ಪತಿಯನ್ನು ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಮಾಡಿದ ಸೀನಿಯರ್ ನಟಿ ಸುರೇಖಾವಾಣಿ…..!

ತೆಲುಗು ಸಿನಿರಂಗದ ಖ್ಯಾತ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾ ವಾಣಿ ಇತ್ತೀಚಿಗೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ. ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡ ಈಕೆ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳು, ವಿಡಿಯೋಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ತನ್ನ ಪತಿಯನ್ನು ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಒಂದನ್ನು ಮಾಡಿದ್ದು, ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನಿರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕಲಾವಿದರೂ ಸಹ ದೊಡ್ಡದಾಗಿಯೇ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೀನಿಯರ್‍ ಕಲಾವಿದರಾದ ಪ್ರಗತಿ, ಹೇಮಾ ಮೊದಲಾದವರು ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಸೀನಿಯರ್‍ ನಟಿ ಸುರೇಖಾವಾಣಿ ಸಹ ಸೇರುತ್ತಾರೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಆಕೆ ಸಿನೆಮಾಗಳಿಗಿಂತ ಹೆಚ್ಚಾಗಿ ಸೋಷಿಯಲ್ ಮಿಡಿಯಾ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ಸ್ಟಾರ್‍ ಹಾಸ್ಯ ನಟರ ಪತ್ನಿಯಾಗಿ ಸೇರಿದಂತೆ ಅನೇಕ ಪಾತ್ರಗಳಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಅನೇಕ ಹಿಟ್ ಸಿನೆಮಾಗಳು ಸಹ ಈಕೆಯ ಖಾತೆಯಲ್ಲಿವೆ.

ಇನ್ನೂ ಸುರೇಖಾವಾಣಿ ಕಿರುತೆರೆಯ ಆಂಕರ್‍ ಆಗಿ ಕೆರಿಯರ್‍ ಆರಂಭಿಸಿ, ಬಳಿಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಿರ್ದೇಶಕ ಸುರೇಶ್ ತೇಜ ಎಂಬಾತನನ್ನು ವಿವಾಹವಾದರು. ಮೊಗುಡ್ಸ್ ಪೆಳ್ಳಾಮ್ಸ್ ಎಂಬ ಕಾರ್ಯಕ್ರಮದ ಮೂಲಕ ಸುರೇಖಾವಾಣಿಗೆ ದೊಡ್ಡ ಮಟ್ಟದ ಹೆಸರು ಬಂತು. ಬಳಿಕ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಇನ್ನೂ ಸುರೇಖಾವಾಣಿ ಪತಿ ಸುರೇಶ್ ತೇಜ ಅನಾರೋಗ್ಯದ ನಿಮಿತ್ತ ಮೃತಪಟ್ಟರು. ಈ ಕಾರಣದಿಂದ ಆಕೆ ಸುಮಾರು ದಿನಗಳ ಕಾಲ ಡಿಪ್ರೆಷನ್ ಗೆ ಗುರಿಯಾಗಿದ್ದರು. ಹೊರಗಿನ ಪ್ರಪಂಚದಲ್ಲಿ ಆಕೆ ಕಾಣಿಸಿಕೊಳ್ಳಲೇ ಇಲ್ಲ. ಬಳಿಕ ಡಿಪ್ರೆಷನ್ ನಿಂದ ಹೊರಬಂದು ಮಗಳೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಇದೀಗ ತನ್ನ ಪತಿಯನ್ನು ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇನ್ನೂ ತನ್ನ ಪತಿಯ ಹುಟ್ಟುಹಬ್ಬದ ಅಂಗವಾಗಿ ಆತನನ್ನು ನೆನಪಿಸಿಕೊಂಡು ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಕಣ್ಣುಗಳಲ್ಲಿ ಸಂತೋಷ, ಸಂತೋಷಕ್ಕಿಂತ ನೀನು ನನ್ನ ಪಕ್ಕದಲ್ಲಿ ಇಲ್ಲ ಎಂಬ ನೋವು ನನ್ನನ್ನು ಭಾರಿ ಕಾಡುತ್ತಿದೆ. ಆದರೆ ನಿನ್ನ ಪ್ರೀತಿ, ಆರ್ಶಿವಾದ ಸದಾ ನನ್ನೊಂದಿಗೆ ಇರುತ್ತದೆ ಎಂದು ನನಗೆ ಗೊತ್ತು. ಪ್ರತಿ ಹುಟ್ಟುಹಬ್ಬದಂದು ನೀನು ಸಂಭ್ರಮಿಸಿದ ಕ್ಷಣಗಳು ಇಂದಿಗೂ ಸಹ ನನಗೆ ನೆನಪಿಗೆ ಬರುತ್ತಿದೆ, ನಿನ್ನನ್ನು ತುಂಬಾ ಮಿಸ್ ಆಗುತ್ತಿದ್ದೇನೆ, ಲವ್ ಯು ಫಾರೆವರ್‍ ಎಂದು ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ.ಇನ್ನೂ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.