Film News

ಹೃತಿಕ್ ರೋಷನ್ ಹಾಗೂ ಸಭಾ ಆಜಾದ್ ಮದುವೆ ಇದೇ ವರ್ಷದಲ್ಲಿ ನಡೆಯಲಿದೆ…!

ಬಾಲಿವುಡ್ ನಲ್ಲಿ ಖ್ಯಾತ ಸ್ಟಾರ್‍ ನಟ ಹೃತಿಕ್ ರೋಷನ್ ತಮ್ಮ ಹೊಸ ಪ್ರೇಯಸಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯ ಬಾಲಿವುಡ್ ವಲಯದಲ್ಲಿ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಮುಂಬೈ ಬಾಂದ್ರಾ ಎಂಬಲ್ಲಿ ಮೊದಲ ಬಾರಿ ಕಾಣಿಸಿಕೊಂಡಾಗ ಅವರ ರಿಲೇಷನ್ ಶಿಪ್ ಕುರಿತಂತೆ ದೊಡ್ಡ ದೊಡ್ಡ ರೂಮರ್‍ ಗಳೂ ಸಹ ಹುಟ್ಟಿಕೊಂಡವು. ಇನ್ನೂ ಇತ್ತೀಚಿಗಷ್ಟೆ ವಿಮಾನ ನಿಲ್ದಾಣದಲ್ಲಿ ಕಿಸ್ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಸದ್ಯ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸುಮಾರು ದಿನಗಳಿಂದ ಹೃತಿಕ್ ಹಾಗೂ ಸಭಾ ಅಫೈರ್‍ ನಡೆಯುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡದೇ ಇದ್ದರೂ ಸಹ ಅವರು ಸುತ್ತಾಡುವುದನ್ನು ನೋಡಿದರೇ ಅವರು ರಿಲೇಷನ್ ಶಿಪ್ ನಲ್ಲಿರುವುದು ಖಚಿತವಾಗುತ್ತದೆ. ಅನೇಕ ಬಾರಿ ಹೋಟೆಲ್ ಗಳ ಬಳಿ, ವೆಕೇಷನ್ ಗಳ ಬಳಿ ಇಬ್ಬರೂ ಕೈ ಕೈ ಹಿಡಿದುಕೊಂಡು ಬಂದಂತಹ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಈ ಜೋಡಿಯ ಬಗ್ಗೆ ಮತ್ತೊಂದು ಸುದ್ದಿ ಸಹ ವೈರಲ್ ಆಗುತ್ತಿದೆ. ಇದೇ ವರ್ಷದಲ್ಲಿ ಹೃತಿಕ್ ಹಾಗೂ ಸಭಾ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ನವೆಂಬರ್‍ 2023 ರಲ್ಲಿ ಹೃತಿಕ್ ಸಭಾ ರವರನ್ನು ಮದುವೆಯಾಗಲಿದ್ದಾರೆ ಎಂಬ ಟ್ವೀಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

2023 ರ ನವೆಂಬರ್‍ ಮಾಹೆಯಲ್ಲಿ ಹೃತಿಕ್ ಹಾಗೂ ಸಭಾ ಮದುವೆ ನಡೆಯಲಿದೆ ಎಂಬ ಟ್ಟೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್‌ ಸೃಷ್ಟಿಸಿದೆ. ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಮಾತ್ರ ಇಲ್ಲ. ಆದರೆ ಈ ಸುದ್ದಿ ಮಾತ್ರ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಬಗ್ಗೆ ಹೃತಿಕ್ ಆಗಲಿ ಅಥವಾ ಸಭಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕಾರಣದಿಂದ ಈ ಸುದ್ದಿ ನಿಜವೇ ಇರಬಹುದು ಎಂಬ ಅನುಮಾನಗಳನ್ನು ಸಹ ಅನೇಕರು ವ್ಯಕ್ತಪಡಿಸಿದ್ದಾರೆ. ಇನ್ನೂ ಹೃತಿಕ್ ಕುಟುಂಬದೊಂದಿಗೆ ಸಬಾ ಈಗಾಗಲೇ ಬೆರತು ಹೋಗಿದ್ದಾರೆ. ಹೃತಿಕ್ ಇಬ್ಬರೂ ಮಕ್ಕಳ ಜೊತೆಗೆ ಸಭಾ ಸಹ ಒಳ್ಳೆಯ ಅನುಬಂಧ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಲೇ ಅವರ ಮದುವೆಗೆ ಯಾವುದೇ ಅಡ್ಡಿಯಿಲ್ಲ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ಸಭಾ ಹಾಗೂ ಹೃತಿಕ್ ರೋಷನ್ ಈ ಹಿಂದೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್‍ ಹುಟ್ಟುಹಬ್ಬದ ಸಮಯದಲ್ಲಿ ಜೋಡಿಯಾಗಿ ಬಂದಿದ್ದರು. ಅಲ್ಲಿಂದ ಅವರು ರಿಲೇಷನ್ ಶಿಪ್ ನಲ್ಲಿರುವುದು ಪಕ್ಕಾ ಆಗಿದೆ. ಇನ್ನೂ ಹೃತಿಕ್ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ.

Most Popular

To Top