Film News

ಐಟಂ ಸಾಂಗ್ ಗಾಗಿ ಭಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ ಸೀನಿಯರ್ ನಟಿ ಶ್ರೇಯಾ ಶರಣ್….!

ಸಿನಿರಂಗದಲ್ಲಿ ಅನೇಕರು ವಯಸ್ಸಾದರೂ ಸಹ ಭಾರಿ ಕ್ರೇಜ್ ಪಡೆದುಕೊಳ್ಳುತ್ತಾ ಸಿನಿರಂಗದಲ್ಲಿ ಬ್ಯುಸಿಯಾಗುತ್ತಿರುತ್ತಾರೆ. ಈ ಸಾಲಿಗೆ ಸ್ಟಾರ್‍ ಸಿನೀಯರ್‍ ನಟಿ ಶ್ರೇಯಾ ಶರಣ್ ಸಹ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ವಯಸ್ಸಾದರೂ ಸಹ ದಿನೇ ದಿನೇ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ಮತಷ್ಟು ಫೇಂ ಸಂಪಾದಿಸಿಕೊಳ್ಳುತ್ತಿರುತ್ತಾರೆ. ಇದೀಗ ಐಟಂ ಸಾಂಗ್ ಒಂದರಲ್ಲಿ ಕುಣಿಯಲು ಶ್ರೇಯಾ ಭಾರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಅನೇಕ ವರ್ಷಗಳ ಕಾಲ ಸ್ಟಾರ್‍ ನಟರಿಂದ ಮೀಡಿಯಂ ರೇಂಜ್ ನಟರೊಂದಿಗೆ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡ ಶ್ರೇಯಾ ಶರಣ್ ಮದುವೆಯಾದರೂ ಸಹ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.  ಮದುವೆಯ ಬಳಿಕ ಸಿನೆಮಾಗಳಿಂದ ದೂರವಿದ್ದ ಈಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆಕೆಯ ಕೆರಿಯರ್‍ ಆರಂಭವಾಗಿ 20 ವರ್ಷಗಳು ಕಳೆದರೂಸ ಹ ಇನ್ನೂ ಆಕೆ ಅದೇ ಗ್ಲಾಮರ್‍ ಮೈಂಟೈನ್ ಮಾಡುತ್ತಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲಿ RRR, ದೃಶ್ಯಂ-2 (ಹಿಂದಿ) ಸಿನೆಮಾಗಳಲ್ಲಿ ನಟಿಸಿ ಭಾರಿ ಸಕ್ಸಸ್ ಕಂಡುಕೊಂಡರು.

ಇದೀಗ ಶ್ರೇಯಾ ಶರಣ್ ರವರಿಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಐಟಂ ಸಾಂಗ್ ಒಂದಕ್ಕಾಗಿ ಭಾರಿ ಸಂಭಾವನೆ ಬೇಡಿಕೆಯಿಟ್ಟಿದ್ದರಂತೆ. ಟಾಲಿವುಡ್ ಸ್ಟಾರ್‍ ಮೆಗಾಸ್ಟಾರ್‍ ಚಿರಂಜೀವಿ ನಟಿಸುತ್ತಿರುವ ಭೋಳಾ ಶಂಕರ ಸಿನೆಮಾದಲ್ಲಿ ಐಟಂ ಸಾಂಗ್ ಗಾಗಿ ಶ್ರೇಯಾ ರವರನ್ನು ಸಂಪರ್ಕ ಮಾಡಿದ್ದು, ಈ ಹಾಡಿಗಾಗಿ ಬರೊಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾ ಸೇರಿದಂತೆ ಟಾಲಿವುಡ್ ಅಂಗಳದಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲವಾದರೂ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ.

ಒಂದು ವೇಳೆ ಈ ಸುದ್ದಿ ನಿಜವೇ ಆದರೇ ಶ್ರೇಯಾ ರವರ ಕ್ರೇಜ್ ಮತಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಭೋಳಾ ಶಂಕರ್‍ ಟೀಂ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ಆ.11 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇತ್ತೀಚಿಗಷ್ಟೆ ಉಪೇಂದ್ರ ರವರ ಜೊತೆಗೆ ಕಬ್ಜ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಒಳ್ಳೆಯ ಕಲೆಕ್ಷನ್ ಮಾಡಿದೆ.

Most Popular

To Top