ಕ್ಯಾನ್ಸರ್ ಪೀಡಿತ ಪುಟಾಣಿ ಬಾಲಕಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್, ಎಲ್ಲರಿಂದ ಮೆಚ್ಚುಗೆ…!

Follow Us :

ಇಡೀ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಕಿಚ್ಚ ಸುದೀಪ್ ರವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಅನೇಕ ಸಿನೆಮಾಗಳ ಮೂಲಕ ದೇಶದ ಸಿನಿರಸಿಕರನ್ನು ರಂಜಿಸಿದ್ದಾರೆ. ಇನ್ನೂ ಅವರು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಇದೀಗ ಕಿಚ್ಚ ಸುದೀಪ್ ಕ್ಯಾನ್ಸರ್‍ ವ್ಯಾಧಿಯಿಂದ ಬಳಲುತ್ತಿರುವ ಪುಟಾಣಿ ಬಾಲಕಿಯೊಬ್ಬರ ಆಸೆಯನ್ನು ಈಡೇರಿಸಿದ್ದಾರೆ. ಈ ಸಂಬಂಧ ಪೊಟೋ ಹಾಗೂ ವಿಡಿಯೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಎಲ್ಲರಿಂದಲೂ ಮೆಚ್ಚುಗೆ ಸಹ ದೊರೆಯುತ್ತಿದೆ.

ಸ್ಯಾಂಡಲ್ ವುಡ್ ಸ್ಟಾರ್‍ ನಟ ಕಿಚ್ಚ ಸುದೀಪ್ ಸಿನೆಮಾಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಈ ಹಾದಿಯಲ್ಲೇ ಸುದೀಪ್ ಇದೀಗ ಮತ್ತೊಂದು ಸಾಮಾಜಿಕ ಕಾರ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕ್ಯಾನ್ಸರ್‍ ವ್ಯಾಧಿಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯನ್ನು ಭೇಟಿಯಾಗಿ ಆಕೆಯ ಆರೋಗ್ಯ ವಿಚಾರಿಸಿ, ಉಡುಗೊರೆ ಹಾಗೂ ಆಟೋಗ್ರಾಫ್ ನೀಡಿ ಮಗುವಿನ ನಗುವಿಗೆ ಕಾರಣರಾಗಿದ್ದಾರೆ. ಇನ್ನೂ ಕ್ಯಾನ್ಸರ್‍ ವ್ಯಾಧಿಗೆ ತುತ್ತಾದ ಬಾಲಕಿ ಸುದೀಪ್ ರವರ ವೀರಾಭಿಮಾನಿಯಂತೆ. ಆ ಬಾಲಕಿಯ ಹೆಸರು ಸಾಕ್ಷಿ ಎಂದು. ಈ ವಿಚಾರವನ್ನು ತಿಳಿದ ಸುದೀಪ್ ಆಸ್ಪತ್ರೆಗೆ ಭೇಟಿ ನೀಡಿ ಪುಟ್ಟ ಬಾಲಕಿಯ ಆಸೆಯನ್ನು ಪೂರೈಸಿದ್ದಾರೆ.

ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಸುದೀಪ್ ರವರನ್ನು ಅವರ ಆಭಿಮಾನಿಗಳು ಭೇಟಿಯಾಗಲು ಕಾಯುತ್ತಿರುತ್ತಿರುತ್ತಾರೆ. ಆದರೆ ಆ ಅವಕಾಶ ಕಡಿಮೆ ಮಂದಿಗೆ ಸಿಗುತ್ತದೆ ಎಂದು ಹೇಳಬಹುದಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಸಾಕ್ಷಿ ಸುದೀಪ್ ರವರ ಮೇಲೆ ತುಂಬಾ ಅಭಿಮಾನ ಬೆಳೆಸಿಕೊಂಡಿದ್ದಾರೆ. ಆಕೆ ಕ್ಯಾನ್ಸರ್‍ ವ್ಯಾದಿಗೆ ಗುರಿಯಾಗಿದ್ದು, ಆಕೆಯ ಆಸೆಯನ್ನು ಸುದೀಪ್ ರವರು ತಿಳಿದುಕೊಂಡು ಆಸ್ಪತ್ರೆಗೆ ತೆರಳಿ ಆಕೆಯ ಯೋಗಕ್ಷೇಮ ವಿಚಾರಿಸಿದ್ದಾರೆ. ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್‍ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಾಕ್ಷಿ ಯನ್ನು ಸುದೀಪ್ ಭೇಟಿ ಯಾಗಿದ್ದಾರೆ. ಸಾಕ್ಷಿ ಹಾಗೂ ಅವರ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ. ಸಾಕ್ಷಿ ಜೊತೆಗೆ ಕೆಲಸ ಸಮಯ ಕಾಲ ಕಳೆದಿದ್ದಾರೆ. ಜೊತೆಗೆ ಸಾಕ್ಷಿಗೆ ಉಡುಗೊರೆ ಕೊಟ್ಟು ಆಟೋಗ್ರಾಫ್ ಸಹ ನೀಡಿದ್ದಾರೆ. ಇನ್ನೂ ಸಾಕ್ಷಿ ತನ್ನ ಪ್ರೀತಿಯ ನಟನನ್ನು ಕಂಡು ಸಂತಸಗೊಂಡಿದ್ದಾರೆ. ಆ ಮೂಲಕ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾಳೆ ಸಾಕ್ಷಿ.

ಇನ್ನೂ ಸುದೀಪ್ ರನ್ನು ಭೇಟಿ ಮಾಡಿದ ಸಂತಸವನ್ನು ಸಾಕ್ಷಿ ಸಹ ಹೊರಹಾಕಿದ್ದಾರೆ. ಸದ್ಯ ಈ ಸಂಬಂಧ ವಿಡಿಯೊ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಕಿಚ್ಚನ ಅಭಿಮಾನಿಗಳೂ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಸುದೀಪ್ ರವರ ಮುಂದಿನ ಸಿನೆಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.