ಕಬ್ಜ ಸಿನೆಮಾದ ಸೀಕ್ವೆಲ್ ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ವೈರಲ್ ಆದ ಹೊಸ ಪೋಸ್ಟರ್, ಅಚ್ಚರಿಯ ಸುದ್ದಿ ವೈರಲ್…!

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕಬ್ಜ ಸಿನೆಮಾ ಕಳೆದೆರಡು ದಿನಗಳ ಹಿಂದೆಯಷ್ಟೆ ಥಿಯೇಟರ್‍ ಗಳಲ್ಲಿ ಅಬ್ಬರಿಸಿದೆ. ಕನ್ನಡದ ಸಿನೆಮಾಗಳು ಇತ್ತೀಚಿಗೆ ಗ್ಲೊಬಲ್ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಸಿನೆಮಾ ಬಿಡುಗಡೆಯಾದ ಎರಡೇ ದಿನಕ್ಕೆ ನೂರು ಕೋಟಿಯಷ್ಟು ಕಲೆಕ್ಷನ್ ಮಾಡಿದೆ. ಈ ಸಿನೆಮಾದಲ್ಲಿ ರಿಯಲ್ ಸ್ಟಾರ್‍ ಉಪೇಂದ್ರ, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಸಹ ನಟಿಸಿದ್ದಾರೆ. ಇದೀಗ ಕಬ್ಜ ಸಿನೆಮಾದ ಸೀಕ್ವೆಲ್ ನಲ್ಲಿ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಭಾರಿ ನಿರೀಕ್ಷೆಯಿಂದ ನಿರ್ದೇಶಕ ಚಂದ್ರು ಕಬ್ಜ ಸಿನೆಮಾವನ್ನು ತೆರೆಗೆ ತಂದಿದ್ದಾರೆ. ಕಬ್ಜ ಸಿನೆಮಾದ ಕ್ಲೈಮ್ಯಾಕ್ಸ್ ಮಾತ್ರ ಈ ಹಿಂದೆ ಯಾರೂ ಮಾಡದಂತಹ ಸಾಹಸವನ್ನೇ ಮಾಡಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಆಕ್ಷನ್ ಆರಂಭದಲ್ಲೇ ಸಿನೆಮಾ ಅಂತ್ಯವಾಗಿದೆ. ಈ ಹಾದಿಯಲ್ಲೇ ಕಬ್ಜ ಸಿನೆಮಾದ ಸೀಕ್ವೆಲ್ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿದೆ. ಇನ್ನೂ ಕಬ್ಜ-2 ನಲ್ಲಿ ಬೇರೆ ಭಾಷೆಯ ಸ್ಟಾರ್‍ ಗಳೂ ಸಹ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು, ಇದೀಗ ಕಬ್ಜ-2 ಪೋಸ್ಟರ್‍ ಗಳು ಕೆಲವು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈಗ ವೈರಲ್ ಆದಂತಹ ಪೋಸ್ಟರ್‍ ನಲ್ಲಿ ಪವನ್ ಕಲ್ಯಾಣ್ ಸಹ ಕಾಣಿಸಿಕೊಂಡಿರುವುದು ಸೌತ್ ಅಭಿಮಾನಿಗಳಲ್ಲಿ ಸರ್ಪ್ರೈಸ್ ಆಗಿದೆ. ಇನ್ನೂ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ ಅಷ್ಟೆ.

ಇನ್ನೂ ಕೆಜಿಎಫ್-2 ಸಿನೆಮಾದಲ್ಲೂ ಸಹ ಬಾಲಿವುಡ್ ನ ಕೆಲವು ಸ್ಟಾರ್‍ ಗಳು ಕಾಣಿಸಿಕೊಂಡಿದ್ದರು. ಇದೀಗ ಕಬ್ಜ-2 ನಲ್ಲೂ ಸಹ ಮತಷ್ಟು ಸ್ಟಾರ್‍ ಗಲು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಕಬ್ಜ ನಿರ್ದೇಶಕ ಆರ್‍.ಚಂದ್ರ ಹಾಗೂ ಪವನ್ ಕಲ್ಯಾಣ್ ರವರ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಕಬ್ಜ-2 ಪೋಸ್ಟರ್‍ ಗಳಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿರುವುದು ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇನ್ನೂ ಪವನ್ ಕಲ್ಯಾಣ್ ಈ ಸಿನೆಮಾದಲ್ಲಿ ನಟಿಸುತ್ತಾರಾ ಅಥವಾ ಇಲ್ಲವಾ, ಅಥವಾ ಬೇರೆ ಯಾವ ಸ್ಟಾರ್‍ ಗಳು ಈ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಶೀಘ್ರದಲ್ಲೇ ಚಿತ್ರತಂಡ ಹೊರಹಾಕಲಿದೆ.

ಇನ್ನೂ ಕಬ್ಜ ಸಿನೆಮಾ ಸಾವಿರಾರು ಥಿಯೇಟರ್‍ ಗಳಲ್ಲಿ ತೆರೆಕಂಡಿದೆ. ಭಾರಿ ನಿರೀಕ್ಷೆಯಿಂದ ಈ ಸಿನೆಮಾ ತೆರೆಗೆ ಬಂದಿದ್ದು, ದೊಡ್ಡ ಮಟ್ಟದಲ್ಲೇ ಪ್ರಮೋಷನ್ ಸಹ ಮಾಡಲಾಗಿತ್ತು. ಈ ಸಿನೆಮಾದ ತೆರೆಕಂಡು ಮೂರು ದಿನಗಳಲ್ಲೇ ಭಾರಿ ಕಲೆಕ್ಷನ್ ಸಹ ಮಾಡಿದೆ. ಇನ್ನೂ ಉಪೇಂದ್ರ ರವರ ಸಿನಿಮಾ ಕೆರಿಯರ್‍ ನಲ್ಲಿ ಭಾರಿ ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ. ಜೊತೆಗೆ ಅನೇಕ ಭಾಷೆಗಳ ಕಲಾವಿದರೂ ಸಹ ಈ ಸಿನೆಮಾ ನೊಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.