Film News

ನೀವು ಮನೆ ನೋಡಿಕೊಳ್ಳಿ, ಆಕೆಗೆ ಸಿನೆಮಾ ಮಾಡಲು ಬಿಡಿ ಎಂದು ಅಭಿಷೇಕ್ ಬಚ್ಚನ್ ಗೆ ನೆಟ್ಟಿಗರ ಸಲಹೆ……!

ಸಿನಿರಂಗದಲ್ಲಿ ಸೆಲೆಬ್ರೆಟಿಗಳು ಎಷ್ಟು ಫೇಮಸ್ ಆಗಿರುತ್ತಾರೋ ಅಷ್ಟೇ ಟ್ರೋಲ್ ಸಹ ಆಗುತ್ತಿರುತ್ತಾರೆ. ಅನೇಕರು ಸಿನೆಮಾ ಸೆಲಬ್ರೆಟಿಗಳ ಬಗ್ಗೆ ವಿವಿಧ ಕಾರಣಗಳಿಗೆ ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಬಾಲಿವುಡ್ ಸ್ಟಾರ್‍ ನಟ ಅಭಿಷೇಕ್ ಬಚ್ಚನ್ ರವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ನೀವು ಮನೆ ನೋಡಿಕೊಳ್ಳಿ, ಐಶ್ವರ್ಯರವರನ್ನು ಸಿನೆಮಾ ಮಾಡಲು ಬಿಡಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಮಾಜಿ ವಿಶ್ವ ಸುಂದರಿ ಸ್ಟಾರ್‍ ನಟಿ ಐಶ್ವರ್ಯ ರೈ ಇತ್ತಿಚಿಗಷ್ಟೆ ಪೊನ್ನಿಯನ್ ಸೆಲ್ವನ್-2 ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಐಶ್ವರ್ಯ ನಟನೆಗೆ ಒಳ್ಳೆಯ ಮಾರ್ಕ್ಸ್ ಬಂದಿದೆ. ಸೌತ್ ಸ್ಟಾರ್‍ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿ ಬಂದ ಈ ಸಿನೆಮಾ ಏ.28 ರಂದು ತೆರೆಗೆ ಬಂದಿದೆ. ಈ ಸಿನೆಮಾದಲ್ಲಿ ದೊಡ್ಡ ತಾರಬಳಗವೇ ಇದೆ. ವಿಕ್ರಂ, ಜಯಂ ರವಿ, ಕಾರ್ತಿ, ತ್ರಿಷಾ, ಶೋಭಿತಾ ಸೇರಿದಂತೆ ಅನೇಕ ಸ್ಟಾರ್‍ ಕಲಾವಿದರು ಈ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಐಶ್ವರ್ಯ ರೈ ಅಭಿನಯಕ್ಕೆ ಒಳ್ಳೆಯ ಸ್ಪಂದನೆ ಲಭಿಸಿದೆ. ಇದೀಗ ಈ ಸಿನೆಮಾ ನೋಡಿದ ಅನೇಕರು ಆಕೆಯನ್ನು ಹೊಗಳಿದ್ದಾರೆ. ಇನ್ನೂ ಆಕೆಯ ಪತಿ ಅಭಿಷೇಕ್ ಬಚ್ಚನ್ ಸಹ  ಹೆಂಡತಿಯ ಅಭಿನಯವನ್ನು ಮನಸಾರೆ ಹೊಗಳಿದ್ದಾರೆ. ಪೊನ್ನಿಯನ್ ಸೆಲ್ವನ್-2 ಸಿನೆಮಾ ಸೂಪರ್‍ ಎಂದಿದ್ದಾರೆ. ಐಶ್ವರ್ಯ ನಟನಗೆಯನ್ನು ಹೊಗಳುತ್ತಾ ಟ್ವೀಟ್ ಸಹ ಮಾಡಿದ್ದಾರೆ.

ಇನ್ನೂ ಐಶ್ವರ್ಯ ನಟನೆಯ ಜೊತೆಗೆ ವಿಕ್ರಂ, ಜಯಂ ರವಿ, ತ್ರಿಷಾ ರವರೊಂದಿಗೆ ಇರುವ ಫ್ಯಾಮಿಲಿ ಪೊಟೋ ಸಹ ಶೇರ್‍ ಮಾಡಿದ್ದಾರೆ. ಇಲ್ಲಿಯವರೆಗೂ ಐಶ್ವರ್ಯ ಮಾಡಿದ ಸಿನೆಮಾಗಳ ಪೈಕಿ ಪೊನ್ನಿಯನ್ ಸೆಲ್ವನ್-2 ಸಿನೆಮಾ ಈಸ್ ದಿ ಬೆಸ್ಟ್ ಎಂದಿದ್ದಾರೆ. ಇನ್ನು ಅಭಿಷೇಕ್ ಮಾಡಿದ ಈ ಟ್ವೀಟ್ ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ  ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನೇಕರು ಅವರಿಗೆ ಕೌಂಟರ್‍ ಗಳನ್ನು, ಟ್ರೋಲ್ಸ್ ಮಾಡುತ್ತದಿದಾರೆ. ಐಶ್ವರ್ಯ ರೈ ಇದೇ ಮಾದರಿಯಲ್ಲಿ ಸಿನೆಮಾ ಮಾಡುತ್ತಿರುತ್ತಾರೆ, ನೀವು ಆಕೆಗೆ ಬೆಂಬಲ ನೀಡಿ, ನೀವು ಮನೆಯಲ್ಲಿದ್ದು, ಆರಾಧ್ಯರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕೌಂಟರ್‍ ಕೊಡುತ್ತಿದ್ದಾರೆ.

ಇನ್ನೂ ನೆಟ್ಟಿಗರು ಐಶ್ವರ್ಯ ರೈ ರವರಿಗೆ ಸಿನೆಮಾಗಳನ್ನು ಮಾಡಲು ಸಪೋರ್ಟ್ ಮಾಡಬೇಕೆಂಬ ಅರ್ಥದಲ್ಲಿ ಕಾಮೆಂಟ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಭಿಷೇಕ್ ಬಚ್ಚನ್ ಕೈಯಲ್ಲಿ ದೊಡ್ಡ ಸಿನೆಮಾಗಳಲ್ಲಿದ ಕಾರಣ ಆಕೆ ಸಿನಿ ರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ. ಆಗಾಗ ಸಣ್ಣಪುಟ್ಟ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆದ ಕಾರಣ ಅಭಿಷೇಕ್ ಮನೆಯಲ್ಲೇ ಇದ್ದುಕೊಂಡು ಮಗಳನ್ನು ನೋಡಿಕೊಳ್ಳಿ, ಐಶ್ವರ್ಯ ಸಿನೆಮಾಗಳನ್ನು ಮಾಡುತ್ತಾರೆ ಎಂದು ಕೌಂಟರ್‍ ಕೊಟ್ಟಿದ್ದು, ಇದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್  ಆಗುತ್ತಿವೆ.

Most Popular

To Top