Film News

ಚರಣ್ ಹಾಗೂ ನಾಗಚೈತನ್ಯ ಬಗ್ಗೆ ತನ್ನ ಮನಸ್ಸಿನಲ್ಲಿನ ಮಾತನ್ನು ಹೊರ ಹಾಕಿದ ತಮನ್ನಾ, ವೈರಲ್ ಆದ ಕಾಮೆಂಟ್ಸ್….!

ಸೌತ್ ಸಿನಿರಂಗದ ಸ್ಟಾರ್‍ ನಟಿ ತಮನ್ನಾ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಆಕೆ ಬ್ಯೂಟಿಗೆ ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಫಿದಾ ಆಗಿದ್ದಾರೆ. ಗ್ಲಾಮರಸ್ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ರೀತಿಯ ಕ್ರೇಜ್ ಬೇರೆ ಯಾವ ನಟಿಯೂ ಸಹ ಪಡೆದುಕೊಂಡಿಲ್ಲ ಎಂದು ಹೇಳಬಹುದಾಗಿದೆ. ಸೌತ್ ಸಿನಿರಂಗದ ಅನೇಕ ಸಿನೆಮಾಗಳ ಮೂಲಕ 15 ವರ್ಷಗಳಿಂದ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ತಮನ್ನಾ ರಾಮ್ ಚರಣ್ ಹಾಗೂ ನಾಗಚೈತನ್ಯ ರವರ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ಹೊರಹಾಕಿದ್ದಾರೆ.

ಸ್ಟಾರ್‍ ನಟಿ ತಮನ್ನಾ ಸೌತ್ ನಲ್ಲಿ ಅನೇಕ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡರು. ಅದರಲ್ಲೂ ಟಾಲಿವುಡ್ ನಲ್ಲಂತೂ ಭಾರಿ ಕ್ರೇಜ್ ಪಡೆದುಕೊಂಡರು. ಟಾಲಿವುಡ್ ನಲ್ಲಿ ಸಣ್ಣ ಹಿರೋಗಳಿಂದ ಹಿಡಿದು ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಇದೀಗ ತಮನ್ನಾ ಬಾಲಿವುಡ್ ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ಆಕೆಯ ಕೆರಿಯರ್‍ ನಲ್ಲಿ ಮೊದಲ ಬಾರಿಗೆ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ಎಂಬ ಎರಡು ವೆಬ್ ಸಿರೀಸ್ ಗಳಲ್ಲಿ ಭಾರಿ ಬೋಲ್ಡ್ ಆಗಿ ನಟಿಸಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಈ ಸಿರೀಸ್ ಗಳು ತುಂಬಾನೆ ಸದ್ದು ಮಾಡಿತ್ತು. ಇನ್ನೂ ಈ ಕಾರಣದಿಂದಾಗಿ ಆಕೆ ಇತ್ತಿಚಿಗೆ ಬಾರಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ರಾಮ್ ಚರಣ್, ಅಕ್ಕಿನೇನಿ ನಾಗಚೈತನ್ಯ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗಿದೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನಾ ಚರಣ್ ಹಾಗೂ ಚೈತನ್ಯ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ರಾಮ್ ಚರಣ್ ಹಾಗೂ ಚೈತನ್ಯ ತಮ್ಮ ಸಹ ಕಲಾವಿದರೊಂದಿಗೆ ತುಂಬಾ ಮರ್ಯಾದೆಯಿಂದ ನಡೆದುಕೊಳ್ಳುತ್ತಾರೆ. ಶೂಟಿಂಗ್ ಸೆಟ್ಸ್ ನಲ್ಲಿ ಅವರು ಕಲಾವಿದರೊಂದಿಗೆ ಹೊಂದಾಣಿಕೆಯಿಂದ ಇರುತ್ತಾರೆ. ಅವರಿಬ್ಬರೊಂದಿಗೆ ಕೆಲಸ ಮಾಡಿದ್ದು ತುಂಬಾ ಇಷ್ಟ ಎಂದು ಹೇಳಿದ್ದಾರೆ. ಇನ್ನೂ ರಾಮ್ ಚರಣ್ ಜೊತೆಗೆ ತಮನ್ನಾ ರಚ್ಚಾ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡಿತ್ತು. ನಾಗಚೈತನ್ಯ ಜೊತೆಗೆ 100% ಲವ್ ಸ್ಟೋರಿ ಹಾಗೂ ತಡಾಕ ಸಿನೆಮಾಗಳಲ್ಲಿ ನಟಿಸಿದ್ದರು. ಇದೀಗ ತಮನ್ನಾ ನೀಡಿದ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ತಮನ್ನಾ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ಸಿರೀಸ್ ಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಸದ್ಯ ಆಕೆ ಮೆಗಾಸ್ಟಾರ್‍ ಚಿರಂಜೀವಿ ಯವರ ಜೊತೆಗೆ ಭೋಳಾ ಶಂಕರ್‍, ಸೂಪರ್‍ ಸ್ಟಾರ್‍ ರಜನಿಕಾಂತ್ ಜೊತೆಗೆ ಜೈಲರ್‍ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅರಣ್ಮನೈ-4 ಹಾಗೂ ಬಂದರಾ ಎಂಬ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ.

Most Popular

To Top