Film News

ಪ್ರೀತಿ ಜಿಂಟಾ ಕಾರಣದಿಂದ ನನ್ನ ಸಂಸಾರ ಹಾಳಾಯ್ತು, ಆಕೆಯನ್ನು ನಾನು ಕ್ಷಮಿಸೋಲ್ಲ ಎಂದ ಸಿಂಗರ್ ಸುಚಿತ್ರಾ….!

ಖ್ಯಾತ ಸಿಂಗರ್‍ ಸುಚಿತ್ರಾ ಕೃಷ್ಣಮೂರ್ತಿ ಸ್ಟಾರ್‍ ನಟಿ ಪ್ರೀತಿ ಜಿಂಟಾ ವಿರುದ್ದ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ವಯಸ್ಸಿನಲ್ಲಿ ತನಗಿಂತ ಮೂವತ್ತು ವರ್ಷ ದೊಡ್ಡವನಾದ ಶೇಖರ್‍ ಕಪೂರ್‍ ಎಂಬಾತನನ್ನು ಮದುವೆಯಾಗಿ ಸಂಚಲನವನ್ನು ಸೃಷ್ಟಿಸಿದ್ದರು ಸುಚಿತ್ರ ಕೃಷ್ಣಮೂರ್ತಿ. ಪತಿಯ ಕೋರಿಕೆಯಂತೆ ಆಕೆ ಸಿನೆಮಾಗಳಿಂದಲೂ ದೂರವಾದರು. ಆದರೆ ಕೆಲವೊಂದು ಕಾರಣಗಳಿಂದ ಅವರಿಬ್ಬರು ಬೇರೆಯಾದರು. ಅವರಿಬ್ಬರಿಗೂ ಒಂದು ಮಗುವಾದ ಬಳಿಕ 2007 ರಲ್ಲಿ ಬೇರೆಯಾದರು. ಇದೀಗ ಪ್ರೀತಿ ಜಿಂಟಾ ರವರ ಕಾರಣದಿಂದಲೇ ತಮ್ಮ ಸಂಸಾರ ಹಾಳಾಯ್ತು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ ಸುಚಿತ್ರಾ.

ಕಳೆದ 1999 ರಲ್ಲಿ ಸುಚಿತ್ರಾ ಕೃಷ್ಣಮೂರ್ತಿ ತನಗಿಂತ ಮೂವತ್ತು ವರ್ಷ ವಯಸ್ಸಿನ ಶೇಖರ್‍ ಕಪೂರ್‍ ಎಂಬಾತನೊಂದಿಗೆ ವಿವಾಹವಾದರು. ಅಂದು ಈ ಸುದ್ದಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಬಳಿಕ ಕೆಲವೊಂದು ಕಾರಣಗಳಿಂದ ಅವರು ವಿಚ್ಚೇದನ ಪಡೆದುಕೊಂಡರು. ಶೇಖರ್‍ ಕಪೂರ್‍ ತನ್ನೊಂದಿಗೆ ಪ್ರಾಮಾಣಿಕವಾಗಿ ಇಲ್ಲ. ಆತನ ಪ್ರೀತಿಯಲ್ಲಿ ನಿಜ ಇಲ್ಲ ಎಂದು ಸುಚಿತ್ರಾ ಗಂಭೀರವಾದ ಆರೋಪಗಳನ್ನು ಸಹ ಮಾಡಿದ್ದರು. ಜೊತೆಗೆ ತಮ್ಮ ವಿಚ್ಚೇದನಕ್ಕೆ ಮುಖ್ಯ ಕಾರಣ ಪ್ರೀತಿ ಜಿಂಟಾ, ನಮ್ಮ ದಂಪತಿಗಳ ನಡುವೆ ಆಕೆ ಬೆಂಕಿ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೀತಿ ಜಿಂಟಾ ಸಹ ರಿಯಾಕ್ಟ್ ಆಗಿದ್ದರು. ನಾನು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಘಿದ್ದೇನೆ. ಸುಚಿತ್ರ ಕನಿಷ್ಟ ಕಾಣಿಸುತ್ತಿಲ್ಲ. ಆಕೆ ಗೃಹಿಣಿಯಾಗಿ ಮನೆಗೆ ಸೀಮಿತವಾಗಿದ್ದಾರೆ. ಆಕೆಗೆ ನನ್ನ ಬಗ್ಗೆ ಮಾತನಾಡುವ ಅರ್ಹತೆ ಸಹ ಇಲ್ಲ. ಆಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ವೈದ್ಯರನ್ನು ಭೇಟಿಯಾದರೇ ಉತ್ತಮ ಎಂದು ಕೌಂಟರ್‍ ಕೊಟ್ಟಿದ್ದರು.

ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಸುಚಿತ್ರಾ ಈ ಮಾತಿನ ಯುದ್ದದ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನಾನು ಆಕೆಯ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಈ ಪ್ರಪಂಚದಲ್ಲಿ ಯಾರು ಯಾರ ಬಗ್ಗೆಯಾದರೂ ಮಾತನಾಡಬಹುದು. ಗೃಹಿಣಿಯಾಗಿ ಇದಿದ್ದಕ್ಕೆ ನಾನು ತುಂಬಾ ಗರ್ವ ಪಡುತ್ತೇನೆ. ಇಪ್ಪತ್ತು ವರ್ಷ ತಾಯಿಯಾಗಿದಿದ್ದಕ್ಕೆ ನಾನು ತುಂಬಾ ಸಂತೋಷ ಪಡುತ್ತಿದ್ದೇನೆ. ಯಾರು ಏನು ಮಾತನಾಡಿದರೂ ಸತ್ಯಕ್ಕೆ ಬಲ ಇರುತ್ತದೆ. ಅದೆ ಕೊನೆಯವರೆಗೂ ನಿಲ್ಲುತ್ತದೆ. ಆಕೆಯನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಆದರೆ ಆಕೆ ಇದ್ದಾಳಾ ಇಲ್ಲವೇ ಎಂಬ ವಿಚಾರವನ್ನು ನಾನು ಹಿಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.  ಇದೀಗ ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಸುಚಿತ್ರಾ ಕೃಷ್ಣಮೂರ್ತಿ ಅನೇಕ ಸಿನೆಮಾಗಳ ಮೂಲಕ ಫೇಂ ಸಂಪಾದಿಸಿಕೊಂಡಿದ್ದಾರೆ. ಆಕೆಯ ಖಾತೆಯಲ್ಲಿ ಶಿವರಂಜನಿ, ಕಭಿ ಹೋ ಕಭಿ ನಾ ಜಜ್ ಬಾತ್ ಆಗ್, ರೊಮಿಯೋ ಅಕ್ಬರ್‍ ವಾಲ್ಟರ್‍, ಭೂಲ್ ಭುಲಯ್ಯ-2, ಗಿಲ್ಟಿ ಮೈಂಡ್ಸ್ ವೆಬ್ ಸಿರೀಸ್ ಮೊದಲಾದ ಹಿಟ್ ಸಿನೆಮಾಗಳಿವೆ.

Most Popular

To Top