ಜೂನಿಯರ್ ಎನ್.ಟಿ.ಆರ್ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರಂತೆ ಸೀರಿಯಲ್ ನಟಿ ಜ್ಯೋತಿ ರಾಯ್, ವೈರಲ್ ಆದ ಕ್ರೇಜಿ ರೂಮರ್…..!

Follow Us :

ಸಿನಿರಂಗದಲ್ಲಿ ಆಗಾಗ ಕೆಲವೊಂದು ಶಾಕಿಂಗ್ ವಿಚಾರಗಳು ಸಂಚಲನ ಸೃಷ್ಟಿಸುತ್ತಿರುತ್ತದೆ. ಕೆಲವೊಂದು ಕಾಂಬಿನೇಷನ್ ಗಳ ಬಗ್ಗೆ ಸುದ್ದಿಗಳು ಹೊರಬಂದರೇ ಕಡಿಮೆ ಸಮಯದಲ್ಲೆ ಭಾರಿ ವೈರಲ್ ಆಗುತ್ತಾ ಚರ್ಚೆಗೆ ಗ್ರಾಸವಾಗುತ್ತದೆ. ಅದೇ ರೀತಿ ಇದೀಗ ಗ್ಲೋಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಜ್ಯೋತಿರಾಯ್ ಕಾಂಬಿನೇಷನ್ ನಲ್ಲಿ ಸಿನೆಮಾ ಒಂದು ಬರಲಿದೆ. ಈ ಸಿನೆಮಾದಲ್ಲಿ ಜ್ಯೋತಿ ರಾಯ್ ಜೊತೆ ಜೂನಿಯರ್‍ ಎನ್.ಟಿ.ಆರ್‍ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಸೌತ್ ಸಿನಿರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ತೆಲುಗಿನಲ್ಲಿ ಪ್ರಸಾರವಾಗುತ್ತಿದ್ದ ಗುಪ್ಪೆಡಂತ ಮನಸ್ಸು ಎಂಬ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಇತ್ತೀಚಿಗೆ ಭಾರಿ ಸುದ್ದಿ ಮಾಡುತ್ತಿದ್ದಾರೆ. ಕಿರುತೆರೆಯನ್ನು ಬಿಟ್ಟು ಆಕೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಆಕೆ ಪ್ರೆಟ್ಟಿ ಗರ್ಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತ ತಾನು ಕಡಿಮೆಯಿಲ್ಲ ಎಂಬಂತೆ ಸ್ಕಿನ್ ಶೋ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆಯ ಕುರಿತಂತೆ ರೂಮರ್‍ ಒಂದು ಭಾರಿ ಸದ್ದು ಮಾಡುತ್ತಿದೆ.

ಸದ್ಯ ಎನ್.ಟಿ.ಆರ್‍ ವರು ದೇವರ ಸಿನೆಮಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಮುಗಿದ ಕೂಡಲೇ ಪ್ರಶಾಂತ್ ನೀಲ್ ಜೊತೆಗೆ NTR31 ಸಿನೆಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಈ ಸಿನೆಮಾದಲ್ಲಿ ಜ್ಯೋತಿರಾಯ್ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಪ್ರಶಾಂತ್ ನೀಲ್ ಹಾಗೂ ಜ್ಯೋತಿ ರಾಯ್ ಬಾಯ್ ಫ್ರೆಂಡ್ ಸುಕು ಪುರಾಜ್ ಒಳ್ಳೆಯ ಸ್ನೇಹಿತರಾಗಿದ್ದು, ಆತನೇ ಜ್ಯೋತಿರಾಯ್ ರವರನ್ನು NTR31 ಸಿನೆಮಾದಲ್ಲಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಅದರಲ್ಲೂ ಈ ಸಿನೆಮಾದಲ್ಲಿ ಆಕೆ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸ್ಪೇಷಲ್ ಸಾಂಗ್ ಒಂದರಲ್ಲಿ ನಟಿಸಲು ಜ್ಯೋತಿರಾಯ್ ರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದ್ದು, ಇದು ಸೌತ್ ನಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ಸದ್ಯ ಈ ಸುದ್ದಿ ಸೌತ್ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶ ಇದೆ ಎಂಬುದನ್ನು ಪಕ್ಕಕ್ಕಿಟ್ಟರೇ ಸುದ್ದಿ ಮಾತ್ರ ಭಾರಿ ವೈರಲ್ ಆಗುತ್ತಿದೆ. ಈ ಸುದ್ದಿ ನಿಜವಾಗುತ್ತಾ ಅಥವಾ ರೂಮರ್‍ ಆಗಿಯೇ ಉಳಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.