Film News

ವಿಚ್ಚೇದನದ ಬಗ್ಗೆ ರಿಯಾಕ್ಟ್ ಆದ ನಿಹಾರಿಕಾ, ನಮ್ಮಿಬ್ಬರ ಒಪ್ಪಿಗೆಯಂತೆ ವಿಚ್ಚೇದನ ಪಡೆದುಕೊಳ್ಳುತ್ತಿದ್ದೇವೆ ಎಂದ ನಟಿ…..!

ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ಇಬ್ಬರೂ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಸುಮಾರು ದಿನಗಳಿಂದ ಹರಿದಾಡುತ್ತಿರುವ ಈ ಸುದ್ದಿ ಇದೀಗ ಅಧಿಕೃತವಾಗಿದೆ. ಮೊದಲಿಗೆ ಈ ಬಗ್ಗೆ ನಿಹಾರಿಕಾ ಆಗಲಿ, ಮೆಗಾ ಕುಟುಂಬವಾಗಲೀ ಅಥವಾ ಚೈತನ್ಯ ಜೊನ್ನಲಗಡ್ಡ ಕುಟುಂಬವಾಗಲೀ ಈ ಬಗ್ಗೆ ರಿಯಾಕ್ಟ್ ಆಗಿರಲಿಲ್ಲ. ಇನ್ನೂ ಇದೀಗ ಅವರ ವಿಚ್ಚೇಧನ ಅಧಿಕೃತವಾಗಿದ್ದು, ಮೊದಲ ಬಾರಿ ನಿಹಾರಿಕಾ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಈ ಸಂಬಂಧ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಡಿಸೆಂಬರ್‍ 2020ರ ಡಿಸೆಂಬರ್‍ 9 ರಂದು ರಾಜಸ್ಥಾನದ ಜೈಪುರದಲ್ಲಿ ಚೈತನ್ಯ ಹಾಗೂ ನಿಹಾರಿಕಾ ರವರ ಮದುವೆ ತುಂಬಾ ಅದ್ದೂರಿಯಾಗಿ ನಡೆಯಿತು. ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ಹೆಸರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿದ್ದು, ಇಬ್ಬರೂ ದೂರವಾಗಿದ್ದಾರೆ. ಜೊತೆಗೆ ನಿಹಾರಿಕಾ ಹಾಗೂ ಚೈತನ್ಯ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಿಂದ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದು, ತಾವಿಬ್ಬರೂ ಇರುವಂತಹ ಪೊಟೋಗಳನ್ನು ಡಿಲೀಟ್ ಮಾಡಿದ್ದು, ಜೊತೆಗೆ ಮೆಗಾ ಕುಟುಂಬದಲ್ಲಿ ನಡೆದಂತಹ ಅನೇಕ ಕಾರ್ಯಕ್ರಮಗಳಲ್ಲಿ ಚೈತನ್ಯ ಕಾಣಿಸಿಕೋಳ್ಳದೇ ಇರುವುದು ಎಲ್ಲಾ ಕಾರಣಗಳಿಂದ ಈ ಜೋಡಿ ಬೇರೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇಬ್ಬರೂ ಅಧಿಕೃತವಾಗಿ ಬೇರೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಇನ್ನೂ ವಿಚ್ಚೇದನ ಸುದ್ದಿಯ ಬಗ್ಗೆ ನಿಹಾರಿಕಾ ಮೊದಲ ಬಾರಿಗೆ ರಿಯಾಕ್ಟ್ ಆಗಿದ್ದಾರೆ. ಈ ಬಗ್ಗೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ನೋಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿರುವಂತೆ ನಾನು ಹಾಗೂ ಚೈತನ್ಯ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗುತ್ತಿದ್ದೇವೆ. ಇಂತಹ ಸಮಯದಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಜೊತೆಗೆ ಈ ಸಮಯದಲ್ಲಿ ನನಗೆ ಬೆಂಬಲವಾಗಿದ್ದ ಕುಟುಂಬಸ್ಥರು, ಸ್ನೇಹಿತರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ. ಇನ್ನೂ ತಾವು ಆರಂಭಿಸುವಮತಹ ಹೊಸ ಜೀವನದಲ್ಲಿ ಗೌಪ್ಯತೆಯನ್ನು ಕೋರುತ್ತಿದ್ದೇವೆ. ಈ ವಿಚಾರವನ್ನು ತಾವೆಲ್ಲರೂ ಸಹ ಗೌರವಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಕುಟುಂಬದಲ್ಲಿ ಮದುವೆಯ ಸಂಭ್ರಮ ಶುರುವಾಗಿದೆ. ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ಫಿಕ್ಸ್ ಆಗಿದ್ದು, ಎಂಗೇಜ್ ಮೆಂಟ್ ಸಹ ನಡೆದಿದೆ. ಮದುವೆ ಕೆಲಸಗಳೂ ಸಹ ಶೀಘ್ರದಲ್ಲೇ ಶುರುವಾಗಲಿದ್ದು, ಅಂತಹ ಸಮಯದಲ್ಲಿ ನಿಹಾರಿಕಾ ವಿಚ್ಚೇದನದ ಸುದ್ದಿ ಮೆಗಾ ಕುಟುಂಬಕ್ಕೆ ಕೊಂಚ ಕಿರಿಕಿರಿಯಾಗಿದೆ ಎಂದು ಹೇಳಬಹುದಾಗಿದೆ.

Most Popular

To Top