Film News

ಯಾನಿಮಲ್ ಸಿನೆಮಾದ ಬೆಡ್ ರೂಂ ದೃಶ್ಯದ ಬಗ್ಗೆ ನಟಿ ತೃಪ್ತಿ ಶಾಕಿಂಗ್ ಕಾಮೆಂಟ್ಸ್, ನನ್ನ ಪಾತ್ರಕ್ಕೆ ನ್ಯಾಯ ಮಾಡಿದ್ದೀನಿ ಎಂದ ನಟಿ…..!

ಬಾಲಿವುಡ್ ಸ್ಟಾರ್ ನಟ ರಣಬೀರ ಕಪೂರ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ನಲ್ಲಿ ತೆರೆಕಂಡಂತಹ ಯಾನಿಮಲ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಪ್ರದರ್ಶನ ಆಗುತ್ತಿದೆ. ಈ ಸಿನೆಮಾ ವರ್ಲ್ಡ್ ವೈಡ್ ನಲ್ಲಿ ಬರೊಬ್ಬರಿ 500 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಕೆಲವೊಂದು ದೃಶ್ಯಗಳ ಬಗ್ಗೆ ವಿಮರ್ಶೆಗಳು ಎದುರಾಗುತ್ತಿದ್ದರೂ ಸಹ ಸಿನೆಮಾ ಒಳ್ಳೆಯ ಪ್ರದರ್ಶನ ಆಗುತ್ತಿದೆ. ಈ ಸಿನೆಮಾದಲ್ಲಿ ನಟಿಸಿದ ನಟಿ ತೃಪ್ತಿ ಇದೀಗ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಯಾನಿಮಲ್ ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಈ ಸಿನೆಮಾದಲ್ಲಿ ತಂದೆ ಸೆಂಟಿಮೆಂಟ್, ರಣಬೀರ್ ನಟನೆ, ರಶ್ಮಿಕಾ ಬೋಲ್ಡ್ ನಟನೆ ಮೊದಲಾರ್ಧದಲ್ಲಿ ಸಿನೆಮಾಗೆ ಒಳ್ಳೆಯ ರೆಸ್ಪಾನ್ಸ್ ಬರುವಂತೆ ಮಾಡಿದೆ ಎನ್ನಬಹುದು. ಈ ಸಿನೆಮಾದಲ್ಲಿ ಯಂಗ್ ಬ್ಯೂಟಿ ತೃಪ್ತಿ ಡಿಮೆರಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು. ಆಕೆಯ ಪಾತ್ರ ಕಡಿಮೆಯಾದರೂ ಸಹ ಬೋಲ್ಡ್ ದೃಶ್ಯದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು. ರಣಬೀರ್‍ ಜೊತೆಗೆ ಆಕೆ ಬೆಡ್ ಮೇಲೆ ನ್ಯೂಡ್ ಆಗಿ ನಟಿಸಿದ್ದರು. ಈ ದೃಶ್ಯಗಳು ಸೋಷಿಯಲ್ ಮಿಡಿಯಾದಲ್ಲಿ ಲೀಕ್ ಆಗಿದ್ದು, ಹಾಟ್ ಟಾಪಿಕ್ ಆಗಿದ್ದು, ಆಕೆ ಸಹ ಭಾರಿ ಸುದ್ದಿಯಾದರು. ಆಕೆಯ ನಟನೆಗೆ ಫಿದಾ ಆದ ಅನೇಕ ಯುವಕರು ಆಕೆಯ ಮೇಲೆ ಕ್ರಷ್ ಬೆಳೆಸಿಕೊಂಡಿದ್ದಾರೆ ಎನ್ನಬಹುದು. ಇಂಟರ್‍ ನೆಟ್ ನಲ್ಲಂತೂ ಆಕೆಯ ಬಗ್ಗೆ ಚರ್ಚೆಗಳೂ ಸಹ ನಡೆಯುತ್ತಲೇ ಇದೆ.

ಇನ್ನೂ ಯಾನಿಮಲ್ ಸಿನೆಮಾದ ಬಗ್ಗೆ ಈಗಾಗಲೇ ತೃಪ್ತಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬರುತ್ತಿರುವ ಕಾಮೆಂಟ್ ಗಳಿಗೆ ಆಕೆ ಕೌಂಟರ್‍ ಕೊಟ್ಟಿದ್ದಾರೆ. ಎಲ್ಲರೂ ಯಾನಿಮಲ್ ಸಿನೆಮಾದಲ್ಲಿ ಬೆಡ್ ರೂಂ ದೃಶ್ಯದ ಬಗ್ಗೆ ಮಾತನಾಡುತ್ತಿದ್ದೀರಾ, ಯಾನಿಮಲ್ ಸಿನೆಮಾದಲ್ಲಿ ಆ ದೃಶ್ಯದಲ್ಲಿ ನಟಿಸುವುದಕ್ಕೂ ಮುಂಚೆ ನಾನು ಬುಲ್ ಬುಲ್ ಎಂಬ ಸಿನೆಮಾದಲ್ಲಿ ರೇಪ್ ದೃಶ್ಯದಲ್ಲಿ ನಟಿಸಿದ್ದೆ. ಆ ದೃಶ್ಯಕ್ಕಿಂತ ಯಾನಿಮಲ್ ಸಿನೆಮಾದ ಆ ದೃಶ್ಯ ತುಂಭಾನೆ ಬೆಟರ್‍. ನನಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಮಾಡುವುದು ನನ್ನ ಕರ್ತವ್ಯ. ಅದರಂತೆ ಬಟ್ಟೆ ಇಲ್ಲದೇ ನಟಿಸಬೇಕಾದರೇ ಅದೇ ರೀತಿ ಮಾಡಬೇಕು. ಅದು ತಪ್ಪಲ್ಲ. ಇನ್ನೂ ಯಾನಿಮಲ್ ಸಿನೆಮಾದಲ್ಲಿ ಬೆಡ್ ರೂಂ ದೃಶ್ಯದ ಚಿತ್ರೀಕರಣದ ವೇಳೆ ನಾಲ್ಕು ಮಂದಿ ಮಾತ್ರ ಇದ್ದರು. ನಿರ್ದೇಶಕ ನನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ.

ಇನ್ನೂ ಆ ದಿನ ನನ್ನ ಜೊತೆ ರಣಬೀರ್‍, ಸಂದೀಪ್ ರೆಡ್ಡಿ ಹಾಗೂ ಕ್ಯಾಮೆರಾಮ್ಯಾನ್ ಮಾತ್ರ ಇದ್ದೆವು. ಪದೇ ಪದೇ ನೀನಗೆ ಸರಿಯಿದೆಯೇ, ಏನಾದರೂ ಸಮಸ್ಯೆ ಇದೆಯೇ ಎಂದು ತುಂಬಾನೆ ಕೇರ್‍ ತೆಗೆದುಕೊಂಡಿದ್ದರು. ಇನ್ನೂ ರಣಬೀರ್‍ ಜೊತೆಗೆ ನಟಿಸುವ ಕಾರಣ ನನಗೆ ಕೊಂಚ ಭಯ ಇತ್ತು. ಆದರೆ ರಣಬೀರ್‍ ನನ್ನನ್ನು ಅರ್ಥ ಮಾಡಿಕೊಂಡು ನನ್ನ ಭಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದರು ಎಂದು ಆಕೆ ಹೇಳಿದ್ದಾರೆ. ಇನ್ನೂ ತೃಪ್ತಿ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top