ಡಸ್ಕಿ ಬ್ಯೂಟಿ ಅಮಲಾಪಾಲ್ ಗೆ ಅವಮಾನ, ದೇವಾಲಯಕ್ಕೆ ಪ್ರವೇಶ ನಿರಾಕರಿಸಿದ ಪೂಜಾರಿಗಳು, ಆಕ್ರೋಷ ಹೊರಹಾಕಿದ ಅಮಲಾ…!

Follow Us :

ಸೌತ್ ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕ್ರೇಜ್ ಸಂಪಾಧಿಸಿಕೊಂಡಿರುವ ನಟಿ ಅಮಲಾಪಾಲ್ ಗೆ ತೀವ್ರ ಅವಮಾನವಾಗಿದೆ. ದೇವಾಲಯದೊಳಗೆ ಪ್ರವೇಶ ನೀಡದೇ ಆಕೆಯನ್ನು ಅವಮಾನಿಸಲಾಗಿದೆಯಂತೆ. ದೇವಾಲಯದೊಳಗೆ ಪ್ರವೇಶಿಸಲು ದೇವಾಲಯದ ಅರ್ಚಕರು ಅಡ್ಡಿಪಡಿಸಿದ್ದಾರೆ. ಈ ಘಟನೆಯ ವಿರುದ್ದ ನಟಿ ಅಮಲಾಪಾಲ್ ತೀವ್ರವಾಗಿ ಆಕ್ರೋಷ ಹೊರಹಾಕಿದ್ದಾರೆ. ಅಷ್ಟಕ್ಕೂ ಆಕೆಗೆ ಎದುರಾದ ಈ ಘಟನೆ ವಿಚಾರಕ್ಕೆ ಬಂದರೇ,

ನಟಿ ಅಮಲಾಪಾಲ್ ಕೇರಳದ ಎರ್ನಾಕುಲಂನಲ್ಲಿರುವ ತಿರುವರಿಕುಲಂ ಮಹಾದೇವ್ ಎಂಬ ದೇವಾಲಯಕ್ಕೆ ತೆರಳಿದ್ದಾರೆ. ಈ ಸಮಯದಲ್ಲಿ ದೇವಾಲಯದ ಒಳಗೆ ಅಮಲಾ ಪಾಲ್ ಗೆ ಪ್ರವೇಶವನ್ನು ನಿರಾಕರಿಸಿದ್ದಾರೆ. ಮಹಾದೇವ ದೇವಾಲಯದಲ್ಲಿ ಕೇವಲ ಹಿಂದೂ ಧರ್ಮಿಯರಿಗೆ ಮಾತ್ರ ಅವಕಾಶವಿದೆ. ಇತರೆ ಧರ್ಮಿಯರಿಗೆ ಪ್ರವೇಶ ನೀಡುವುದಿಲ್ಲ ಎಂದು ಅಲ್ಲಿನ ಆಡಳಿತ ಮಂಡಳಿಯವರು ಆಕೆಗೆ ತಿಳಿಸಿದ್ದಾರೆ. ಅಷ್ಟಕ್ಕೂ ಬೇಕು ಎಂದರೇ ದೇವಾಲಯದ ಮುಂಭಾಗದಲ್ಲಿರುವ ದೇವಿಯನ್ನು ದರ್ಶನ ಮಾಡಿಕೊಂಡು ವಾಪಸ್ಸು ಹೋಗಬೇಕೆಂದು ಸೂಚನೆ ನೀಡಿದ್ದಾರೆ. ಇನ್ನೂ ಈ ಘಟನೆಯ ಬಗ್ಗೆ ಅಮಲಾ ಪಾಲ್ ದೇವಾಲಯದ ಸಂದರ್ಶಕರ ಪುಸ್ತಕದಲ್ಲಿ ನಮೂದಿಸಿದ್ದಾರೆ.

ನಟಿ ಅಮಲಾ ಪಾಲ್ ಸಂದರ್ಶಕರಿಗೆ ಇರಿಸಿದ ಪುಸ್ತಕದಲ್ಲಿ ಘಟನೆಯ ಬಗ್ಗೆ ಬರೆದಿದ್ದಾರೆ. ದೇವತೆಯನ್ನು ನೋಡಲಿಲ್ಲ.  ಬದಲಿಗೆ ಚೈತನ್ಯವನ್ನು ಅನುಭವಿಸಿದ್ದೇನೆ. ಇಂದಿನ ಯುಗದಲ್ಲೂ ಸಹ ಧಾರ್ಮಿಕ ತಾರತಮ್ಯ ಕಾಣುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಧಾರ್ಮಿಕ ತಾರತಮ್ಯ ಶೀಘ್ರದಲ್ಲೇ ಬದಲಾಗಲಿದೆ. ಆ ಸಮಯ ಬಂದೇ ಬರುತ್ತದೇ, ಎಲ್ಲರೂ ಸಮಾನತೆಯಿಂದ ಕಾಣುತ್ತಾರೆ ವಿನಃ ಧರ್ಮದ ಆಧಾರದ ಮೇಲೆ ಅಲ್ಲ ಎಂದು ಅಮಲಾ ಪಾಲ್ ಬರೆದಿದ್ದಾರೆ. ಇನ್ನೂ ಅಮಲಾಪಾಲ್ ಗೆ ಆದಂತಹ ಈ ಘಟನೆ ಪ್ರಚಾರ ಆಗುತ್ತಿದ್ದಂತೆ ಇಡೀ ದೇಶದಾದ್ಯಂತ ಅನೇಕ ಚರ್ಚೆಗಳಿಗೆ ಕಾರಣವಾಗಿದೆ. ಅನೇಕರು ಈ ವಿಚಾರವನ್ನು ಖಂಡಿಸುತ್ತಿದ್ದಾರೆ.

ಇನ್ನೂ ಈ ಬಗ್ಗೆ ದೇವಾಲಯದ ಟ್ರಸ್ಟಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಅದರಂತೆ ವಿವಿಧ ಧರ್ಮದ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಆದರೆ ಅವರ ಧರ್ಮದ ಬಗ್ಗೆ ಯಾರಿಗೂ ತಿಳಿದಿಲ್ಲ. ಇನ್ನೂ ಸೆಲೆಬ್ರೆಟಿಗಳು ಬಂದಾಗ ಈ ರೀತಿಯ ವಿವಾದಗಳು ಎದುರಾಗುತ್ತಿರುತ್ತದೆ ಎಂದಿದ್ದಾರೆ.