯಲಿದೆ ಎನ್ನಲಾಗುತ್ತಿದೆ. ಇಬ್ಬರೂ ಹೈದರಾಬಾದ್ ನಲ್ಲಿಯೇ ಸೆಟಲ್ ಆಗಲು ನಿರ್ಣಯಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮನೋಜ್ ಮಾಡಿರುವ ಪೋಸ್ಟ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.