ಕಲಾವಿದರ ಜೀವನ ಅಷ್ಟೊಂದು ಸುಖವಾಗಿರಲ್ಲ. ಊಟ ಇಲ್ಲದೇ ಪರದಾಡುತ್ತಿದ್ದೇವೆ ಎಂದ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್…!

ಬಾಲಿವುಡ್ ಯಂಗ್ ನಟ ರೊಮ್ಯಾಂಟಿಕ್ ಹಿರೋ ರಣಬೀರ್‍ ಕಪೂರ್‍ ಯೂತ್ ನಲ್ಲಿ ಹೆಚ್ಚು ಕ್ರೇಜ್ ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಲವರ್‍ ಭಾಯ್ ಆಗಿ ಅನೇಕ ಯುವತಿಯರ ಕ್ರಷ್ ಆಗಿದ್ದಾರೆ. ಜೊತೆಗೆ ನಟನಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸ್ಟಾರ್‍ ಡಮ್ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಬ್ರಹ್ಮಾಸ್ತ್ರ ಸಿನೆಮಾದಲ್ಲೂ ಸಹ ರಣಬೀರ್‍ ಕಪೂರ್‍ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಅವರಿಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಇದೀಗ ಕಲಾವಿದರ ಬಗ್ಗೆ ರಣಬೀರ್‍ ಕಪೂರ್‍ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ನಟ ರಣಬೀರ್‍ ಕಪೂರ್‍ ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ. ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಆಗಾಗ ಬಾಲಿವುಡ್ ರಂಗವನ್ನು ಹಾಗೂ ನಟನಾ ರಂಗದ ಬಗ್ಗೆ ಸಹ ಮಾತನಾಡುತ್ತಾ, ಸಿನೆಮಾ ಕಲಾವಿದರ ಅನುಭವಿಸುವಂತಹ ಕಷ್ಟಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಕೆಲವು ವರ್ಷಗಳಿಂದ ಬಾಲಿವುಡ್ ಸಿನೆಮಾಗಳು ಭಾರಿ ಸೋಲನ್ನು ನೋಡುತ್ತಿದ್ದವು. ಆ ಸಮಯದಲ್ಲೇ ರಣಬೀರ್‍ ಕಪೂರ್‍ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಬಾಲಿವುಡ್ ಉಸಿರಾಡುವಂತೆ ಮಾಡಿದರು ಎಂದರೇ ತಪ್ಪಾಗಲಾರದು. ಸದ್ಯ ರಣಬೀರ್‍ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿದೇರ್ಶನದಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ರಣಬೀರ್‍ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸದ್ಯ ಈ ಸಿನೆಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ.

ಇನ್ನೂ ರಣಬೀರ್‍ ಕಪೂರ್‍ ಸಿನೆಮಾ ಕಲಾವಿದರ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾ ಕಲಾವಿದರ ಬಗ್ಗೆ ವಿವಿಧ ರೀತಿಯಲ್ಲಿ ಆಲೋಚನೆ ಮಾಡುವಂತಹವರಿಗೆ ರಣಬೀರ್‍ ಒಂದು ಉತ್ತರ ನೀಡಿದ್ದಾರೆ. ನಟನೆ ಎಂಬುದು ಎಲ್ಲರಿಗೂ ಕಾಣಿಸುವಂತೆ ಸಂತೋಷದಿಂದ ಇರೊಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ನಿಮಗೆ ಮನರಂಜನೆ ನೀಡುತ್ತಾರೆ. ನಟರಿಗೆ ಹೊರಗೆ ಒಳ್ಳೆಯ ಕ್ರೇಜ್, ಫೇಂ ಇದ್ದು, ಒಳ್ಳೆಯ ಬಟ್ಟೆಗಳನ್ನು ಧರಿಸಿಕೊಂಡು ಸಂತೋಷದಿಂದ ತಿರುಗಾಡುತ್ತಿರುತ್ತೇವೆ ಎಂದು ತಪ್ಪು ಕಲ್ಪನೆಯಲ್ಲಿ ಇರುತ್ತಾರೆ. ಆದರೆ ಕಲಾವಿದರ ಕಷ್ಟಗಳನ್ನು ಯಾರು ಆಲೋಚನೆ ಮಾಡುವುದಿಲ್ಲ. ಸಾಮಾನ್ಯ ಜನತೆ ತಮಗೆ ಇಷ್ಟವಾದ ಆಹಾರ ಸೇವಿಸಬಹುದು. ಆದರೆ ನಾವು ನಮಗಿಷ್ಟವಾದ ಆಹಾರ ತ್ಯೆಜಿಸಿ ಬಾಡಿ ಮೈಂಟೈನ್ ಮಾಡಬೇಕಿದೆ ಎಂದು ಬಿಬಿಸಿ ಚಾನಲ್ ರವರು ನಿರ್ವಹಿಸಿದ ಚಿಟ್ ಚಾಟ್ ನಲ್ಲಿ ರಣಬೀರ್‍ ಈ ಕಾಮೆಂಟ್ಸ್ ಮಾಡಿದ್ದಾರೆ.

ಅಷ್ಟೇಅಲ್ಲದೇ ಸಿನೆಮಾ ಕಲಾವಿದರ ಬಗ್ಗೆ ಅನೇಕ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಫಿಟ್ ನೆಸ್ ಮೈಂಟೈನ್ ಮಾಡಲು ಕಠಿಣವಾದ ಆಹಾರ ನಿಯಮಗಳನ್ನು ಪಾಲನೆ ಮಾಡಬೇಕಿದೆ. ಕಲಾವಿದರು ತಿನ್ನಬೇಕೆಂಬ ಆಹಾರ ವನ್ನು ತಿನ್ನಲಾಗದೇ ಹಸಿವಿನಿಂದ ಪರದಾಡಿದ್ದಾರೆ ಎಂದು ಕಲಾವಿದರ ಸಮಸ್ಯೆಗಳ ಬಗ್ಗೆ ರಣಬೀರ್‍ ಮಾತನಾಡಿದ್ದಾರೆ. ರಣಬೀರ್‍ ಕಪೂರ್‍ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.