Film News

ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಎಂದು ಪೋಸ್ಟ್ ಮಾಡಿದ ಹರಿಪ್ರಿಯಾ, ವೈರಲ್ ಆದ ಆಕೆ ಪೋಸ್ಟ್…..!

ಸುಮಾರು ದಿನಗಳ ಕಾಲ ನಿಗೂಡವಾಗಿಯೇ ಪ್ರೀತಿಸಿದ ಸ್ಯಾಂಡಲ್ ವುಡ್ ನ ಹರಿಪ್ರಿಯಾ ಹಾಗೂ ವಸಿಷ್ಟ ಸಿಂಹ ಜ.26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾದರು. ಕಳೆದ ವರ್ಷದ ಡಿಸೆಂಬರ್‍ ಮಾಹೆಯಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿದ್ದು, ಸರಳವಾಗಿ ಈ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಇನ್ನೂ ಅವರ ಮದುವೆ ಕಾರ್ಯಕ್ರಮದಲ್ಲಿ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ರಾಜಕಾರಣಿಗಳೂ ಸಹ ಭಾಗವಹಿಸಿ ನೂತನ ವಧು ವರರನ್ನು ಆರ್ಶಿವದಿಸಿದ್ದರು. ಇದೀಗ ಹರಿಪ್ರಿಯಾ ಹಂಚಿಕೊಂಡ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ನಡೆದು ಇನ್ನೂ ಎರಡು ತಿಂಗಳು ಸಹ ಆಗಿಲ್ಲ. ಆದರೆ ಆಕೆ ಇದೀಗ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಿಂದ ಗುಡ್ ನ್ಯೂಸ್ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಅಭಿಮಾನಿಗಳ ತಲೆಗೆ ಹುಳು ಸಹ ಬಿಟ್ಟಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಇದೀಗ ಹರಿಪ್ರಿಯಾ ಹಂಚಿಕೊಂಡ ಪೋಸ್ಟ್ ಸಹ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಹರಿಪ್ರಿಯಾ ನೀಡಲಿರುವ ಆ ಗುಡ್ ನ್ಯೂಸ್ ಏನು ಎಂಬುದರ ಬಗ್ಗೆ ಸಹ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದಲ್ಲೇ ಚರ್ಚೆಗಳೂ ನಡೆಯುತ್ತಿವೆ. ಇನ್ನೂ ಹರಿಪ್ರಿಯಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಏನು ಎಂಬ ವಿಚಾರಕ್ಕೆ ಬಂದರೇ.

ನಟಿ ಹರಿಪ್ರಿಯಾ ತನ್ನ ಇನ್ಸ್ಟಾಗ್ರಾಂ ನಲ್ಲಿ ಹೊಸ ಆರಂಭ, ಹೊಸ ಜೀವನ, ಹೊಸ ಜೀವನಶೈಲಿ, ಹೊಸ ಜವಾಬ್ದಾರಿ, ಅತೀ ಶೀಘ್ರದಲ್ಲೇ ಹೊಸ ಆಗಮನ, ಖುಷಿಯಾಗಿದ್ದೇನೆ, ಕಾಯಲು ಆಗುತ್ತಿಲ್ಲ ಎಂಬ ಅರ್ಥಗಳು ಬರುವಂತೆ ಹ್ಯಾಷ್ ಟ್ಯಾಗ್ ಮಾಡುವ ಮೂಲಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಗುವಿನ ಆಗಮನವಾಗಲಿದೆ. ಹರಿಪ್ರಿಯಾ ಗರ್ಭಿಣಿಯಾಗಿದ್ದಾರೆ ಎಂಬೆಲ್ಲಾ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹರಿಪ್ರಿಯಾ ಮಾತ್ರ ಆ ಗುಡ್ ನ್ಯೂಸ್ ಏನು ಎಂಬುದರ ಬಗ್ಗೆ ತಿಳಿಸಿಲ್ಲ. ಇನ್ನೂ ಸಾಮಾನ್ಯವಾಗಿ ಮದುವೆಯಾದ ಬಳಿಕ ಸಿಹಿ ಸುದ್ದಿ ಅದೇ ಇರಬಹುದು ಎಂದು ಹೇಳಲಾಗುತ್ತಿದೆ. ಈ ಪೋಸ್ಟ್ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗಳೂ ಸಹ ಶುರುವಾಗಿದೆ.

ಇನ್ನೂ ಹರಿಪ್ರಿಯಾ ಹಂಚಿಕೊಂಡ ಪೋಸ್ಟ್ ಗೆ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಗುಡ್ ನ್ಯೂಸ್ ಯಾವಾಗ ರಿವಿಲ್ ಮಾಡುತ್ತಿರಾ, ಏನದು ಗುಡ್ ನ್ಯೂಸ್, ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿರಾ ಸಿಂಹದ ಮರಿ ಆಗಮನದ ಬಗ್ಗೆ ಹೇಳುತ್ತೀರಾ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನೂ ಹರಿಪ್ರಿಯಾ ಈ ಬಗ್ಗೆ ಯಾವಾಗ ರಿವೀಲ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top