Film News

ಸಮಂತಾ ದೇಗುಲ ನಿರ್ಮಾಣಕ್ಕೆ ಮುಂದಾದ ಅಭಿಮಾನಿ, ಸ್ಯಾಮ್ ವಿಗ್ರಹ ಬಲು ಸುಂದರ, ವೈರಲ್ ಆದ ಸುದ್ದಿ……!

ಸಿನಿರಂಗದ ತಾರೆಯರಿಗೆ ಭಾರಿ ಅಭಿಮಾನಿ ಬಳಗವಿರುತ್ತದೆ. ಕೆಲವರಿಗಂತೂ ಡೈ ಹಾರ್ಡ್ ಫ್ಯಾನ್ಸ್ ಇರುತ್ತಾರೆ. ತಾವು ಅಭಿಮಾನಿಸುವಂತಹ ನಟ-ನಟಿಯರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದನ್ನು ನಾವು ನೋಡಿದ್ದೇವೆ. ಇದೀಗ ತಾವು ಅಭಿಮಾನಿಸುವಂತಹ ನಟಿಯ ದೇಗುಲ ನಿರ್ಮಾಣ ಮಾಡಲು ಅಭಿಮಾನಿಯೋರ್ವ ಮುಂದಾಗಿದ್ದಾನೆ. ಸಮಂತಾ ಡೈ ಹಾರ್ಡ್ ಫ್ಯಾನ್ ಒಬ್ಬರು ಆಕೆಯ ಸುಂದರವಾದ ವಿಗ್ರಹವನ್ನು ತಯಾರಿಸಿ ಗುಡಿ ನಿರ್ಮಾಣ ಮಾಡಲು ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸುದ್ದಿ ಹಾಟ್ ಟಾಪಿಕ್ ಆಗಿದೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಅನೇಕ ಹಿಟ್ ಸಿನೆಮಾಗಳ ಮೂಲಕ ದೇಶ ಸೇರಿದಂತೆ ವಿದೇಶಗಳಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.  ಸ್ಟಾರ್‍ ನಟರಂತೆ ಸಮಂತಾಗೂ ಸಹ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. ಸ್ಯಾಮ್ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ ಎಂಬುದು ಅನೇಕ ಬಾರಿ ಪ್ರೂವ್ ಮಾಡಿದ್ದಾರೆ. ಯಶೋಧ ಸಿನೆಮಾದ ಬಿಡುಗಡೆ ಸಮಯದಲ್ಲೂ ಸಹ ಸಮಂತಾ ರವರ ದೊಡ್ಡ ದೊಡ್ಡ ಕಟೌಟ್ ಗಳನ್ನು ಅಭಿಮಾನಿಗಳು ಥಿಯೇಟರ್‍ ಬಳಿ ಅಳವಡಿಸಿದ್ದರು. ಜೊತೆಗೆ ಸ್ಯಾಮ್ ಅಭಿಮಾನಿಗಳು ಆಕೆಯ ವೈಯುಕ್ತಿಕ ವಿಚಾರಗಳು ಹಾಗೂ ಆಕೆಯ ಆರೋಗ್ಯದ ವಿಚಾರಗಳ ಬಗ್ಗೆ ಸಪೋರ್ಟ್ ಮಾಡುತ್ತಿದ್ದಾರೆ.

ಇದೀಗ ಸಮಂತಾ ರವರಿಗಾಗಿ ಆಕೆಯ ಅಭಿಮಾನಿಯೊಬ್ಬರು ದೇಗುಲ ನಿರ್ಮಾಣ ಮಾಡುತ್ತಿದ್ದಾರೆ. ಆ ಅಭಿಮಾನಿಯನ್ನು ಆಕೆಯನ್ನು ದೇವತೆಯ ರೂಪದಲ್ಲಿ ನೋಡುತ್ತಿದ್ದಾರೆ. ಅದನ್ನೂ ಆಕೆಯ ಗುಡಿ ನಿರ್ಮಾಣ ಮಾಡುವ ಮೂಲಕ ಪ್ರದರ್ಶನ ಮಾಡಲು ಮುಂದಾಗುತ್ತಿದ್ದಾರೆ.  ಸದ್ಯ ಈ ಸಂಬಂದ ಕೆಲವೊಂದು ಪೊಟೋಗಳು ಹಾಗು ವಿಡಿಯೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ. ಆಂದ್ರಪ್ರದೇಶದ ಬಾಪಟ್ಲ ಎಂಬ ಜಿಲ್ಲೆಯ ಆಲಪಾಡುಕು ಎಂಬ ಗ್ರಾಮದ ಯುವಕ ಸಂದೀಪ್ ಎಂಬಾತನೇ ಸಮಂತಾ ರವರಿಗಾಗಿ ದೇಗುಲ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಏ.28 ರಂದು ಸಮಂತಾ ಹುಟ್ಟುಹಬ್ಬದ ಅಂಗವಾಗಿ ತನ್ನ ಮನೆಯಲ್ಲಿಯೇ ಸಮಂತಾ ರವರಿಗಾಗಿ ದೇಗುಲ ಕಟ್ಟಿಸುತ್ತಿದ್ದಾರೆ. ಸಮಂತಾ ವಿಗ್ರಹವನ್ನು ಸಹ ಸಿದ್ದಪಡಿಸಿದ್ದಾರೆ.

ಇನ್ನೂ ಸಮಂತಾ ರವರಂತೆ ಈ ಹಿಂದೆ ನಿಧಿ ಅಗರ್ವಾಲ್, ಖುಷ್ಬು, ನಮಿತಾ, ನಯನತಾರಾ ಸೇರಿದಂತೆ ಅನೇಕ ನಟಿಯರಿಗೆ ಈಗಾಗಲೇ ದೇಗುಲಗಳನ್ನು ನಿರ್ಮಾಣ ಮಾಡಲಾಗಿದೆ.  ಇದೀಗ ಸಮಂತಾ ರವರಿಗಾಗಿ ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಇತ್ತೀಚಿಗಷ್ಟೆ ಸಮಂತಾ ಶಾಕುಂತಲಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಸದ್ಯ ಸಮಂತಾ ಸಿಟಾಡೆಲ್ ಎಂಬ ವೆಬ್ ಸಿರೀಸ್ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top