ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಸ್ಯಾಮ್, ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಾರಂತೆ ಸಮಂತಾ…..!

ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ನಾಗಚೈತನ್ಯ ಜೊತೆಗೆ ವಿಚ್ಚೇದನ, ಬಳಿಕ ಅದರಿಂದ ಡಿಪ್ರೆಷನ್, ಬಳಿಕ ಮಯೋಸೈಟೀಸ್ ವ್ಯಾಧಿ ಹೀಗೆ ಸಮಂತಾ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದರಲ್ಲೂ ಮಯೋಸೈಟೀಸ್ ವ್ಯಾದಿಯಿಂದಾಗಿ ಆಕೆ ಸುಮಾರು ತಿಂಗಳು ಕಾಲ ಅಜ್ಞಾತದಲ್ಲಿ ದ್ದರು. ಇದೀಗ ಸಮಂತಾ ಮತ್ತೆ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಇದನ್ನು ಕೇಳಿದ ಸ್ಯಾಮ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ಟಾರ್‍ ನಟಿ ಸಮಂತಾ ಕೈಯಲ್ಲಿ ಸದ್ಯ ಎರಡು ಪ್ರಾಜೆಕ್ಟ್ ಗಳಿವೆ. ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾ ಹಾಗೂ ಬಾಲಿವುಡ್ ನಲ್ಲಿ ವರುಣ್ ಧವನ್ ಜೊತೆಗೆ ಸಿಟಾಡೆಲ್ ಎಂಭ ವೆಬ್ ಸಿರೀಸ್ ನಲ್ಲಿ ಸ್ಯಾಮ್ ನಟಿಸುತ್ತಿದ್ದಾರೆ. ಆದರೆ ಇದೀಗ ಸಮಂತಾ ಸಿನೆಮಾಗಳಿಂದ ದೀರ್ಘ ಕಾಲ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಈ ಬಗ್ಗೆ ಸಮಂತಾ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ ಎಂದು ಕೆಲವೊಂದು ಮಾದ್ಯಮಗಳು ವರದಿ ಮಾಡಿದೆ. ಸದ್ಯ ಸ್ಯಾಮ್ ಕೈಯಲ್ಲಿರುವಂತಹ ಈ ಎರಡೂ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಿ ಆಕೆ ವಿರಾಮ ಪಡೆದುಕೊಳ್ಳಲಿದ್ದಾರಂತೆ. ಇನ್ನೂ ಈ ಸುದ್ದಿ ಇದೀಗ ಜೋರಾಗಿಯೇ ಹರಿದಾಡುತ್ತಿದೆ. ಅಷ್ಟಕ್ಕೂ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸಮಂತಾ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾದ ಬಗ್ಗೆ ತಿಳಿದೇ ಇದೆ. ಚಿಕಿತ್ಸೆಯನ್ನು ಪಡೆಯುತ್ತಲೇ ಸಿನೆಮಾ ಶೂಟೀಂಗ ಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ವರ್ಕೌಟ್ ಶೂಟೀಂಗ್ ಕಾರಣದಿಂದ ಆಕೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರಂತೆ. ಸಮಂತಾ ಪುನಃ ತಮ್ಮ ಆರೋಗ್ಯವನ್ನು ಪಡೆದುಕೊಳ್ಳಲು, ವಿಶ್ರಾಂತಿ ಹಾಗೂ ಚಿಕಿತ್ಸೆ ಅಗತ್ಯವಿದ್ದು, ಆಕೆ ಸಿನೆಮಾಗಳಿಗೆ ಕೊಂಚ ಬ್ರೇಕ್ ನೀಡಲಿದ್ದಾರಂತೆ. ಸದ್ಯ ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನ ಖುಷಿ ಸಿನೆಮಾದ ಶೂಟಿಂಗ್ ಸಹ ಬಹುತೇಕ ಮುಗಿದೆ. ಇದರ ಜೊತೆಗೆ ಸಿಟಾಡೆಲ್ ವೆಬ್ ಸಿರೀಸ್ ಸಹ ಮುಕ್ತಾಯದ ಹಾದಿಯಲ್ಲಿದೆ. ಈ ಸಿನೆಮಾಗಳನ್ನು ಬಿಟ್ಟರೇ ಆಕೆ ಬೇರೆ ಯಾವುದೇ ಸಿನೆಮಾಗಳನ್ನು ಅನೌನ್ಸ್ ಸಹ ಮಾಡಿಲ್ಲ. ಜೊತೆಗೆ ನಿರ್ಮಾಪಕರಿಂದ ಪಡೆದುಕೊಂಡ ಅಡ್ವಾನ್ಸ್ ಸಹ ವಾಪಸ್ಸು ನೀಡುತ್ತಿದ್ದಾರಂತೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಇಲ್ಲ.

ಸದ್ಯ ಸಮಂತಾ ತನ್ನ ಆರೋಗ್ಯದ ಮೇಲೆ ತುಂಬಾ ಕಾಳಜಿ ವಹಿಸಿಕೊಂಡಿದ್ದಾರಂತೆ. ಸದ್ಯ ಮಯೋಸೈಟೀಸ್ ವ್ಯಾಧಿಯ ಕಾರಣದಿಂದ ಸಿನೆಮಾಗಳಿಂದ ದೂರವಿದ್ದ ಈಕೆ ಇದೀಗ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಆಕೆಯ ಕೆರಿಯರ್‍ ಸಹ ಪೀಕ್ ನಲ್ಲಿದೆ. ಇಂತಹ ಸಮಯದಲ್ಲಿ ಆಕೆ ಈ ನಿರ್ಧಾರ ತೆಗೆದುಕೊಳ್ಳುತ್ತಾರಾ. ಅಥವಾ ಇದೊಂದು ರೂಮರ್‍ ಮಾತ್ರವೇ ಎಂಬುದು ಇನಷ್ಟೆ ತಿಳಿದು ಬರಬೇಕಿದೆ.