Film News

ಚೈತು-ಶೋಭಿತಾ ನಡುವೆ ಬ್ರೇಕಪ್, ಲವ್ ಬಗ್ಗೆ ಅಧಿಕೃತ ಸುದ್ದಿಗೂ ಮೊದಲೇ ಬ್ರೇಕಪ್ ಸುದ್ದಿ ವೈರಲ್….!

ಸುಮಾರು ದಿನಗಳಿಂದ ಅಕ್ಕಿನೇನಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಶೋಭಿತಾ ಅನೇಕ ಬಾರಿ ಎಲ್ಲಾ ರೂಮರ್‍ ಗಳು ಎಂದರೂ ಸಹ ಈ ಸುದ್ದಿ ಮಾತ್ರ ತಣ್ಣಗಾಗುತ್ತಿಲ್ಲ. ಅವರ ಅಫೈರ್‍ ಬಗ್ಗೆ ಅಧಿಕೃತವಾದ ಮಾಹಿತಿ ಬಂದೇ ಇಲ್ಲಾ ಇದೀಗ ಅವರ ಬ್ರೇಕಪ್ ಸುದ್ದಿ ವೈರಲ್ ಆಗುತ್ತಿದೆ. ಹೌದು ಶೋಭಿತಾ ಹಾಗೂ ಅಕ್ಕಿನೇನಿ ನಾಗಚೈತನ್ಯ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಇದೀಗ ಕೇಳಿಬರುತ್ತಿದೆ.

ನಟ ಅಕ್ಕಿನೇನಿ ನಾಗಚೈತನ್ಯ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಶೋಭಿತಾ ಧೂಳಿಪಾಲ ಎಂಬ ನಟಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿತ್ತು. ಅವರಿಬ್ಬರೂ ನಿರಂತರವಾಗಿ ಭೇಟಿ ಆಗುತ್ತಿರುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಈ ಹಿಂದೆ ಶೋಭಿತಾ ಸಹ ಈ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದರು. ಎಲ್ಲವೂ ಕಲ್ಪಿತ ಸುದ್ದಿಗಳು ಎಂದು ತಳ್ಳಿಹಾಕಿದ್ದರು. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ. ನಾಗಚೈತನ್ಯ ಹಾಗೂ ಶೋಭಿತಾ ಲಂಡನ್ ನ ರೆಸ್ಟೊರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಡಿನ್ನರ್‍ ಡೇಟ್ ಗಾಗಿ ಲಂಡನ್ ಗೇ ಈ ಜೋಡಿ ಹಾರಿದ್ದು, ಅವರಿಬ್ಬರೂ ರೆಸ್ಟೋರೆಂಟ್ ನಲ್ಲಿರುವ ಪೊಟೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅವರಿಬ್ಬರ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತೀಚಿಗೆ ಶೋಭಿತಾ ಹಾಗೂ ಚೈತನ್ಯ ನಡುವೆ ಲವ್ ಟ್ರಾಕ್ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಇದೀಗ ಈ ಜೋಡಿಯ ಬಗ್ಗೆ ಇದೀಗ ಬ್ರೇಕಪ್ ಸುದ್ದಿ ಕೇಳಿಬರುತ್ತಿದೆ. ಅವರಿಬ್ಬರ ನಡುವೆ ವಿಬೇಧಗಳು ಏರ್ಪಟ್ಟಿದೆಯಂತೆ. ಈ ಕಾರಣದಿಂದ ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ರೂಮರ್‍ ಇದೀಗ ಸಖತ್ ಸದ್ದು ಮಾಡುತ್ತಿದೆ. ಇನ್ನೂ ಅವರಿಬ್ಬರ ರಿಲೇಷನ್ ಶಿಪ್ ಬಗ್ಗೆ ಇಲ್ಲಿಯವರೆಗೂ ಯಾರೂ ಸಹ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಅಂತಹುದರಲ್ಲಿ ಆಗಲೇ ಬ್ರೇಕಪ್ ವರೆಗೂ ಹೋಯ್ತಾ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ರೂಮರ್‍ ಮಾತ್ರ ಜೋರಾಗಿಯೇ ಹರಿದಾಡುತ್ತಿದೆ.

ಇನ್ನೂ ಶೋಭಿತಾ ಧೂಳಿಪಾಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಆಕೆ ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿರೀಸ್ ನಲ್ಲಿ ಶೋಭಿತಾ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿದ್ದು, ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top