Film News

ಆ ನಟರೊಂದಿಗೆ ರೊಮ್ಯಾನ್ಸ್ ಮಾಡುವ ಅವಕಾಶ ಮಿಸ್ ಆಗಿದ್ದೆನೆ ಎಂದ ನಟಿ ಖುಷ್ಬು, ವೈರಲ್ ಆದ ಕಾಮೆಂಟ್ಸ್…..!

ಟಾಲಿವುಡ್ ನಲ್ಲಿ ಒಂದು ಕಾಲದ ಟಾಪ್ ನಟಿ ಎಂದೆನ್ನಿಸಿಕೊಂಡವರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದಾರೆ. ವಿಕ್ಟರಿ ವೆಂಕಟೇಶ್ ಅಭಿನಯದ ಕಲಿಯುಗ ಪಾಂಡವುಲು ಎಂಬ ಸಿನೆಮಾದಲ್ಲಿ ವೆಂಕಟೇಶ್ ಗೆ ಜೋಡಿಯಾಗಿ ಖುಷ್ಬು ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೊದಲನೇ ಸಿನೆಮಾನೇ ಖುಷ್ಬು ಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ. ಬಳಿಕ ಇದೇ ಜೋಡಿ ತ್ರಿಮೂರ್ತುಲು, ಭಾರತಂಲೋ ಅರ್ಜುನುಡು ಮೊದಲಾದ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಸದ್ಯ ಆಕೆ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಖುಷ್ಬು ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ಹಂಚಿಕೊಂಡಿದ್ದು, ಕಾಮೆಂಟ್ ಗಳು ವೈರಲ್ ಆಗಿದೆ.

90 ರ ದಶಕದಲ್ಲಿ ಚಾಲ್ತಿಯಲ್ಲಿದ್ದಂತಹ ಬಹುಬೇಡಿಕೆ ನಟಿಯರಾಗಿದ್ದ ರಂಭ, ನಗ್ಮ, ರಮ್ಯ ಕೃಷ್ಣ ಮೊದಲಾದವರ ಜೊತೆ ಖುಷ್ಬು ಸಹ ಪೈಪೋಟಿಯಿಂದ ನಟಿಸುತ್ತಿದ್ದರು. ಯಾವುದೇ ನಟಿಗೂ ತಾನು ಕಡಿಮೆಯಿಲ್ಲ ಎಂಬಂತೆ ಇಂಡಸ್ಟ್ರಿಯಲ್ಲಿ ಮುನ್ನುಗ್ಗಿದ್ದರು. ಬಾಲಿವುಡ್ ಸಿನೆಮಾಗಳ ಜೊತೆಗೆ ಆಕೆ ಸೌತ್ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಆಕೆ ಅಭಿನಯ ಹಾಗೂ ಗ್ಲಾಮರ್‍ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ತೆಲುಗು, ಕನ್ನಡ, ತಮಿಳು, ಮಲಯಾಳಂ ಜೊತೆಗೆ ಹಿಂದಿಯ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದರು. ಅನೇಕ ಹಿರೋಗಳ ಜೊತೆಗೆ ರೊಮ್ಯಾನ್ಸ್ ಸಹ ಮಾಡಿದ್ದರು. ಆದರೆ ಆ ಮೂವರು ನಟರೊಂದಿಗೆ ಆಕೆಗೆ ರೊಮ್ಯಾನ್ಸ್ ಮಾಡುವ ಅವಕಾಶ ಸಿಕ್ಕಲಿಲ್ಲವಂತೆ. ಅಷ್ಟಕ್ಕೂ ಆ ಮೂವರು ನಟರು ಯಾರು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸ್ಟಾರ್‍ ನಟ ಅಮಿತಾಭ್, ಟಾಲಿವುಡ್ ಸ್ಟಾರ್‍ ನಟರಾದ ಚಿರಂಜೀವಿ ಹಾಗೂ ಬಾಲಕೃಷ್ಣ ಜೊತೆಗೆ ನಟಿಸುವ ಅವಕಾಶ ಖುಷ್ಬು ರವರಿಗೆ ಬರಲಿಲ್ಲವಂತೆ. ಆದರೆ ಚಿರಂಜೀವಿ ಜೊತೆಗೆ ಸ್ಟಾಲಿನ್ ಸಿನೆಮಾದಲ್ಲಿ ನಟಿಸಿದರೂ ಸಹ ಈ ಸಿನೆಮಾದಲ್ಲಿ ಚಿರಂಜೀವಿಯವರ ಅಕ್ಕನಾಗಿ ಕಾಣಿಸಿಕೊಂಡಿದ್ದರು. ಚಿರಂಜೀವಿ, ಬಾಲಕೃಷ್ಣ, ಅಮಿತಾಭ್ ಜೊತೆಗೆ ರೊಮ್ಯಾನ್ಸ್ ಮಾಡುವಂತಹ ಕೊರತೆ ಆಕೆಗೆ ಈಗಲೂ ಸಹ ಕಾಡುತ್ತಿದೆಯಂತೆ. ಇಲ್ಲಿಯವರೆಗೂ ಬಾಲಕೃಷ್ಣ ಹಾಗೂ ಚಿರಂಜೀವಿ ಜೊತೆಗೆ ರೊಮ್ಯಾನ್ಸ್ ಮಾಡಲಿಲ್ಲ. ಅವರೊಂದಿಗೆ ನಟಿಸುವ ಬಯಕೆ ಇನ್ನೂ ಹಾಗೇ ಉಳಿದಿದೆ. ಅವರಿಬ್ಬರೊಂದಿಗೆ ನಟಿಸಲು ನಾನು ತುಂಬಾ ಇಷ್ಟವಾಗಿ ಫೀಲ್ ಆಗುತ್ತೇನೆ. ಆ ಅವಕಾಶಕ್ಕಾಗಿ ಈಗಲೂ ಸಹ ಕಾಯುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಎಂದರೇ ತುಂಬಾನೆ ಇಷ್ಟ ಹಾಗೂ ಅಭಿಮಾನವಂತೆ. ಆತನ ಮೇಲೆ ಎಷ್ಟರ ಮಟ್ಟಿಗೆ ಅಭಿಮಾನವಿದೆಯಂದರೇ ಅವರ ಪೊಟೋವನ್ನು ತನ್ನ ಬೆಡ್ ರೂಂನಲ್ಲಿ ಇಟ್ಟುಕೊಂಡಿದ್ದಾರಂತೆ. ಆತನೊಂದಿಗೆ ಬಾಲನಟಿಯಾಗಿ ನಟಿಸಿದ್ದೇನೆ. ಆತನೊಂದಿಗೆ ಹಿರೋಯಿನ್ ಆಗಿ ನಟಿಸುವ ಅವಕಾಶ ಪಡೆದುಕೊಳ್ಳಲಿಲ್ಲ ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ನಡೆದ ರಾಮಬಾಣಂ ಎಂಬ ಸಿನೆಮಾದ ಪ್ರಮೋಷನ್ ಸಂದರ್ಶನದಲ್ಲಿ ಹಂಚಿಕೊಂಡಿದ್ದು, ಈ ಹೇಳಿಕೆಗಳು ವೈರಲ್ ಆಗುತ್ತಿವೆ.

Most Popular

To Top