Film News

ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಪೂಜಾ, ಟೈಟ್ ಫಿಟ್ ನಲ್ಲಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಪೂಜಾ ಹೆಗ್ಡೆ……!

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸೋಲು ಕಂಡರೂ ಸಹ ಬೇಡಿಕೆಯುಳ್ಳ ನಟಿಯರಲ್ಲಿ ಮೊದಲ ಸ್ಥಾನ ಸ್ಟಾರ್‍ ನಟಿ ಪೂಜಾ ಹೆಗ್ಡೆಗೆ ಸಲ್ಲುತ್ತದೆ. ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಮಾತ್ರ ಹ್ಯಾಟ್ರಿಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಬಾಡಿ ಫಿಟ್ ನೆಸ್ ಕಾಪಾಡಿಕೊಳ್ಳಲು ಆಕೆ ಜಿಮ್ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೆ ಇದೀಗ ಆಕೆ ಜಿಮ್ ನಲ್ಲಿ ಹೆವಿ ವರ್ಕೌಟ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ.

ಸ್ಟಾರ್‍ ನಟಿ ಪೂಜಾ ಹೆಗ್ಡೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕಠಿಣವಾದ ಕಸರತ್ತುಗಳನ್ನು ಮಾಡುತ್ತಾ ಬಾಕ್ಸಿಂಗ್ ಬ್ಯಾಗ್ ಗಳ ಮೇಲಿಂದ ಕೆಳಗೆ ಪುಷ್ ಅಪ್ಸ್ ಮಾಡಿದ್ದಾರೆ. ನಿಲ್ಲದೇ ಏಳು ಭಾರಿ ಅದನ್ನು ರಿಪೀಟ್ ಮಾಡಿದ್ದಾರೆ. ಆ ಮೂಲಕ ಪೂಜಾ ತನ್ನ ಸ್ಟಾಮಿನಾ ತೋರಿಸಿದ್ದಾರೆ. ಇನ್ನೂ ಆಕೆಯ ಸೊಂಟದ ಮೈಮಾಟಕ್ಕೆ ಕಾರಣ ಇದೇ ಕಸರತ್ತು ಎಂಬಂತೆ ನಿರೂಪಿಸಿದ್ದಾರೆ. ದೇಹದ ಮೈಮಾಟ ಕಾಪಾಡಿಕೊಳ್ಳಲು ಆಕೆ ಪಡುವ ಕಷ್ಟವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಟೈಟ್ ಫಿಟ್ ನಲ್ಲಿ ಆಕೆ ತನ್ನ ಥೈಸ್ ಶೋ ಮಾಡಿದ್ದಾರೆ. ಜೊತೆಗೆ ಆಕೆ ಮೇಕಪ್ ಲೆಸ್ ಆಗಿ ಸಹ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಪೂಜಾ ಹೆಗ್ಡೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ನೆಟ್ಟಿಗರು ಫೈರಿಂಗ್ ಎಮೋಜಿಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಕೇವಲ ನೆಟ್ಟಿಗರು ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರೆಟಿಗಳೂ ಸಹ ವಿವಿಧ ರೀತಿಯ ಎಮೋಜಿಗಳನ್ನು ಹಂಚಿಕೊಳ್ಳುವ ಮೂಲಕ ಆಕೆಯನ್ನು ಮೆಚ್ಚುತ್ತಿದ್ದಾರೆ. ಜೊತೆಗೆ ಆಕೆಯ ಹಾಟ್ ಲುಕ್ಸ್ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ ಎನ್ನಲಾಗಿದೆ. ಇನ್ನೂ ಪೂಜಾ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ಒಂದಲ್ಲ ಒಂದು ರೀತಿಯ ಪೋಸ್ಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರಲ್ಲೂ ಆಕೆ ಸಖತ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಹೊಂದಿರುವ ಪೂಜಾ ಹೆಗ್ಡೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಾಣುತ್ತಿದ್ದ ಪೂಜಾ ಹೆಗ್ಡೆಗೆ ಮಾತ್ರ ಕಳೆದ ವರ್ಷ ಭಾರಿ ಸೋಲುಗಳನ್ನು ಕಂಡರು. ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋತವು. ಇನ್ನೂ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ನಲ್ಲಿ ಶೂಟಿಂಗ್ ನಡೆಯುತ್ತಿರುವ ಗುಂಟೂರು ಖಾರಂ ಎಂಬ ಸಿನೆಮಾದಿಂದಲೂ ಸಹ ಪೂಜಾ ಹೆಗ್ಡೆ ಹೊರಬಂದಿದ್ದಾರೆ. ಸದ್ಯ ಆಕೆಯ ಸಿನೆಮಾಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಅಪ್ಡೇಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top