ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಸಮಂತಾ, ನಿಮ್ಮ ಜೀವನ ಹೇಗಿದೆ ಎಂದ ಅಭಿಮಾನಿ?

ಸೌತ್ ಸಿನಿರಂಗದ ಬಹುಬೇಡಿಕೆ ನಟಿ ಸಮಂತಾ ಕಳೆದ ವರ್ಷ ತುಂಬಾನೆ ಸದ್ದು ಮಾಡಿದ್ದರು. ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾಮ ಹಾಡಿನ ಮೂಲಕ ಇಡೀ ದೇಶದಲ್ಲೇ ಖ್ಯಾತಿ ಪಡೆದುಕೊಂಡರು. ಬಳಿಕ ಆಕೆ ಬಿಗ್ ಬಜೆಟ್ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸಿನೆಮಾ ಆಫರ್‍ ಗಳ ಜೊತೆಗೆ ಆಕೆ ಮಯೋಸೈಟೀಸ್ ಎಂಬ ಕಾಯಿಲೆಗೂ ಸಹ ತುತ್ತಾಗಬೇಕಾಯಿತು. ಇಂದಿಗೂ ಸಹ ಆಕೆ ಮಯೋಸೈಟಿಸ್ ವ್ಯಾದಿಯಿಂದ ಬಳಲುತ್ತಿದ್ದಾರೆ. ಇನ್ನೂ ಸಮಂತಾಗೆ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ನಟಿ ಸಮಂತಾ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ವಿಚ್ಚೇದನ ಕಾರಣದಿಂದ ಆಕೆ ಟಾಕ್ ಆಫ್ ದಿ ಇಂಡಸ್ಟ್ರಿಯಾಗಿದ್ದರು. ಬಳಿಕ ಪುಷ್ಪಾ ಸಿನೆಮಾದಲ್ಲಿ ಐಟಂ ಸಾಂಗ್ ಬಳಿಕ ಆಕೆ ಕ್ರೇಜ್ ಉನ್ನತ ಶಿಖರಕ್ಕೇರಿತು ಎಂದರೇ ತಪ್ಪಾಗಲಾರದು. ಈ ಹಾಡಿನ ಬಳಿಕ ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ವಿಚ್ಚೇದನದ ಕಾರಣದಿಂದ ಆಕೆಯ ವಿರುದ್ದ ಎದುರಾದ ಟ್ರೋಲ್ ಗಳನ್ನು ಸಹ ಧೈರ್ಯವಾಗಿ ಎದುರಿಸಿ ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದರು. ಆದರೆ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಸದ್ಯ ಆಕೆ ಆ ವ್ಯಾದಿಯಿಂದ ಹೊರಬರಲು ತುಂಬಾನೆ ಹೋರಾಟ ಮಾಡುತ್ತಿದ್ದಾರೆ.

ಇನ್ನೂ ಸಮಂತಾ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ವೈಯುಕ್ತಿಕ ವಿಚಾರದ ಜೊತೆಗೆ ಸಿನೆಮಾ ಕೆರಿಯರ್‍ ಬಗ್ಗೆ ಸಹ ವಿಚಾರ ತಿಳಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೇಳೆ ಒಬ್ಬ ನೆಟ್ಟಿಗ ಮೇಡಮ್ ನಿಮ್ಮ ಜೀವನ ಹೇಗೆ ನಡೆಯುತ್ತಿದೆ ಎಂದು ಕೇಳಿದ್ದಾರೆ ಅದಕ್ಕೆ ಸಮಂತಾ ಉತ್ತರ ನೀಡುತ್ತಾ ನನ್ನ ಜೀವನ ವಿಭಿನ್ನವಾಗಿದೆ ಎಂದಿದ್ದಾರೆ. ಇದೀಗ ಸಮಂತಾ ನೀಡಿದ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚನೀಯವಾದ ಅಂಶವಾಗಿದೆ. ಆಕೆ ವಿಚ್ಚೇಧನ, ಮಯೋಸೈಟಿಸ್ ಕಾರಣದಿಂದ ಎದುರಾದ ಸಮಸ್ಯೆಗಳಿಂದ ಮೊದಲಿಗಿಂತ ವಿಭಿನ್ನವಾದ ಜೀವನ ಸಾಗಿಸುತ್ತಿರುವುದಾಗಿ ಉತ್ತರ ನೀಡಿದ್ದಾರೆ.

ಅಷ್ಟೆಅಲ್ಲದೇ ಮತ್ತೊರ್ವ ಮೇಡಂ ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ, ಶೀಘ್ರ ಗುಣಮುಖರಾಗಲಿ ಎಂದು ಪ್ರತಿನಿತ್ಯ ಪ್ರಾರ್ಥನೆ ಮಾಡುತ್ತಿದ್ದೇನೆ. ಜೊತೆಗೆ ನೀವು ಒಳ್ಳೆಯ ಸಕ್ಸಸ್ ಕಂಡುಕೊಳ್ಳಬೇಕು, ಅದೇ ಮಾದರಿಯಲ್ಲಿ ಟ್ರೋಲ್ ಗಳನ್ನು ಸಹ ಎದುರಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸ್ಯಾಮ್ ಸಹ ಉತ್ತರ ನೀಡಿದ್ದಾರೆ. ನಿಮ್ಮ ಆರ್ಶೀವಾದಗಳು, ಪ್ರಾರ್ಥನೆಗಳು ನನಗೆ ತುಂಬಾ ಅವಸರವಾಗಿದೆ. ಜೊತೆಗೆ ವಿಮರ್ಶೆ ಎಂದು ಕೇಳಿದ್ದೀರಾ ಅಲ್ವಾ ಆ ವಿಮರ್ಶೆಗಳು ಯಾವುದು ಎಂದು ಫನ್ನಿಯಾಗಿ ಉತ್ತರಿಸಿದ್ದಾರೆ. ಸಮಂತಾ ಇದೇ ರೀತಿ ಎದುರಾದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.