ನಾನು ಕಷ್ಟದಲ್ಲಿದ್ದಾಗ ಧೈರ್ಯ ತುಂಬಿದ್ದು ಸಮಂತಾ, ಮೀಟೂ ಪ್ರಕರಣದ ಸಮಯದ ಕೆಟ್ಟ ಅನುಭವ ಹಂಚಿಕೊಂಡ ಸಿಂಗ್ ಚಿನ್ಮಯಿ…!

Follow Us :

ಸೌತ್ ಸಿನಿರಂಗದಲ್ಲಿ ಬೆಸ್ಟ್ ಸ್ನೇಹಿತರಾಗಿದ್ದವರಲ್ಲಿ ಸಮಂತಾ ಹಾಗೂ ಚಿನ್ಮಯಿ ಸಹ ಒಬ್ಬರಾಗಿದ್ದಾರೆ. ಸಮಂತಾ ರವರ ಅನೇಕ ಸಿನೆಮಾಗಳಿಗೆ ಕಂಠ ನೀಡಿದ್ದು ಇದೇ ಚಿನ್ಮಯಿ. ಸಮಂತಾ ಸ್ಟಾರ್‍ ನಟಿಯಾಗಿದ್ದರೇ, ಚಿನ್ಮಯಿ ಗಾಯಕಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸಮಂತಾ ರವರಿಗೆ ನೀಡಿದ ಕ್ಯೂಟ್ ವಾಯ್ಸ್ ಇದೇ ಚಿನ್ಮಯಿಯವರದ್ದು. ಆದರೆ ಇತ್ತಿಚಿಗೆ ಸಮಂತಾ ರವರೇ ತಮ್ಮ ಸಿನೆಮಾಗಳಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ. ಇದೀಗ ಸಮಂತಾ ರವರ ಬಗ್ಗೆ ಚಿನ್ಮಯಿ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಸಮಂತಾ ಹಾಗೂ ಚಿನ್ಮಯಿ ಇಬ್ಬರೂ ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಚೇದನದಿಂದ ಮಾನಸಿಕ ಹಿಂಸೆ ಅನುಭವಿಸಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಆರೋಗ್ಯ ಸಮಸ್ಯೆಗಳಿಂದ ಸಹ ಬಳಲಿದ್ದಾರೆ. ಇದೀಗ ಸಮಂತಾ ಎಲ್ಲವನ್ನೂ ಮೆಟ್ಟಿನಿಂತು ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಇನ್ನೂ ಅದೇ ರೀತಿ ಚಿನ್ಮಯಿ ಸಹ ಮಿಟೂ ಉದ್ಯಮದ ಸಮಯದಲ್ಲಿ ಸೀನಿಯರ್‍ ಲೇಖಕ ವೈರಮುತ್ತು ಮೇಲೆ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದರು. ಈ ವಿವಾದಗಳ ಬಗ್ಗೆ ಕೆಲವರು ಚಿನ್ಮಯಿಗೂ ಸಪೋರ್ಟ್ ಮಾಡಿದ್ದರು. ಆದರೆ ತಮಿಳು ಸಿನಿರಂಗದಲ್ಲಿ ಹೆಚ್ಚಿನ ಮಂದಿ ವೈರಮುತ್ತು ರವರಿಗೆ ಸಪೋರ್ಟ್ ಮಾಡಿದ್ದರು. ಜೊತೆಗೆ ಚಿನ್ಮಯಿಯವರನ್ನು ಬ್ಯಾನ್ ಸಹ ಮಾಡಿದ್ದರು.

ಇನ್ನೂ ಚಿನ್ಮಯಿ ಸಹ ಆ ಸಮಯದಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಅಂದು ಚಿನ್ಮಯಿ ಅನುಭವಿಸಿದ್ದ ಸಮಸ್ಯೆಗಳ ಬಗ್ಗೆ ಇದೀಗ ನೆನಪಿಸಿಕೊಂಡು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಚಿನ್ಮಯಿ ನಾನು ಕಷ್ಟದಲ್ಲಿದ್ದಾಗ ನನಗೆ ಸಪೋರ್ಟ್ ಮಾಡಿದ್ದು, ಧೈರ್ಯ ತುಂಬಿದ್ದು, ಸಮಂತಾ. ಆಕೆ ನೀಡಿದ ಧೈರ್ಯ ನಾನು ಎಂದಿಗೂ ಮರೆಯುವುದಿಲ್ಲ. ಮಿಟೂ ಸಮಯದಲ್ಲಿ ನಾನು ಕೆಲಸ ಕಳೆದುಕೊಂಡೆ ಆದರೆ ಸಮಂತಾ ನನಗೆ ಕೆಲಸ ಕೊಟ್ಟರು. ನನಗೂ ಎಲ್ಲಾ ಸಮಯದಲ್ಲೂ ಸಹಾಯ ಮಾಡಿದ್ದು, ಸಪೋರ್ಟ್ ಮಾಡಿದ್ದು ಮಾತ್ರ ಸಮಂತಾ ಎಂದು ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನೂ ಚಿನ್ಮಯಿ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಮಂತಾ ಅಭಿನಯದ ಮೊದಲ ಸಿನೆಮಾ ಏ ಮಾಯ ಚೆಸಾವೇ ಸಿನೆಮಾದದಲ್ಲಿ ಸಮಂತಾಗೆ ಧ್ವನಿ ಕೊಟ್ಟಿದ್ದು ಚಿನ್ಮಯಿ. ಆದರೆ ಇತ್ತಿಚಿಗೆ ಸಮಂತಾ ಹಾಗೂ ಚಿನ್ಮಯಿ ನಡುವೆ ವಿಬೇದಗಳು ಉಂಟಾಗಿದೆ ಎಂಬ ಸುದ್ದಿ ಸಹ ಹರಿದಾಡಿತ್ತು.  ಆದರೆ ಸಮಂತಾ ಹಾಗೂ ಚಿನ್ಮಯಿ ಇತ್ತೀಚಿಗೆ ಗೌರವಯುತವಾಗಿ ಟ್ವೀಟ್ ಸಹ ಮಾಡಿಕೊಂಡಿದ್ದಾರೆ. ಸದ್ಯ ಸಮಂತಾ ಮಯೋಸೈಟೀಸ್ ಎಂಬ ವ್ಯಾದಿಯಿಂದ ಹೊರಬಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಭಿನಯದ ಶಾಕುಂತಲಂ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸದ್ಯ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ.