News

ಸರ್ಕಾರದ ಅನುದಾನದ ಹಣಕ್ಕಾಗಿ ಸಹೋದರನ್ನ ಮದುವೆಯಾದ ಯುವತಿ, ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ…..!

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ತುಂಬಾನೆ ಗೌರವವಿದೆ. ಆದರೆ ಕೆಲವೊಮ್ಮೆ ಈ ಸಂಪ್ರದಾಯಕ್ಕೆ ಕೆಟ್ಟ ಹೆಸರು ಬರುವಂತಹ ಕೆಲಸಗಳು ಸಹ ನಡೆಯುತ್ತಿರುತ್ತದೆ. ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮುಖ್ಯಮಂತ್ರಿ ವಿವಾಹ ಯೋಜನೆಯಲ್ಲಿ ಯುವತಿಯೊಬ್ಬಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸ್ವಂತ ಅಣ್ಣನನ್ನೆ ಮದುವೆಯಾಗಿರುವ ದೊಡ್ಡ ವಂಚನೆ ಬಹಿರಂಗವಾಗಿದೆ.

ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಯೋಜನೆಯಡಿ ಮದುವೆಯಾದ ಜೋಡಿಗೆ ಗೃಹೋಪಯೋಗಿ ವಸ್ತುಗಳು ಹಾಗೂ ಅನುದಾನ ನೀಡಲಾಗುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಸಹೋದರ-ಸಹೋದರಿಯೇ ಮದುವೆಯಾಗಿದ್ದಾರೆ.  ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅವರಿಬ್ಬರ ವಿರುದ್ದ ಕ್ರಮ ತೆಗೆದುಕೊಂಡಿದೆ. ಜೊತೆಗೆ ಗ್ರಾಮ ಪಂಚಾಯತಿ ಅಧಿಕಾರಿಯನ್ನು ಡಿಡಿಒ ಅಮಾನತ್ತುಗೊಳಿಸಿದ್ದಾರೆ. ವಧು-ವರರ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಎಂ.ಎನ್.ಆರ್‍.ಇ.ಜಿ.ಎ ತಾಂತ್ರಿಕ ಸಹಾಯಕರನ್ನು ಅಮಾನತ್ತುಗೊಳಿಸಲಾಗಿದೆ. ಜೊತೆಗೆ ಸಹೋದರ ಹಾಗೂ ಸಹೋದರಿಯ ವಿರುದ್ದ ಪ್ರಕರಣ ದಾಖಲಾಗಿದೆ. ಮದುವೆಯಲ್ಲಿ ನೀಡಿದ್ದ ಗೃಹೋಪಯೋಗಿ ವಸ್ತುಗಳುನ್ನು ವಾಪಸ್ಸು ಪಡೆದುಕೊಂಡು, 35 ಸಾವಿರ ಅನುದಾನ ನೀಡುವುದನ್ನು ನಿಲ್ಲಿಸಬೇಕೆಂದು ಶಿಫಾರಸ್ಸು ಸಹ ಮಾಡಲಾಗಿದೆ.

ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಲಕ್ಷ್ಮೀಪುರ ಬ್ಲಾಕ್ ನಲ್ಲಿ ಮಾರ್ಚ್-5 ರಂದು 38 ಜೋಡಿಗಳ ವಿವಾಹ ನಡೆದಿದೆ. ಈ ಸಾಮೂಹಿಕ ವಿವಾಹಗಳಲ್ಲಿ ಲಕ್ಷ್ಮೀಪುರ ವ್ಯಾಪ್ತಿಯ ಹಳ್ಳಿಯೊಂದರ ಹುಡುಗಿ ಸಹ ನೊಂದಾಯಿಸಿಕೊಂಡಿದ್ದಳು. ಆದರೆ ಆ ಯುವತಿಗೆ ಈಗಾಗಲೇ  ಮದುವೆಯಾಗಿದ್ದು, ಪತಿ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದ ಎನ್ನಲಾಗಿದೆ. ಆದರೂ ಕೆಲ ಮಧ್ಯವರ್ತಿಗಳು ಆಕೆಯನ್ನು ಮತ್ತೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ ಮಧ್ಯವರ್ತಿಗಳು ಸಿದ್ದಪಡಿಸಿದ್ದ ಹುಡುಗ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಗೆ ಆಕೆಯ ಸಹೋದರನಿಗೆ ಮದುವೆ ಮಾಡಿಸಿದ್ದಾರೆ ಮಧ್ಯವರ್ತಿಗಳು.

Most Popular

To Top