Film News

ಬಾಹುಬಲಿ, RRR ಹೇಗೆ ಹಿಟ್ ಆಯ್ತು, ಶಾಕುಂತಲಂ ಹೇಗೆ ಫ್ಲಾಪ್ ಆಯ್ತು ಅರ್ಥ ಆಗ್ತಿಲ್ಲ ಎಂದ ನಟಿ ಮಧುಬಾಲ ಶಾಕಿಂಗ್ ರಿಯಾಕ್ಷನ್…..!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮಧುಬಾಲ ಅನೇಕ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ರೋಜಾ, ಜೆಂಟಲ್ ಮ್ಯಾನ್ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಇತ್ತೀಚಿಗೆ ತೆರೆಕಂಡ ಶಾಕುಂತಲಂ ಸಿನೆಮಾದಲ್ಲೂ ಸಹ ಮಧುಬಾಲ ನಟಿಸಿದ್ದಾರೆ. ಈ ಸಿನೆಮಾ ಖ್ಯಾತ ನಿರ್ದೇಶಕ ಗುಣಶೇಖರ್‍ ತೆರೆಗೆ ತಂದ ಶಾಕುತಲಂ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು, ಈ ಸಿನೆಮಾ ಪ್ಲಾಫ್ ಬಗ್ಗೆ ನಟಿ ಮಧುಬಾಲ ರಿಯಾಕ್ಟ್ ಆಗಿದ್ದಾರೆ.

ಶಾಕುಂತಲಂ ಸಿನೆಮಾದಲ್ಲಿ ಮಧುಬಾಲ ಶಕುಂತಲೆಯ ತಾಯಿಯಾಗಿ ಸುರಲೋಕದ ಮೇನಕೆಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶಾಕುಂತಲಂ ಫ್ಲಾಪ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಆಕೆ ನೀಡಿದ ಹೇಳಿಕೆಗಳು ಇದೀಗ ಸಖತ್ ವೈರಲ್  ಆಗುತ್ತಿವೆ. ಶಾಕುಂತಲಂ ಸಿನೆಮಾ ಏತಕ್ಕಾಗಿ ಸಕ್ಸಸ್ ಕಾಣಲಿಲ್ಲ, ಹೇಗೆ ಫ್ಲಾಪ್ ಆಯ್ತು ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ. ಈ ಸಿನೆಮಾ ಫ್ಲಾಪ್ ಆಗಿದ್ದಂತೆ ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ಈ ಸಿನೆಮಾಗಾಗಿ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ನಟ-ನಟಿಯರೂ ಸಹ ತುಂಬಾ ಕಷ್ಟಪಟ್ಟಿದ್ದಾರೆ. ಸಿನೆಮಾ ಪ್ರೀ ಪ್ರೋಡಕ್ಷನ್ ಸಮಯದಿಂದ ರಿಲೀಸ್ ವರೆಗೂ ನಿರ್ದೇಶಕ ನಿರ್ಮಾಪಕರು ತುಂಬಾನೆ ಶ್ರಮವಹಿಸಿದ್ದಾರೆ. ವಿಜುಯಲ್ ಟ್ರೀಟ್ ನೀಡಲು ಸುಮಾರು ಆರು ತಿಂಗಳುಗಳ ಕಾಲ ಕಷ್ಟಪಟ್ಟಿದ್ದಾರೆ ಎಂದಿದ್ದಾರೆ.

ಅಷ್ಟೇಅಲ್ಲದೇ ಈ ಸಿನೆಮಾಗಾಗಿ ಯಾರೂ ಸಹ ಒತ್ತಡದಲ್ಲಿ ಕೆಲಸ ಮಾಡಲಿಲ್ಲ. ಎಲ್ಲರಿಗೂ ಫ್ರೀಡಂ ಕೊಟ್ಟಿದ್ದರು. ಆದರೂ ಸಹ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಹೇಗೆ ಸಕ್ಸಸ್ ಕಾಣಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಬಾಹುಬಲಿ, RRR ಗಳಂತಹ ಸಿನೆಮಾಗಳು ಪ್ರೇಕ್ಷರಿಂದ ಒಳ್ಳೆಯ ಸಕ್ಸಸ್ ಪಡೆದುಕೊಂಡಿದೆ. ಇನ್ನು RRR, ಬಾಹುಬಲಿ ಸಿನೆಮಾಗಳು ಹೇಗೆ ಹಿಟ್ ಆದವು, ಆ ಸಿನೆಮಾಗಳ ಸಕ್ಸಸ್ ಗೆ ಕಾರಣಗಳು ಏನು ಎಂಬುದು ಯಾರೂ ಸಹ ಹೇಳುವುದಿಲ್ಲ. ಆ ಸಿನೆಮಾಗಳಂತೆ ಶಾಕುಂತಲಂ ಸಿನೆಮಾ ಸಂಪೂರ್ಣವಾಗಿ ಸೌತ್ ಇಂಡಿಯನ್ ಸಿನೆಮಾ ಆಗಿದೆ. ಅದರಲ್ಲೂ ಇದೊಂದು ಪೌರಾಣಿಕ ಕಥೆಯುಳ್ಳ ಸಿನೆಮಾ ಆದರೂ ಸಹ ಈ ಸಿನೆಮಾ ಫ್ಲಾಪ್ ಆಗಿದೆ. ಈ ಲಾಜಿಕ್ ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಮಧುಭಾಲ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಮಧುಬಾಲ ನೀಡಿದ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಶಾಕುತಂಲಂ ಸಿನೆಮಾವನ್ನು ಭಾರಿ ನಿರೀಕ್ಷೆಯಿಂದ ತೆರೆಗೆ ತರಲಾಗಿದೆ. ಆದರೆ ಈ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ಮಕಾಡೆ ಮಲಗಿದೆ. ಇನ್ನೂ ಈ ಬಗ್ಗೆ ಸಮಂತಾ ಸಹ ಸೋಷಿಯಲ್ ಮಿಡಿಯಾ ಮೂಲಕ ರಿಯಾಕ್ಟ್ ಆಗಿದ್ದರು.

Most Popular

To Top