ದಕ್ಷಿಣ ಕಾಶಿ ಎಂದೇ ಕರೆಯಲಾಗುವ ಶ್ರೀಶೈಲಂ ದೇವಾಲಯದ ಪ್ರಸಾದದಲ್ಲಿ ಮೂಳೆ ಪತ್ತೆ, ಭಕ್ತರ ಆಕ್ರೋಷ…..!

Follow Us :

ದಕ್ಷಿಣದ ಕಾಶಿ ಎಂದೇ ಕರೆಯಲಾಗುವ ಶ್ರೀ ಬ್ರಮರಾಂಭ ಮಲ್ಲಿಕಾರ್ಜುನ ದೇವಾಲಯ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಈ ದೇವಾಲಯಕ್ಕೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಸಹ ಭೇಟಿ ನೀಡುತ್ತಿರುತ್ತಾರೆ. ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರ ಸಹ ಒಂದಾಗಿದೆ. ಇದೀಗ ಈ ದೇವಾಲಯದ ಪ್ರಸಾದದಲ್ಲಿ ಚಿಕನ್ ಮೂಳೆಯೊಂದು ಪತ್ತೆಯಾಗಿದ್ದು, ಈ ಕುರಿತು ಭಕ್ತರು ದೇವಾಲಯದ ಆಡಳಿತ ಮಂಡಳಿಯ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

ದೇಶದ 12 ಜೋತಿರ್ಲಿಂಗಗಳಲ್ಲಿ ಶ್ರೀಶೈಲಂ ಮಲ್ಲಿಕಾರ್ಜುನ ದೇವಾಲಯ ಸಹ ಒಂದಾಗಿದೆ. ಪ್ರತಿನಿತ್ಯ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಿರುತ್ತಾರೆ. ಇದೀಗ ದೇವಾಲಯದ ಪ್ರಸಾದದಲ್ಲಿ ಚಿಕನ್ ಮೂಳೆಯೊಂದು ಪತ್ತೆಯಾಗಿದೆ. ಹೈದರಾಬಾದ್ ನಿಂದ ದೇವರ ದರ್ಶನಕ್ಕೆ ಬಂದಿದ್ದ ಹರೀಶ್ ರೆಡ್ಡಿ ಎಂಬುವವರು ಪಡೆದ ಪ್ರಸಾದಲ್ಲಿ ಚಿಕನ್ ಮೂಳೆ ಪತ್ತೆಯಾಗಿದ್ದು, ಹಿಂದೂ ದೇವಾಸ್ಥಾನದಲ್ಲಿ ಪಾವಿತ್ಯ್ರತೆ ಉಳಿಸುವಲ್ಲಿ ಆಡಳಿತ ಮಂಡಳಿ ಹಾಗೂ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಷ ವ್ಯಕ್ತವಾಗುತ್ತಿದೆ. ಮಲ್ಲಿಕಾರ್ಜುನನ ದರ್ಶನ ಪಡೆದ ಹರೀಶ್ ರೆಡ್ಡಿ ಪ್ರಸಾದ ಸ್ವೀಕರಿಸಿದ್ದಾರೆ. ಈ ಪ್ರಸಾದ ಸೇವನೆ ಮಾಡುವಾಗ ಚಿಕನ್ ಮೂಳೆ ಪತ್ತೆಯಾಗಿದೆ. ಎರಡು ಸಣ್ಣ ಮೂಳೆಗಳು ಸಿಕ್ಕಿದೆಯಂತೆ. ಇದು ಹರೀಶ್ ರೆಡ್ಡಿ ಹಾಗೂ ಕುಟುಂಬಸ್ಥರ ಆಕ್ರೋಷಕ್ಕೆ ಕಾರಣವಾಗಿದ್ದು, ಈ ಕುರಿತು ಲಿಖಿತ ದೂರು ಸಹ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ಕುರಿತು ದೂರು ಸ್ವೀಕರಿಸಿರುವ ದೇವಾಲಯದ ಆಡಳಿತ ಮಂಡಳಿ ಈ ಕುರಿತು ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದೆ ಎನ್ನಲಾಗಿದೆ. ಆದರೆ ಭಕ್ತರು ಈ ಕುರಿತು ಭಾರಿ ಆಕ್ರೋಷ ಹೊರಹಾಕುತ್ತಿದ್ದಾರೆ. ದೇವಾಲಯದ ಪದ್ದತಿ, ಆಚರಣೆ, ಪ್ರಸಾದ ಸೇರಿದಂತೆ ನಡೆಯುವ ತಪ್ಪುಗಳನ್ನು ಸಹಿಸೊಲ್ಲ. ಸರ್ಕಾರ ದೇವಾಲಯದ ಆದಾಯದ ಮೇಲೆ ಮಾತ್ರ ಕಣ್ಣಿಟ್ಟಿದೆ. ಆದರೆ ಪೂಜಾ ಸ್ಥಳ, ತೀರ್ಥ ಕ್ಷೇತ್ರದ ಪಾವಿತ್ಯ್ರತೆ ಕುರಿತು ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪದ ಜೊತೆಗೆ ಹಿಂದೂ ದೇವಾಸ್ತಾನಗಳ ಪ್ರಸಾದ ಸೇರಿದಂತೆ ಬೇರೆ ಕೆಲಸಗಳ ಟೆಂಡರ್‍ ಹಿಂದೂಯೇತರರಿಗೆ ನೀಡಲಾಗುತ್ತಿದೆ ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಭಕ್ತರು ಆಕ್ರೋಷದ ಆರೋಪ ಮಾಡುತ್ತಿದ್ದಾರೆ ಎನ್ನಲಾಗಿದೆ.