ಬಾಲಿವುಡ್ ಸ್ಟಾರ್ ನಟಿ ಕಂಗನಾ ಹಾಗೂ ನಟ ಅಮೀರ್ ಖಾನ್ ಬೇರೆಯಾಗಲು ಆ ಹಿರೋ ಕಾರಣವಂತೆ?

ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ ಎಲ್ಲವೂ ಸರ್ವೆ ಸಾಮಾನ್ಯವಾಗಿರುತ್ತದೆ. ಸಿನಿರಂಗದಲ್ಲಿ ಸ್ನೇಹಗಳು, ಪ್ರೀತಿ ತುಂಬಾ ದಿನ ಇರುವುದಿಲ್ಲ. ಎಷ್ಟು ಫಾಸ್ಟ್ ಆಗಿ ರಿಲೇಷನ್ ಶಿಪ್ ಗೆ ಬೀಳುತ್ತಾರೋ ಅಷ್ಟೇ ಫಾಸ್ಟ್ ಆಗಿಯೇ ಬ್ರೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಈ ರೀತಿಯ ಪ್ರೀತಿಗೆ ಬಿದ್ದು ಬೇರೆಯಾದ ನಟಿಯರಲ್ಲಿ ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣವತ್ ಸಹ ಒಬ್ಬರಾಗಿದ್ದಾರೆ. ಇದೀಗ ಆಕೆಯ ಲವ್, ಬ್ರೇಕಪ್ ಬಗ್ಗೆ ಕೆಲವೊಂದು ವಿಚಾರಗಳು ಹರಿದಾಡುತ್ತಿದೆ.

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಭಾರಿ ಕ್ರೇಜ್ ಪಡೆದುಕೊಂಡು ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿರುವ ನಟಿ ಕಂಗನಾ ಆಗಾಗ ಕೆಲವೊಂದು ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆಕೆ ಯಾವುದೇ ವಿಚಾರವಿದ್ದರೂ ಸಹ ನೇರವಾಗಿ ಮಾತನಾಡುವಂತಹ ಸ್ವಭಾವ ಹೊಂದಿದ್ದಾರೆ. ಈ ಕಾರಣದಿಂದ ಆಕೆ ಅನೇಕ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಆಕೆ ಅಮೀರ್‍ ಖಾನ್ ನಡುವಣ ಸ್ನೇಹದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ನಮ್ಮಿಬ್ಬರ ಮದ್ಯೆ ಇರುವಂತಹ ಸ್ನೇಹ ಬ್ರೇಕಪ್ ಆಗಲು ಹೃತಿಕ್ ರೋಷನ್ ರವರೇ ಕಾರಣ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಅಮೀರ್‍ ಖಾನ್ ಸಾರ್‍ ಜೊತೆಗೆ ಕಳೆದ ದಿನಗಳು ಇಂದಿಗೂ ಸಹ ನನಗೆ ನೆನಪಿದೆ. ನನ್ನನ್ನು ಪ್ರಶಂಸೆ ಮಾಡುವಂತಹ ವ್ಯಕ್ತಿಗಳಲ್ಲಿ ಅವರೂ ಸಹ ಒಬ್ಬರಾಗಿದ್ದಾರೆ. ಸಿನೆಮಾಗಳ ವಿಚಾರದಲ್ಲೂ ಸಹ ನನಗೆ ತುಂಬಾ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಇನ್ನೂ ಹೃತಿಕ್ ರೋಷನ್ ನನ್ನ ಮೇಲೆ ಯಾವಾಗ ಲೀಗಲ್ ಕೇಸು ದಾಖಲು ಮಾಡಿದರೋ ಆಗ ಎಲ್ಲವೂ ಮುಗಿದುಹೋಯಿತು. ನನ್ನ ಮೇಲೆ ಮೇಲೆ ಅಂತಹ ಕೇಸು ದಾಖಲಿಸಿದಾಗ ಇಡೀ ಸಿನಿರಂಗ ಒಂದು ಕಡೆ ಹಾಗೂ ನಾನು ಮಾತ್ರ ಒಂದು ಕಡೆ ಇದ್ದೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನೂ ಕಂಗನಾ ಹಾಗೂ ಹೃತಿಕ್ ರೋಷನ್ ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆ ಸಮಯದಲ್ಲೇ ಅವರಿಬ್ಬರೂ ಪ್ರೀತಿಗೆ ಸಹ ಬಿದ್ದಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ಅವರಿಬ್ಬರ ನಡುವೆ ವಿಬೇದಗಳು ಉಂಟಾದ ಹಿನ್ನೆಲೆಯಲ್ಲಿ ಇಬ್ಬರು ಬೇರೆಯಾದರು. ಕೆಲವೊಮ್ಮೆ ಬಹಿರಂಗವಾಗಿಯೇ ಒಬ್ಬರನ್ನೊಬ್ಬರು ಬೈದುಕೊಂಡಿದ್ದಾರೆ. ಕೇಸುಗಳನ್ನು ಸಹ ಹಾಕಿಕೊಂಡಿದ್ದಾರೆ. ಬಳಿಕ ಹೃತಿಕ್ ಹೆಸರನ್ನು ಹೇಳಿದರೇ ಸಾಕು ಕಂಘನಾ ಭಾರಿ ಆಕ್ರೋಷ ಹೊರಹಾಕುತ್ತಾರೆ. ಸದ್ಯ ಕಂಗನಾ ಹಾಗೂ ಅಮೀರ್‍ ಖಾನ್ ಸ್ನೇಹಬಂಧ ಬ್ರೇಕಪ್ ಆಗಲು ಹೃತಿಕ್ ಕಾರಣ ಎಂದು ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಇನ್ನೂ ಕಂಗನಾ ಎಮರ್ಜೆನ್ಸಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೆ ತೆರೆಗೆ ಬರಲಿದೆ. ಜೊತೆಗೆ ಚಂದ್ರಮುಖಿ-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.