ನನಗೆ ನಿಮ್ಮ ಪೋಷಕರು ಓಟು ಹಾಕದೇ ಇದ್ರೆ, 2ದಿನ ಊಟ ಮಾಡ್ಬೇಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಶಿವಸೇನೆ ಶಾಸಕ……!

ಇತ್ತಿಚಿಗೆ ರಾಜಕೀಯ ನಾಯಕರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಶಾಸಕನೊಬ್ಬ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೀಡಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಲಂನೂರಿ ಶಾಸಕ ಸಂತೋಶ್ ಬಂಗಾರ್‍ ರವರೇ…

ಇತ್ತಿಚಿಗೆ ರಾಜಕೀಯ ನಾಯಕರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಶಾಸಕನೊಬ್ಬ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೀಡಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಲಂನೂರಿ ಶಾಸಕ ಸಂತೋಶ್ ಬಂಗಾರ್‍ ರವರೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆ ಶಾಸಕ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಚುನಾವಣಾ ಆಯೋಗ ಇತ್ತೀಚಿಗಷ್ಟೆ ಮಕ್ಕಳನ್ನು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದರ ಬಗ್ಗೆ ಕಠಿಣ ಕೆಲವೊಂದು ನಿರ್ದೇಶನಗಳನ್ನು ನೀಡಿತ್ತು. ಈ ನಡುವೆ ಶಾಸಕ ಸಂತೋಷ್ ಬಂಗಾರ್‍ ನೀಡಿದ ಹೇಳಿಕೆಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಭಂದರೇ. ಹಿಂಗೋಲಿ ಎಂಬ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಂತೋಷ್, ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದೇ ಇದ್ದರೇ ನೀವು ಎರಡು ದಿನ ಊಟ ಮಾಡಬೇಡಿ ಜೊತೆಗೆ ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕೆಂದು ಸಹ ಪೋಷಕರ ಮುಂದೆ ಶಾಲಾ ಮಕ್ಕಳನ್ನು ಕೇಳಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವಿವಾದ ಸೃಷ್ಟಿಸಿದೆ.

ಇನ್ನೂ ಶಾಸಕ ಸಂತೋಷ್ ಬಂಗಾರ್‍ ಹೇಳಿಕೆಗೆ ಕಾಂಗ್ರೇಸ್ ಹಾಗೂ ಶರದ್ ಪವಾರ್‍ ನೇತೃತ್ವದ ಎನ್.ಸಿ.ಪಿ ಕಿಡಿಕಾರಿದೆ. ಚುನಾವಣೆ ಚಟುವಟಿಕೆಗಾಗಿ ಮಕ್ಕಳನ್ನು ಬಳಸಿಕೊಂಡಿದ್ದಾರೆ ಆತನ ವಿರುದ್ದ ಚುನಾವಣಾ ಆಯೋಗ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ರಾಜ್ಯದ ಶಿಕ್ಷಣ ಸಚಿವರು ಸಹ ನಿದ್ದೆಗೆ ಮಾಡುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  ಇನ್ನೂ ಈ ಹಿಂದೆ ಸಹ ಇದೇ ರೀತಿಯ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಕಳೆದ ವರ್ಷ ಆಗಸ್ಟ್ ನಲ್ಲಿ ಹಬ್ಬದ ಮೆರವಣಿಗೆಯ ಮೇಲೆ ಕತ್ತಿಯನ್ನು ಝಳಪಳಿಸಿ ಸುದ್ದಿಯಾಗಿದ್ದರು.