Film News

ಸ್ಟಾರ್ ನಿರ್ದೇಶಕ ಅನುರಾಗ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟಿ ಅಮೃತಾ ಸುಭಾಷ್, ನಿಮ್ಮ ಪಿರಿಯಡ್ಸ್ ಯಾವಾಗ ಎಂದು ಕೇಳಿದ್ರಂತೆ….!

ಬಾಲಿವುಡ್ ಸಿನಿರಂಗದಲ್ಲಿ ಆಗಾಗ ನಿರ್ದೇಶಕರು ನಿರ್ಮಾಪಕರ ಬಗ್ಗೆ ಕೆಲವೊಂದು ಕಾಮೆಂಟ್ ಗಳು ಕೇಳಿಬರುತ್ತಲೇ ಇರುತ್ತವೆ. ಇದೀಗ ಬಾಲಿವುಡ್ ಸ್ಟಾರ್‍ ನಿರ್ದೇಶಕ ಅನುರಾಗ್ ಕಶ್ಯಪ್ ಬಗ್ಗೆ ಖ್ಯಾತ ನಟಿ ಅಮೃತಾ ಸುಭಾಷ್ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಗೆ ನಿನ್ನ ಪಿರಿಯಡ್ಸ್ ಯಾವಾಗ ಎಂದು ಕೇಳಿದ್ರಂತೆ ಅನುರಾಗ್ ಕಶ್ಯಪ್. ಅಷ್ಟಕ್ಕೂ ನಟಿ ಅಮೃತಾ ಅನುರಾಗ್ ಬಗ್ಗೆ ನಗೆಟೀವ್ ಆಗಿ ಕಾಮೆಂಟ್ ಮಾತಾಡಿದ್ರಾ ಅಥವಾ ಪಾಸಿಟೀವ್ ಆಗಿ ಮಾತಾಡಿದ್ರಾ ಎಂಬ ವಿಚಾರಕ್ಕೆ ಬಂದರೇ,

ಬಣ್ಣದ ಲೋಕದಲ್ಲಿ ನಟಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರಿಗೆ ಕೆಟ್ಟದ್ದು, ಒಳ್ಳೆಯದು ಎರಡೂ ಸಮನಾಗಿರುತ್ತದೆ. ಅವರಿಗೆ ಒಮ್ಮೆ ಒಳ್ಳೇಯದು ಆದರೇ, ಕೆಲವೊಮ್ಮೆ ಕೆಟ್ಟದಾಗುತ್ತದೆ. ಕೆಲವು ನಿರ್ದೇಶಕರು ಅಥವಾ ನಿರ್ಮಾಪಕರು ಹಿರೋಯಿನ್ ಗಳಿಗೆ ಕಿರಿಕಿರಿ ಕೊಡಬಹುದು ಅಥವಾ ಚೆನ್ನಾಗಿ ನೋಡಿಕೊಳ್ಳಬಹುದು. ಈ ಎಲ್ಲಾ ವಿಚಾರಗಳನ್ನು ಕೆಲವೊಮ್ಮೆ ನಟಿಯರು ಈ ವಿಚಾರವನ್ನು ಹೊರಹಾಕುತ್ತಿರುತ್ತಾರೆ. ಈ ಹಾದಿಯಲ್ಲೇ ನಟಿ ಅಮೃತಾ ಸುಭಾಷ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆ ಸೀಕ್ರೇಟ್ ಗೇಮ್ಸ್-2 ಸಿನೆಮಾದಲ್ಲಿ ನಟಿಸುವಾಗ ನಡೆದಂತಹ ಒಂದು ಘಟನೆಯ ಬಗ್ಗೆ ಮಾತನಾಡಿದ್ದಾರೆ.

ನಟಿ ಅಮೃತಾ ಸುಭಾಷ್ ಮಾತನಾಡುತ್ತಾ ನಾನು ಸೀಕ್ರೇಟ್ ಗೇಮ್ಸ್-2 ಸಿನೆಮಾದಲ್ಲಿ ಶೃಂಗಾರ ದೃಶ್ಯವೊಂದರಲ್ಲಿ ನಟಿಸಬೇಕಿತ್ತು. ಆ ಸೀನ್ ಮಾಡುವುದಕ್ಕೂ ಮುಂಚೆ ನಿರ್ದೇಶಕ ಅನುರಾಗ್ ಕಶ್ಯಪ್ ನನಗೆ ಶಾಕಿಂಗ್ ಪ್ರಶ್ನೆಯೊಂದನ್ನು ಕೇಳಿದ್ದರು. ನಾನು ಆ ಪ್ರಶ್ನೆ ಕೇಳಿ ಒಂದು ಕ್ಷಣ ತಟಸ್ಥವಾಗಿಬಿಟ್ಟೆ. ಆತ ಬಂದು ನಿನ್ನ ಪಿರಿಯಡ್ಸ್ ಡೇಟ್ ಯಾವಾಗ ಎಂದು ಕೇಳಿದರು. ಕೆಲ ಸಮಯ ನನ್ನ ಮೈಂಡ್ ಬ್ಲಾಕ್ ಆಗಿತ್ತು. ಸುಮಾರು ಸಮಯ ನನಗೆ ಅರ್ಥವೇ ಆಗಲಿಲ್ಲ. ಬಳಿಕ ಕೂಡಲೇ ಅನುರಾಗ್ ರವರೇ ನಿನ್ನ ಡೇಟ್ ಯಾವಾಗ ಗೊತ್ತಾದರೇ ಇಂಟಿಮೇಟ್ ಸೀನ್ಸ್ ಮಾಡಲು ಶೂಟ್ಸ್  ಮಾಡಲು ಅನುಕೂಲವಾಗುತ್ತದೆ. ಇಲ್ಲದೇ ಇದ್ದರೇ ನಿನಗೆ ಸಮಸ್ಯೆಯಾಗುತ್ತದೆ ಎಂದು ಅನುರಾಗ್ ಹೇಳಿದ್ದರಂತೆ.

ಅಷ್ಟೇಅಲ್ಲದೇ ಕೂಡಲೇ ನಿದೇರ್ಶಕ ಟೀಂ ಜೊತೆಗೆ ಮಾತಾಡಿ ಕೆಲವೊಂದು ಬದಲಾವಣೆಗಳನ್ನು ಸಹ ಮಾಡಿದರು. ಇನ್ನೂ ಈ ರೀತಿಯಾಗಿ ಹಿರೋಯಿನ್ ಗಳ ಸಮಸ್ಯೆಗಳ ಬಗ್ಗೆ ಆಲೋಚಿಸುವಂತಹ ನಿರ್ದೇಶಕರು ಕಡಿಮೆ ಮಂದಿ ಇರುತ್ತಾರೆ. ಅನುರಾಗ್ ಕಶ್ಯಪ್ ತುಂಬಾ ಸಜ್ಜನ ವ್ಯಕ್ತಿ ಎಂದು ಅನುರಾಗ್ ರವರನ್ನು ಮನಸಾರೆ ಹಾಡಿ ಹೊಗಳಿದ್ದಾರೆ. ಇನ್ನೂ ಅಮೃತಾ ಸುಭಾಷ್ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top