ಮತ್ತೇ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸಿಂಗರ್ ಚಿನ್ಮಯಿ, ಬ್ಲೌಜ್ ಹಾಕದೇ ಇರುವುದೂ ನಮ್ಮ ಸಂಸ್ಕೃತಿ ಎಂದ ಸಿಂಗರ್……!

Follow Us :

ಸೌತ್ ಸಿನಿರಂಗದಲ್ಲಿ ಮಲ್ಟಿ ಟ್ಯಾಲೆಂಟೆಡ್ ಸಿಂಗರ್‍ ಚಿನ್ಮಯಿ ಶ್ರೀಪಾದ ರವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ ಎಂದು ಹೇಳಬಹುದಾಗಿದೆ. ಸಮಂತಾ ಸೇರಿದಂತೆ ಅನೇಕ ಸ್ಟಾರ್‍ ನಟಿಯರೊಂದಿಗೆ ವಾಯ್ಸ್ ಡಬ್ಬಿಂಗ್ ಮಾಡಿ ತುಂಭಾ ಫೇಂ ಸಂಪಾದಿಸಿಕೊಂಡಿದ್ದಾರೆ.  ಸಿನೆಮಾಗಳ ವಿಚಾರ ಪಕ್ಕಕ್ಕಿಟ್ಟರೇ ಆಕೆ ಅನೇಕ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಆಕೆ ಮಹಿಳೆಯರ ಸಮಸ್ಯೆಗಳ ಬಗ್ಗೆ ನೇರ ಹಾಗೂ ನಿಷ್ಟೂರವಾಗಿ ಮಾತನಾಡುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ವರ್ಜಿನಿಟಿ ಬಗ್ಗೆ ಮಾತನಾಡಿ ಸಂಚಲನ ಸೃಷ್ಟಿ ಮಾಡಿದ್ದರು ಇದೀಗ ಮತ್ತೊಮ್ಮೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸಿಂಗರ್‍ ಚಿನ್ಮಯಿ ಮಹಿಳೆಯರ ವಸ್ತ್ರಗಳೂ, ಇಂಡಿಯನ್ ಕಲ್ಚರ್‍ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕರು ಮಹಿಳೆಯರ ವಸ್ತ್ರಗಳ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಒಬ್ಬರು ಹುಡುಗಿಯರು ಚುನ್ನಿ ಹಾಕಿಕೋಳ್ಳುತ್ತಿಲ್ಲ, ಚುನ್ನಿ ಹಾಕಿಕೊಂಡರೇ ಸರ್ಕಾರ ಅವರಿಗೆ ಫೈನ್ ಹಾಕುತ್ತಾರೆನೋ, ಅದಕ್ಕಾಗಿ ಚುನ್ನಿ ಹಾಕಿಕೊಳ್ಳುವುದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಸಿಂಗರ್‍ ಚಿನ್ಮಯಿ ಶಾಕಿಂಗ್ ಕೌಂಟರ್‍ ಕೊಟ್ಟಿದ್ದಾರೆ. ರವಿಂದ್ರನಾಥ್ ಠಾಗೂರ್‍ ಅಣ್ಣ ಹಾಗೂ ಸತ್ಯೇಂದ್ರನಾಥ್ ಠಾಗೂರ್‍ ಪತ್ನಿ ಜ್ಞಾನ ನಂದಿನಿ ಹೆಂಗಸರು ಬ್ಲೌಜ್ ಹಾಕಿಕೊಳ್ಳುವ ಸಂಪ್ರದಾಯವನ್ನು ಪರಿಚಯಿಸಿದರು. ಅದರ ಬಳಿಕ ಪೆಟ್ಟಿಕೊಟ್ ಪದ್ದತಿ ಬಂತು. ಅಲ್ಲಿಯವರೆಗೂ ನೀವು ನೋಡುತ್ತಿರುವ ಸೀರೆಗಳು ಇದ್ದವು ವಿನಃ ಬ್ಲೌಜ್ ಹಾಕಿಕೊಳ್ಳುತ್ತಿರುತ್ತಿರಲಿಲ್ಲ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸೀರೆಯನ್ನೇ ಮಹಿಳೆಯರು ಜಾಕೆಟ್ ನಂತೆ ಬಳಸುತ್ತಿದ್ದರು. ಪೆಟ್ಟಿಕೋಟ್, ಬ್ವೌಜ್ ಎಂಬುದು ಹಿಂದಿನಿಂದ ಬಂದ ಪದ್ದತಿಯಲ್ಲ. ಇಂಡಿಯನ್ ಕಲ್ಚರ್‍ ನಿನಗೆ ತಿಳಿಯದೇ. ಚುನ್ನಿ ಹಾಕಿಕೊಳ್ಳುವುದಿಲ್ಲ, ಅದು ಇದು ಹೇಳುತ್ತೀರಾ ವಾಮಿಟ್ ಆಗುವಂತಹ ಐಡಿಯಾಗಳು ಕೊಡುವ ಮುಂಚೆ ನಮ್ಮ ದೇಶದ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳಿ, ನೀವು ಸಹ ಪಂಚೆ ದೋತಿಗಳನ್ನು ಬಳಸಿ ಅದೇ ಅಲ್ಲವೇ ನಮ್ಮ ಸಂಪ್ರದಾಯ, ಪ್ಯಾಂಟ್ ಶರ್ಟ್ ಧರಿಸುವುದಾದರೂ ಏಕೆ ಎಂದು ಚಿನ್ಮಯಿ ಪ್ರಶ್ನೆ ಮಾಡಿದ್ದಾರೆ. ಇನ್ನೂ ಬ್ಲೌಜ್ ಎಂಬುದು ನಮ್ಮ ದೇಶದ ಕಲ್ಚರ್‍ ಅಲ್ಲ, ಇಂಗ್ಲೇಡ್ ಕಲ್ಚರ್‍. ನಮ್ಮ ದೇಶದ ಕಲ್ಚರ್‍ ಎಂದಿಗೂ ಒಬ್ಬರಿಗೆ ಸಮಸ್ಯೆ ಆಗುವುದಿಲ್ಲ. ಬಹಿರಂಗ ಪ್ರದೇಶದಲ್ಲಿ ಮಹಿಳೆಯರು ಮಕ್ಕಳಿಗೆ ಹಾಲು ಕೊಡುತ್ತಾರೆ. ಒಪೆನ್ ಬ್ರೆಸ್ಟ್ ಎಂಬುದು ಸಮಸ್ಯೆಯೇ ಅಲ್ಲ. ಆ ಬ್ರಿಟೀಷರ ಕಾರಣದಿಂದ ಈ ಬ್ಲೌಜ್ ಕಲ್ಚರ್‍ ಬಂದಿದೆ ಎಂದಿದ್ದಾರೆ.

ಇನ್ನೂ ಜಾಕೆಟ್ ಹಾಕುವುದು ನಮ್ಮ ಕಲ್ಚರ್‍ ಅಲ್ಲ. ನಿಮಗೆ ಬೇಕಿದ್ದರೇ ಗೂಗಲ್ ನಲ್ಲಿ ಹುಡುಕಿ ತಿಳಿದುಕೊಳ್ಳಿ. ದೇವಾಲಯದ ಮೇಲಿರುವ ಶಿಲೆಗಳಿಗೂ ಸಹ ಬಟ್ಟೆಗಳು ಇರುವುದಿಲ್ಲ. ಕಣ್ಣು ತೆರೆದು ನಮ್ಮ ಕಲ್ಚರ್‍ ಏನು ಎಂಬುದನ್ನು ತಿಳಿದುಕೊಳ್ಳಿ. ಪ್ರತಿಯೊಂದನ್ನು ಕಾಮದ ದೃಷ್ಟಿಯಿಂದ ನೋಡಬೇಡಿ ಎಂದು ಆಕೆ ಸ್ಟ್ರಾಂಗ್ ಕೌಂಟರ್‍ ಕೊಡುವುದರ ಜೊತೆಗೆ ಕೆಲವೊಂದು ಪೊಟೋಗಳನ್ನು ಸಹ ಆಕೆ ಶೇರ್‍ ಮಾಡಿದ್ದಾರೆ.