Film News

ಜೀಸಸ್ ಸಹ ವೈನ್ ಕುಡಿಯುತ್ತಿದ್ದರು ಎಂದ ನಟಿ ವಿಜಯ್ ಆಂಟೋನಿ, ನಟನ ಹೇಳಿಕೆಗೆ ತೀವ್ರ ವಿರೋಧ…..!

ತೆಲುಗು ಹಾಗೂ ತಮಿಳು ಸಿನಿರಸಿಕರಿಗೆ ಬಿಚ್ಚಗಾಡು ಸಿನೆಮಾ ಇಂದಿಗೂ ಸಹ ತುಂಬಾನೆ ಇಷ್ಟವಾದ ಸಿನೆಮಾ ಎಂದು ಹೇಳಬಹುದು. ಈ ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡ ವಿಜಯ್ ಆಂಟೋನಿಗೆ ಒಳ್ಳೆಯ ಫೇಮ್ ತಂದುಕೊಟ್ಟಿತ್ತು. ಈ ಸಿನೆಮಾಗಿಂತಲೂ ಮುಂಚೆ ವಿಜಯ್ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆತ ಎಲ್ಲರ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದು, ಬಿಚ್ಚಗಾಡು ಸಿನೆಮಾದ ಮೂಲಕ ಎಂದರೇ ತಪ್ಪಾಗಲಾರದು. ಇದೀಗ ಜೀಸಸ್ ಮದ್ಯ ಸೇವನೆ ಮಾಡುತ್ತಿದ್ದರು ಎಂದು ವಿಜಯ್ ಹೇಳಿದ್ದು, ಆತನ ಹೇಳಿಕೆಗಳಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸೋಷಿಯಲ್ ಮಿಡಿಯಾ ಮೂಲಕ ಕ್ಷಮೆ ಸಹ ಕೇಳಿದ್ದಾರೆ.

ನಟ ವಿಜಯ್ ಆಂಟೋನಿ ಬಿಚ್ಚಗಾಡು ಸಿನೆಮಾದ ಮೂಲಕ ಫೇಮ್ ದಕ್ಕಿಸಿಕೊಂಡ ನಟನಾಗಿದ್ದಾನೆ. ಸೈಲೆಂಟ್ ಆಗಿ ಬಿಚ್ಚಗಾಡು ಸಿನೆಮಾದ ಮೂಲಕ ಸೆನ್ಷೇಷನಲ್ ಹಿಟ್ ತಮ್ಮ ತೆಕ್ಕೆಗೆ ಹಾಕಿಕೊಂಡರು. ಈ ಸಿನೆಮಾದ ಬಳಿಕ ಒಳ್ಳೆಯ ಕ್ರೇಜ್ ಅನ್ನು ಸಹ ವಿಜಯ್ ಸಂಪಾದಿಸಿಕೊಂಡರು. ಬಿಚ್ಚಗಾಡು ಸಿನೆಮಾದ ಬಳಿಕವೇ ಆತನ ಸಿನೆಮಾಗಳಿಗೂ ಸಹ ಕ್ರೇಜ್ ಬಂತು. ಅವರ ಮುಂದಿನ ರೊಮೀಯೋ ಸಿನೆಮಾದ ಪ್ರೆಸ್ ಮೀಟ್ ನಲ್ಲಿ ಮದ್ಯ ಸೇವನೆ ಹಾಗೂ ಅದರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದರು. ಈ ಸಮಯದಲ್ಲೇ ಆತ ಜೀಸಸ್ ಸಹ ಮದ್ಯ ಸೇವನೆ ಮಾಡುತ್ತಿದ್ದರು ಎಂದು ಹೇಳಿದ್ದರು. ವಿಜಯ್ ಆಂಟೋನಿ ನೀಡಿದ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಹೇಳಿಕೆಯ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಕ್ಷಮೆ ಕೇಳಿದ್ದಾರೆ. ಜೊತೆಗೆ ಆ ಹೇಳಿಕೆ ಯಾವ ಅರ್ಥದಲ್ಲಿ ನೀಡಿದ್ದು ಎಂಬ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.

ಇನ್ನೂ ತಾನು ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯ್ ಆಂಟೋನಿ, ನನ್ನ ಹೇಳಿಕೆಯನ್ನು ತಪ್ಪು ಅರ್ಥದಲ್ಲಿ ಅರ್ಥೈಸಿಕೊಳ್ಳಲಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಹಿನ್ನೆಲೆಯಲ್ಲಿ ಕೆಲವರಿಗೆ ಬೇಸರವಾಗಿದೆ. ತಪ್ಪಾದ ಅರ್ಥದಲ್ಲಿ ಯಾವುದನ್ನೂ ನಾನು ಹೇಳಿಲ್ಲ. ದಯವಿಟ್ಟು ಯಾವುದನ್ನೂ ತಪ್ಪಾಗಿ ತಿಳಿದುಕೊಳ್ಳಬೇಡಿ. ನಾನು ಕನಸಲ್ಲೂ ಸಹ ಓರ್ವ ವ್ಯಕ್ತಿಯ ಬಗ್ಗೆ ತಪ್ಪಾಗಿ ಹೇಳೋಲ್ಲ. ಅದರಲ್ಲೂ ಜನರಿಗಾಗಿ ಪ್ರಾಣ ತ್ಯಾಗ ಮಾಡಿದ ಜೀಸಸ್ ಬಗ್ಗೆ ಈ ರೀತಿಯ ಮಾತು ಹೇಳುವುದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಮದುವೆ ದಿನ ರಾತ್ರಿ ಮದ್ಯ ಸೇವನೆ ಮಾಡುವ ಮಾದರಿಯ ಪೋಸ್ಟ್ ರೊಮಿಯೋ ಚಿತ್ರತಂಡ ರಿಲೀಸ್ ಮಾಡಿತ್ತು. ಈ ಕುರಿತು ಅವರಿಗೆ ಕೆಲವೊಂದು ಪ್ರಶ್ನೆಗಳು ಎದುರಾಗಿದ್ದವು.

ಈ ಸಮಯದಲ್ಲಿ ಜೀಸಸ್ ರವರನ್ನು ಉಲ್ಲೇಖಿಸಿದ್ದರು. ಮದ್ಯ ಎಂಬುದು  ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯೂ ಸಹ ಕುಡಿಯುತ್ತಾಳೆ. ನಾನು ಮದ್ಯ ಸೇವನೆಯನ್ನು ಪ್ರಮೋಟ್ ಮಾಡುತ್ತಿಲ್ಲ. ಒಂದೊಮ್ಮೆ ಕುಡಿಯೋದು ತಪ್ಪು ಎಂದು ಹೇಳುವುದಾದರೇ ಅದನ್ನು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಹೇಳಬೇಕು. ಜೀಸಸ್ ಸಹ ಮದ್ಯಸೇವನೆ ಮಾಡುತ್ತಿದ್ದರು ಎಂದು ಹೇಳಿದ್ದರು.

Most Popular

To Top