ಆ ಕಾರಣದಿಂದಲೇ ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದ ಮೆಗಾ ಡಾಟರ್ ನಿಹಾರಿಕಾ ಕೊಣಿದೆಲಾ….!

ಟಾಲಿವುಡ್ ನಟಿ ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣದೆ ವಿಫಲರಾದರು. ಬಳಿಕ ವೆಬ್ ಸಿರೀಸ್ ಹಾಗೂ ನಿರ್ಮಾಣದತ್ತ ಮುಖ…

ಟಾಲಿವುಡ್ ನಟಿ ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣದೆ ವಿಫಲರಾದರು. ಬಳಿಕ ವೆಬ್ ಸಿರೀಸ್ ಹಾಗೂ ನಿರ್ಮಾಣದತ್ತ ಮುಖ ಮಾಡಿದರು. ವಿಚ್ಚೇದನದ ಬಳಿಕ ನಿಹಾರಿಕಾ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ಆಕೆ ಹೆಚ್ಚಾಗಿ ವೈಯುಕ್ತಿಕ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ.

ಇತ್ತೀಚಿಗೆ ಮೆಗಾ ಪವರ್‍ ಸ್ಟಾರ್‍ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಮದುವೆ ಸಹ ಅದ್ದೂರಿಯಾಗಿ ನೆರವೇರಿತ್ತು. ಮದುವೆಯ ಬಳಿಕ ನಿಹಾರಿಕಾ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ನಿಹಾರಿಕಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಸದ್ಯ ನಿಹಾರಿಕಾ ಶೀಘ್ರದಲ್ಲೇ ಮನೆಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡಲಿದ್ದಾರಂತೆ. ಅದನ್ನು ಆಕೆ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಅಣ್ಣನ ಮದುವೆಯಾದ ಕೂಡಲೇ ನಿಹಾರಿಕಾ ಏಕೆ ಮನೆ ಬಿಟ್ಟು ಹೋಗುತ್ತಿದ್ದಾಳೆ ಎಂಬ ಬಗ್ಗೆ ಸಹ ಆಕೆ ಈ ವೇಳೆ ಹಂಚಿಕೊಂಡಿದ್ದಾರೆ. ಲಾವಣ್ಯ ತ್ರಿಪಾಠಿ ಹಾಗೂ ನಿಹಾರಿಕಾ ನಡುವೆ ಹೊಂದಾಣಿಕೆಯಾಗದ ಕಾರಣದಿಂದ ಆಕೆ ಮನೆ ಬಿಟ್ಟು ಹೋಗುತ್ತಿದ್ದಾಳೆ ಎಂದು ಸುದ್ದಿ ಹರಿದಾಡಿತ್ತು.

ಆದರೆ ಇದೆಲ್ಲಾ ಸುಳ್ಳು ಸುದ್ದಿಯಾಗಿದೆ. ನಿಹಾರಿಕಾಗೆ ಒಂಟಿಯಾಗಿ ಇರೋಕೆ ಆಸೆಯಂತೆ. ಅದಕ್ಕಾಗಿ ತನ್ನದೇ ಆದ ಮನೆ ಇರಬೇಕು ಎಂದು, ಆ ಮನೆಗೆ ಕಟ್ಟೋಕೆ ಹಣ ಸಹ ಸ್ವಂತ ಸಂಪಾದನೆ ಮಾಡಬೇಕು. ಅದು ಸಾಲದೇ ತಂದೆಯ ಬಳಿ ಹಣ ಪಡೆದುಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದಾರಂತೆ. ಆ ಮನೆ ಪೂರ್ಣಗೊಂಡ ಕೂಡಲೇ ಅದೇ ಮನೆಯಲ್ಲಿ ಆಕೆ ಜೀವಿಸಬೇಕೆಂದು, ಸ್ವತಂತ್ರವಾಗಿ ಜೀವನ ಸಾಗಿಸಲು ಬಯಸುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಇನ್ನೂ ನಿಹಾರಿಕಾ ಇತ್ತೀಚಿಗೆ ಸಿನೆಮಾಗಳಲ್ಲಿ ಸಹ ಬ್ಯುಸಿಯಾಗುತ್ತಿದ್ದಾರೆ. ತನ್ನ ಸ್ವಂತ  ನಿರ್ಮಾಣ ಸಂಸ್ಥೆಯ ಮೂಲಕ ಕೆಲವೊಂದು ವೆಬ್ ಸಿರೀಸ್ ಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.