Film News

ಆ ಪ್ರಶ್ನೆಯನ್ನು ಹಿರೋಗಳಿಗೆ ಕೇಳುವ ಧೈರ್ಯ ನಿಮಗಿದೆಯೇ ಎಂದ ಸೀನಿಯರ್ ಬ್ಯೂಟಿ ಶ್ರೇಯಾ, ವೈರಲ್ ಆದ ಕಾಮೆಂಟ್ಸ್…….!

ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ಬಹುಬೇಡಿಕೆ ನಟಿಯಾಗಿ ಮೀಡಿಯಂ ರೇಂಜ್ ನಿಂದ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡ ಶ್ರೇಯಾ ಶರನ್ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಸುಮಾರು 20 ವರ್ಷಗಳಿಂದ ಸಿನಿಮಾಗಳ ಮೂಲಕ ರಂಜಿಸುತ್ತಿರುವ ಶ್ರೇಯಾ ಇಷ್ಟಂ ಎಂಬ ಸಿನೆಮಾದ ಮೂಲಕ ತೆಲುಗು ರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ಈ ಹಿಂದೆ ಸಂದರ್ಶನವೊಂದರಲ್ಲಿ ನಡೆದ ಸಂದರ್ಶನದಲ್ಲಿ ಆಕೆ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸೀನಿಯರ್‍ ಹಾಟ್ ಬ್ಯೂಟಿ ಶ್ರೇಯಾ ಶರಣ್ ಈ ಹಿಂದೆ ಸಂದರ್ಶನವೊಂದರಲ್ಲಿ ನಿರೂಪಕ ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಶಾಕಿಂಗ್ ಉತ್ತರ ನೀಡಿದ್ದರು. ಸಂದರ್ಶನದಲ್ಲಿ ಆಕೆಗೆ ತನ್ನ ಸೌಂದರ್ಯದ ಬಗ್ಗೆ ಪ್ರಶ್ನೆ ಎದುರಾಗಿದೆ. ಮದುವೆಯಾದರೂ ಸಹ ನೀವು ಸೌಂದರ್ಯವಾಗಿ ಕಾಣಿಸಿಕೊಳ್ಳಲು ಕಾರಣವೇನು ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ರಿಯಾಕ್ಟ್ ಆಗಿದ ಶ್ರೇಯಾ ಈ ಪ್ರಶ್ನೆಯನ್ನು ನೀವು ಕೇವಲ ನಮ್ಮನ್ನು ಮಾತ್ರ ಏಕೆ ಕೇಳೊದು ಹಿರೋಗಳನ್ನು ಏಕೆ ಕೇಳುವುದಿಲ್ಲ. ಅವರನ್ನು ಕೇಳುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಆಕೆ ಮಾತನಾಡುತ್ತಾ ನನ್ನ ಅನೇಕ ಸ್ನೇಹಿತರು ನನ್ನನ್ನು ನೋಡಿ ಮಗು ಹುಟ್ಟಿದ ಬಳಿಕವೂ ತುಂಬಾ ಸುಂದರವಾಗಿ ಕಾಣುತ್ತಿದ್ದಿಯಾ ಎಂದರೇ ನಂಬಲು ಆಗುತ್ತಿಲ್ಲ ಎಂದು ಹೇಳುತ್ತಾರೆ.

ಇನ್ನೂ ಇಲ್ಲಿ ಸೌಂದರ್ಯ ಒಂದೇ ಮುಖ್ಯವಲ್ಲ. ನನ್ನ ವಯಸ್ಸು ಎಷ್ಟು, ನಾನು ಇಂಡಸ್ಟ್ರಿಯಲ್ಲಿ ಎಷ್ಟು ವರ್ಷಗಳಿಂದ ಇದ್ದೀನಿ ಎಂಬುದು ಮಾತ್ರ ಮುಖ್ಯ. ನನ್ನನ್ನು ಮದುವೆಯಾದರೂ ಸಹ ಸುಂದರವಾಗಿದ್ದೀರಾ ಎಂದು ಕೇಳುವಂತೆ ಹಿರೋಗಳನ್ನು ಸಹ ಕೇಳುವ ಧೈರ್ಯ ನಿಮಗಿದೆಯೇ, ಅದೇ ದಿನ ನಾನು ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದು ಶ್ರೇಯಾ ಉತ್ತರಿಸಿದ್ದಾರೆ. ಶ್ರೇಯಾ ಉತ್ತರಕ್ಕೆ ನಿರೂಪಕ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇಅಲ್ಲದೇ ಶ್ರೇಯಾ ಉತ್ತರಕ್ಕೆ ನೆಟ್ಟಿಗರೂ ಸಹ ಬೆಂಬಲಿಸಿದ್ದಾರೆ. ನೇರವಾಗಿ ಹೇಳಿದ ಶ್ರೇಯಾರವರ ಧೈರ್ಯವನ್ನು ಮೆಚ್ಚಿದ್ದಾರೆ. ಈ ವಿಡಿಯೋ ವನ್ನು ನೆಟ್ಟಿಗನೋರ್ವ ತನ್ನ ಟ್ವಿಟರ್‍ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಶ್ರೇಯಾ ಕಳೆದ 2018 ರಲ್ಲಿ ಆಂಡ್ರೂ ಎಂಬಾತನನ್ನು ಮದುವೆಯಾದರು. ಅವರಿಬ್ಬರಿಗೆ ಓರ್ವ ಮಗಳು ಸಹ ಇದ್ದಾರೆ. ಮದುವೆಯಾದ ಬಳಿಕವೂ ಶ್ರೇಯಾ RRR, ಗಮನಂ, ತಡ್ಕಾ, ದೃಶ್ಯಂ-2 ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ಆಕೆ ಕಬ್ಜಾ ಸಿನೆಮಾದಲ್ಲಿ ಕಾಣಿಸಿಕೊಂಡರು. ಇದೀಗ ಆಕೆ ಶೀಘ್ರದಲ್ಲೇ ಮ್ಯೂಜಿಕ್ ಸ್ಕೂಲ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಜೊತೆಗೆ ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.

Most Popular

To Top