Film News

ಡೇಟಿಂಗ್ ಬಗ್ಗೆ ಕಾಮೆಂಟ್ ಮಾಡಿದ ಸುಪ್ರೀಂ ಹಿರೋ ಸಾಯಿ ಧರಮ್, ಆಕೆಗೆ ಡೇಟ್ ಮಾಡೋಣ ಅಂದ್ರೆ ಬಾಯ್ ಪ್ರೆಂಡ್ ಇದ್ದಾನೆ ಎಂದ್ಳಂತೆ….!

ತೆಲುಗು ಸಿನಿರಂಗದ ಮೆಗಾ ಕುಟುಂಬದ ಸುಪ್ರೀಂ ಹಿರೋ ಸಾಯಿ ಧರಮ್ ತೇಜ್ ಕೆಲವು ತಿಂಗಳುಗಳ ಹಿಂದೆ ಭೀಕರ ಅಪಘಾತಕ್ಕೆ ಗುರಿಯಾಗಿದ್ದರು. ಈ ಅಪಘಾತದಿಂದ ಚೇತರಿಕೆಯಾದ ಬಳಿಕ ಆತ ವಿರೂಪಾಕ್ಷ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾ ಏ.21 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇನ್ನೂ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿದೆ. ಪ್ರಮೋಷನ್ ಭಾಗವಾಗಿ ಸಾಯಿ ಧರಮ್ ತೇಜ್ ಅನೇಕ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದು, ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟ ಸಾಯಿ ಧರಮ್  ತೇಜ್ ಕಳೆದ 2021 ರಲ್ಲಿ ಭೀಕರ ಅಪಾಘತಕ್ಕೆ ಗುರಿಯಾಗಿದ್ದರು. ಅದರಿಂದ ಗುಣಮುಖರಾಗಲು ಅನೇಕ ತಿಂಗಳುಗಳು ಬೇಕಾಯಿತು. ಪೂರ್ಣ ಗುಣಮುಖರಾದ ಬಳಿಕ ವಿರೂಪಾಕ್ಷ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಭರದಿಂದ ಸಾಗುತ್ತಿವೆ. ಪ್ರಮೋಷನ್ ನಿಮಿತ್ತ ಸಾಯಿ ಧರಮ್ ತೇಜ್ ಸಹ ಅನೇಕ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಂದರ್ಶನಗಳಲ್ಲಿ ಆತ ಅನೇಕ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ತಾನು ಟೀನೇಜ್ ನಲ್ಲಿರುವಾಗ ತಾನು ಇಷ್ಟಪಟ್ಟ ಹುಡುಗಿಯರು ಹಾಗೂ ಅವರೊಂದಿಗಿನ ಲವ್ ಸ್ಟೋರಿ ಬಗ್ಗೆ ಆಸಕ್ತಿಕರವಾದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ತನ್ನ ಲವ್ ಸ್ಟೋರಿ ಬಗ್ಗೆ ಹೇಳುತ್ತಾ, ಇಂಟರ್‍ ನಲ್ಲಿರುವಾಗ ನಾನು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಮೊದಲಿಗೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಬಳಿಕ ಪ್ರೀತಿಸಿಕೊಂಡೆವು. ಡಿಗ್ರಿಯಲ್ಲಿದ್ದಾಗ ಅದೇ ಹುಡುಗಿಗೆ ನಾನು ಹತ್ತಿರವಿದ್ದು ಮದುವೆ ಮಾಡಿಸಿದೆ. ಕಾರಣ ಆ ಸಮಯದಲ್ಲಿ ನನ್ನ ಬಳಿ ಡಿಗ್ರಿ ಬಿಟ್ಟರೇ ಬೇರೆ ಏನು ಇರಲಿಲ್ಲ. ಈ ಕಾರಣದಿಂದ ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ. ಸಮಂತ ಒಬ್ಬ ವ್ಯಕ್ತಿಯಾಗಿ ನನ್ನನ್ನು ಸೆಳೆದಿದ್ದರು. ಕೆರಿಯರ್‍ ಬಿಗಿನಿಂಗ್ ನಲ್ಲಿ ನನ್ನ ಜೊತೆಗೆ ನಟಿಸಿದ ರೆಜಿನಾ, ಸಯಾಮಿ ಖೇರ್‍ ಎಂದರೂ ಸಹ ನನಗೆ ತುಂಬಾನೆ ಇಷ್ಟ. ಇನ್ನೂ ತಿಕ್ಕ ಸಿನೆಮಾದ ಹಿರೋಯಿನ್ ಲಾರಿಸ್ಸಾ ಬೋನೆಸಿ ಯನ್ನು ನೊಡಿದ ಕೂಡಲೇ ಆಕೆಯೊಂದಿಗೆ ಪ್ರೀತಿಗೆ ಬಿದ್ದೆ. ಒಂದು ದಿನ ಆಕೆಯ ಬಳಿ ಹೋಗಿ ನೀನು ಎಂದರೇ ನನಗೆ ಇಷ್ಟ, ಇಬ್ಬರೂ ಡೇಟಿಂಗ್ ಮಾಡೋಣವೇ ಎಂದು ಕೇಳಿದ್ದೆ. ಆಕೆ ಸಾರಿ ತೇಜ್ ನನಗೆ ಈಗಗಾಲೇ ಬಾಯ್ ಫ್ರೆಂಡ್ ಇದ್ದಾನೆ ಎಂದು ಹೇಳಿದರು. ಆಕೆಯ ಮಾತು ಕೇಳಿ ನನ್ನ ಹೃದಯ ಗಾಯಗೊಂಡಿತ್ತು ಎಂದು ಹೇಳಿಕೊಂಡಿದ್ದಾರೆ.

ಇನ್ನೂ ಸಾಯಿ ಧರಮ್ ತೇಜ್ ಬಹಿರಂಗವಾಗಿಯೇ ಓರ್ವ ಹಿರೋಯಿನ್ ರನ್ನು ಪ್ರೀತಿಸಿದ್ದಾಗಿ ಹೇಳಿಕೊಂಡಿದ್ದು ಸಿನಿವಲಯದಲ್ಲಿ ಇದು ಹಾಟ್ ಟಾಪಿಕ್ ಆಗಿದೆ. ಇನ್ನೂ ವಿರೂಪಾಕ್ಷ ಸಿನೆಮಾ ಏ.21 ರಂದು ತೆರೆಗೆ ಬರಲಿದೆ. ಈ ಸಿನೆಮಾದ ಟ್ರೈಲರ್‍ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸಿನೆಮಾದಲ್ಲಿ ಸಾಯಿ ಧರಮ್ ತೇಜ್ ಗೆ ಜೋಡಿಯಾಗಿ ಸಂಯುಕ್ತ ಮಿನನ್ ನಟಿಸುತ್ತಿದ್ದಾರೆ.

Most Popular

To Top