ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ OG ಸಿನೆಮಾದ ಪವರ್ ಪುಲ್ ಪಿಕ್ಸ್, ವೈರಲ್ ಆದ ಪವನ್ ಲುಕ್….!

Follow Us :

ಟಾಲಿವುಡ್ ಸಿನಿರಂಗದ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಹರಿಹರ ವೀರಮಲ್ಲು, ಉಸ್ತಾದ್ ಭಗತ್ ಸಿಂಗ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ವಿನೋದಯಸೀತಂ ಎಂಬ ಸಿನೆಮಾದ ರಿಮೇಕ್ ಶೂಟಿಂಗ್ ಸಹ ಪೂರ್ಣಗೊಳಿಸಿದ್ದಾರೆ.  ಇದರ ಜೊತೆಗೆ OG ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾ ಪವನ್ ಕಲ್ಯಾಣ್ ಹಾಗೂ ಸುಜಿತ್ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆ. ಇದೀಗ ಈ ಸಿನೆಮಾದ ಶೂಟಿಂಗ್ ಸೆಟ್ಸ್ ನಿಂದ ಪವನ್ ಕಲ್ಯಾಣ್ ರವರ ಪವರ್‍ ಪುಲ್ ಪೊಟೋಗಳು ಕೆಲವು ಹೊರಬಂದಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಆಂಧ್ರಪ್ರದೇಶದ ಚುನಾವಣೆ ಬರುವ ಮುಂಚೆಯೇ ಅವರು ತಾವು ಒಪ್ಪಿಕೊಂಡ ಸಿನೆಮಾಗಳ ಶೂಟಿಂಗ್ ಮುಗಿಸುತ್ತಿದ್ದಾರೆ. ಈ ಹಾದಿಯಲ್ಲೇ ಬಿಡುವಿಲ್ಲದೇ ಸಿನೆಮಾಗಳ ಶೂಟಿಂಗ್ ಅನ್ನು ಮುಗಿಸುತ್ತಾ ಬರುತ್ತಿದ್ದಾರೆ. ಸದ್ಯ ಪವನ್ ಕಲ್ಯಾಣ್ ಹಾಗೂ ಸುಜಿತ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ OG ಸಿನೆಮಾದ ಶೂಟಿಂಗ್ ಸಹ ಆರಂಭವಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಪವನ್ ಕಲ್ಯಾಣ್ ಈ ಸಿನೆಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಇನ್ನೂ ಈ ಸಿನೆಮಾಗೆ ಸಂಬಂಧಿಸಿದ ಅಪ್ಡೇಟ್ಸ್ ಸಹ ಚಿತ್ರತಂಡ ಆಗಿದ್ದಾಂಗೆ ಹಂಚಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೆ ಸಿನೆಮಾ ಶೂಟಿಂಗ್ ಸೆಟ್ ನಿಂದ ಪವನ್ ಕಲ್ಯಾಣ್ ರವರ ಕೆಲವೊಂದು ಪವರ್‍ ಪುಲ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಪವನ್ ಕಲ್ಯಾಣ್ ರವರ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳಲ್ಲಿ ಪವನ್ ಕಲ್ಯಾಣ್ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ಮಾಸ್ ಅಂಡ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಶರ್ಟ್ ಧರಿಸಿ ಕ್ಯಾರವ್ಯಾನ್ ಬಳಿ ಪೋನ್ ನಲ್ಲಿ ಮಾತನಾಡುತ್ತಾ ಪವನ್ ಕಲ್ಯಾಣ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಪವನ್ ಕಲ್ಯಾಣ್ ಶೂಟಿಂಗ್ ನಲ್ಲಿ ತುಂಬಾ ಲವಲವಿಕೆಯಿಂದ ಇರುತ್ತಾರೆ. ಇಡೀ ತಂಡಕ್ಕೆ ಎನರ್ಜಿ ಕೊಡುತ್ತಾರೆ ಎಂದು ಮೇಕರ್ಸ್ ತಿಳಿಸಿದ್ದಾರೆ. ಇನ್ನೂ ಈ ಪೊಟೋಗಳನ್ನು ಮೇಕರ್ಸ್ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದು. ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪವನ್ ಕಲ್ಯಾಣ್ ರವರ ಈ ಲೇಟೆಸ್ಟ್ ಲುಕ್ಸ್ ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದೆ. ಇನ್ನೂ ಈ ಸಿನೆಮಾ ಗ್ಯಾಂಗ್ ಸ್ಟರ್‍ ಸ್ಟೋರಿಯುಳ್ಳ ಸಿನೆಮಾ ಆಗಿದ್ದು, ಪವನ್ ಕಲ್ಯಾಣ್ ಜೊತೆ ತಮಿಳು ಬ್ಯೂಟಿ ಪ್ರಿಯಾಂಕ ಮೋಹನ್ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನೂ ಪವನ್ ಅಭಿಮಾನಿಗಳು ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.