ಮಗುವಿಗೆ ಜನ್ಮ ನೀಡಿದ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಆಲಿಯಾ, ಮಗು ಪಡೆದಿದ್ದಕ್ಕೆ ನನಗೇನು ದುಃಖವಿಲ್ಲ ಎಂದ ಬ್ಯೂಟಿ…!

Follow Us :

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಸಾಗುತ್ತಿರುವ ಆಲಿಯಾ ಭಟ್ ಕ್ಯೂಟ್ ಹಾಗೂ ಹಾಟ್ ನೆಸ್ ಗೆ ಒಳ್ಳೆಯ ಉದಾಹರಣೆ ಎನ್ನಬಹುದಾಗಿದೆ. ಇತ್ತೀಚಿಗಷ್ಟೆ ಆಕೆ ಆರ್‍.ಆರ್‍.ಆರ್‍ ಸಿನೆಮಾದಲ್ಲಿ ನಟ ರಾಮ್ ಚರಣ್ ಗೆ ಜೋಡಿಯಾಗಿ ನಟಿಸಿದ್ದ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು ಕಳೆದ ಏಪ್ರಿಲ್ ಮಾಹೆಯಲ್ಲಿ ಆಲಿಯಾ ಭಟ್ ಪ್ರೀತಿಸಿ ಬಾಲಿವುಡ್ ನಟ ರಣಬೀರ್ ಕಪೂರ್ ರನ್ನು ಮದುವೆಯಾದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ಆಕೆ ಮಗು ಪಡೆದುಕೊಂಡ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಕಳೆದ 2022 ಏಪ್ರಿಲ್ ಮಾಹೆಯಲ್ಲಿ ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಜೊತೆಗೆ ಆಲಿಯಾ ಭಟ್ ಸಪ್ತಪದಿ ತುಳಿದರು. ಸುಮಾರು ಎರಡು ವರ್ಷಗಳ ಕಾಲ ಅವರಿಬ್ಬರೂ ಪ್ರೇಮ ಪಯಣ ಸಾಗಿಸಿ ಮದುವೆಯಾದರು. ಬ್ರಹ್ಮಾಸ್ತ್ರ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೇಮ ಹುಟ್ಟಿತ್ತು. ಇನ್ನೂ ಮದುವೆಗೂ ಮುಂಚೆಯೇ ಆಲಿಯಾ ಗರ್ಭಿಣಿಯಾಗಿದ್ದರು ಎಂದು ಅನೇಕರು ವಿಮರ್ಶೆಗಳನ್ನು ಸಹ ಮಾಡಿದ್ದರು. ಮದುವೆಯಾದ ಏಳು ತಿಂಗಳಲಲ್ಲೇ ಆಲಿಯಾ ಮಗುವಿಗೆ ಜನ್ಮ ಕೊಟ್ಟರು. ಇನ್ನೂ ಆಲಿಯಾ ತಾನು ಗರ್ಭಿಣಿ ಎಂಬ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಆದರೆ ಮದುವೆ ನಡೆದು ಎರಡು ತಿಂಗಳು ಮುಗಿಯುವುದಕ್ಕೂ ಮುಂಚೆಯೇ ಆಲಿಯಾ ಗರ್ಭಿಣಿಯಾದ ಕಾರಣದಿಂದ ಆಕೆಯನ್ನು ಟ್ರೋಲ್ ಸಹ ಮಾಡಲಾಗಿತ್ತು. ಇದೀಗ ಆಕೆ ತನ್ನ ವೈಯುಕ್ತಿಕ ಜೀವನದ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ.

ನಟಿ ಆಲಿಯಾ ತಮ್ಮ ಜೀವನದ ಬಗ್ಗೆ ಹಾಗೂ ಕೆರಿಯರ್‍ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನದಲ್ಲಿ ಸರಿ ತಪ್ಪು ಎಂಬುದು ಇರುವುದಿಲ್ಲ. ನನಗೆ ಒಳ್ಳೆಯದು ಎನ್ನಿಸಿದ್ದು, ಬೇರೆಯವರಿಗೆ ಕೆಟ್ಟದ್ದು ಎನಿಸಬಹುದು. ಆದ್ದರಿಂದ ಕೆರಿಯರ್‍ ಪರವಾಗಾದರೂ, ವೈಯುಕ್ತಕವಾಗಿ ಆದರೂ ಯಾವುದೇ ವಿಚಾರವಿರಲಿ ನನ್ನ ಮನಸ್ಸಿಗೆ ಇಷ್ಟವಾದುದ್ದನ್ನೇ ನಾನು ಮಾಡುತ್ತೇನೆ, ನಂಬುತ್ತೇನೆ. ನಟಿಯಾಗಿ ನನ್ನ ಕೆರಿಯರ್‍ ಪೀಕ್ ಲೆವೆಲ್ ನಲ್ಲಿರುವಾಗಲೇ ರಣಬೀರ್‍ ನನ್ನು ಮದುವೆಯಾದೆ, ತಾಯಿಯಾದೆ. ಮದುವೆಯಾಗಿದ್ದು, ತಾಯಿಯಾಗಿದ್ದು ನನ್ನ ಕೆರಿಯರ್‍ ಮೇಲೆ ಪ್ರತಿಕೂಲಕರ ಪರಿಣಾಮ ಬೀರುತ್ತೇ ಎಂದು ಯಾರು ಹೇಳಿದ್ದರು. ಒಂದು ವೇಳೆ ನನ್ನ ಕೆರಿಯರ್‍ ಗೆ ಅದು ಪೆಟ್ಟು ಕೊಟ್ಟರೇ ಏನು ಪರವಾಗಿಲ್ಲ. ಅದು ನನ್ನ ಬ್ಯಾಡ್ ಲಕ್ ಎಂದುಕೊಳ್ಳುತ್ತೇನೆ ಎಂದಿದ್ದಾರೆ.

ಅಷ್ಟೇಅಲ್ಲದೇ ನನ್ನ ಕೆರಿಯರ್‍ ಸಕ್ಸಸ್ ಪುಲ್ ಆಗಿ ಸಾಗುತ್ತಿರುವ ಸಮಯದಲ್ಲಿ ಮಗು ಪಡೆದುಕೊಂಡ ಬಗ್ಗೆ ನಾನು ದುಃಖ ಪಡುವುದಿಲ್ಲ. ಜೀವನದಲ್ಲಿ ತಾಯಿಯಾಗುವುದು ಅತ್ಯಂತ ದೊಡ್ಡ ವಿಚಾರ. ಏನೇ ನಡೆದರೂ, ಎಂತಹುದೇ ಬದಲಾವಣೆ ಬಂದರೂ ಸಹ ನಾನು ಅದನ್ನು ಸಹಜವಾಗಿಯೇ ಸ್ವೀಕರಿಸುತ್ತೇನೆ ಎಂದಿದ್ದಾರೆ. ಇನ್ನೂ ಆಲಿಯಾಗೆ ಮದುವೆಯಾಗಿದೆ, ಮಗು ಆಗಿದೆ ಆದ ಕಾರಣದಿಂದ ಆಕೆಗೆ ಸಿನೆಮಾ ಆಫರ್‍ ಗಳು ಬರುವುದಿಲ್ಲ ಎಂದು ಹುಟ್ಟಿಕೊಂಡ ವಿಮರ್ಶೆಗಳಿಗೆ ಆಲಿಯ ಈ ರೀತಿಯಾಗಿ ಕೌಂಟರ್‍ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.