ತನ್ನ ಮದುವೆಯ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಸ್ಟಾರ್ ನಟಿ ಶ್ರೇಯಾ ಶರಣ್….!

ದೆಹಲಿ ಮೂಲದ ಶ್ರೇಯಾ ಶರಣ್ ಅನೇಕ ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಟಾಪ್ ನಟಿಯಾಗಿ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದಾರೆ. ಇಷ್ಟಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸಂತೋಷಂ,…

ದೆಹಲಿ ಮೂಲದ ಶ್ರೇಯಾ ಶರಣ್ ಅನೇಕ ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಟಾಪ್ ನಟಿಯಾಗಿ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದಾರೆ. ಇಷ್ಟಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸಂತೋಷಂ, ಚೆನ್ನಕೇಶವರೆಡ್ಡಿ, ನುವ್ವೆ ನುವ್ವೆ ಸೇರಿದಂತೆ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಬಳಿಕ ಅನೇಕ ವರ್ಷಗಳ ಕಾಲ ಆಕೆ ಟಾಪ್ ಸ್ಥಾನದಲ್ಲೆ ಇದ್ದರು. ಟ್ಯಾಲೆಂಟೆಡ್ ಹಾಗೂ ಪ್ರೋಫೇಷನಲ್ ಡ್ಯಾನ್ಸ್ ಜೊತೆಗೆ ಆಕ್ಟಿಂಗ್ ಸ್ಕಿಲ್ಸ್ ಸಹ ಹೊಂದಿರುವ ಈಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು.

ಕಳೆದ 2018 ಮಾರ್ಚ್ 19 ರಲ್ಲಿ ಮುಂಬೈನಲ್ಲಿ ಶ್ರೇಯಾ ಶರಣ್ ರಷ್ಯಾ ಮೂಲಕ ಆಂಡ್ರೂ ಕೋಷಿವ್ ಎಂಬಾತನನ್ನು ಮದುವೆಯಾದರು. ಉದ್ಯಮಿಯಾದ ಆಂಡ್ರೂ ಜೊತೆಗೆ ಸುಮಾರು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಬಳಿಕ ಇವರಿಬ್ಬರೂ ಮದುವೆಯಾದರು. ಇನ್ನೂ ಅವರ ಮದುವೆ ಸಹ ಸರಳವಾಗಿ ನಡೆಯಿತು. ಮಾ.19 ರಂದು ಅವರ ಮದುವೆ ವಾರ್ಷಿಕೋತ್ಸವ ಆಗಿದ್ದು, ತಮ್ಮ ಅಭಿಮಾನಿಗಳೊಂದಿಗೆ ಮದುವೆಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳ ಜೊತೆಗೆ ಹ್ಯಾಪಿ ಮ್ಯಾರೆಜ್ ಅನಿವರ್ಸರಿ ಆಂಡ್ರೂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಶ್ರೇಯಾ ತನ್ನ ಮದುವೆ ಪೊಟೋಗಳನ್ನು ವಾರ್ಷಿಕೋತ್ಸವದ ಅಂಗವಾಗಿ ಹಂಚಿಕೊಂಡಿದ್ದಾರೆ. ಇನ್ನೂ ಶ್ರೇಯಾ 2020 ರಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಈ ವಿಚಾರವನ್ನೂ ಸಹ ಶ್ರೇಯಾ ಗೌಪ್ಯವಾಗಿಯೇ ಇಟ್ಟಿದ್ದರು. ಜೊತೆಗೆ ಅದು ಕೋವಿಡ್ ಲಾಕ್ ಡೌನ್ ಸಮಯವಾದ್ದರಿಂದ ಈ ವಿಚಾರ ಸಹ ಹೊರಗೆ ಬರಲಿಲ್ಲ. ಆಕೆ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ಕೊಟ್ಟಿದ್ದು ಎಲ್ಲವೂ ಸಹ ಯಾರಿಗೂ ತಿಳಿಯದೇ ನಡೆದು ಹೋಯಿತು. ಆದರೆ ಶ್ರೇಯಾ ಈ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡರು. ಈ ಸುದ್ದಿಯನ್ನು ಹಂಚಿಕೊಂಡ ಕೂಡಲೇ ಶ್ರೇಯಾ ಅಭಿಮಾನಿಗಳೂ ಸಹ ಶಾಕ್ ಆದರು. ಶ್ರೇಯಾ ತನ್ನ ಅಭಿಮಾನಿಗಳೊಂದಿಗೆ ಆಗಾಗ ತನ್ನ ಮಗಳೊಂದಿಗೆ ಆಟ ಆಡುವ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಶ್ರೇಯಾ ಶರಣ್ ಸೆಕೆಂಡ್ ಇನ್ನಿಂಗ್ಸ್ ಸಹ ಕ್ರೇಜಿ ಆಫರ್‍ ಗಳನ್ನು ಪಡೆದುಕೊಂಡು ಸಾಗಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾ RRR, ಬಾಲಿವುಡ್ ನಲ್ಲಿ ದೃಶ್ಯಂ-2 ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡರು. ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನೆಮಾ ಕಬ್ಜಾ ಸಿನೆಮಾದಲ್ಲಿ ಉಪೇಂದ್ರರವರಿಗೆ ಜೋಡಿಯಾಗಿ ಶ್ರೇಯಾ ಶರಣ್ ನಟಿಸಿದ್ದಾರೆ. ಸದ್ಯ ಶ್ರೇಯಾ ಶರಣ್ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಯಂಗ್ ಬ್ಯೂಟಿಯರನ್ನೂ ಸಹ ನಾಚಿಸುವಂತೆ ಮಾಡುತ್ತಿರುತ್ತಾರೆ.