Film News

ಯಾನಿಮಲ್ ಸಿನೆಮಾದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಖುಷ್ಬು, ಅಷ್ಟಕ್ಕೂ ಯಾನಿಮಲ್ ಸಿನೆಮಾ ಹೇಗೆ ಹಿಟ್ ಆಯ್ತು?

ಸೀನಿಯರ್‍ ನಟಿ ಖುಷ್ಬು ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಕಲಿಯುವ ಪಾಂಡವುಲು ಎಂಬ ಸಿನೆಮಾದಲ್ಲಿ ವಿಕ್ಟರಿ ವೆಂಕಟೇಶ್ ಜೊತೆಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಆಕೆ ತೆಲುಗು ಹಾಗೂ ತಮಿಳು ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿ ಕ್ರೇಜಿ ನಟಿಯಾದರು. ಇನ್ನೂ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಜ್ಞಾತವಾಸಿ, ಸ್ಟಾಲೀನ್, ಯಮದೊಂಗ ಮೊದಲಾದ ಸಿನೆಮಾಗಳಲ್ಲಿ ನಟಿಸಿದ ಖುಷ್ಬು ಇದೀಗ ರಾಜಕೀಯದಲ್ಲೂ ಸಹ ಸಕ್ರೀಯರಾಗಿದ್ದಾರೆ. ಇದೀಗ ಆಕೆ ಬಾಲಿವುಡ್ ಬ್ಲಾಕ್ ಬ್ಲಸ್ಟರ್‍ ಹಿಟ್ ಸಿನೆಮಾ ಯಾನಿಮಲ್ ಸಿನೆಮಾದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ವೈರಲ್ ಆಗುತ್ತಿದೆ.

ನಟಿ ಖುಷ್ಬು ಸಿನೆಮಾಗಳ ಜೊತೆಗೆ ರಾಜಕೀಯದಲ್ಲೂ ಸಹ ಸಕ್ರೀಯರಾಗಿದ್ದಾರೆ. ಬಿಜೆಪಿಯಲ್ಲಿ ಪ್ರಮುಖ ಪದವಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ನ್ಯಾಷನಲ್ ವುಮೆನ್ ಕಮಿಷನ್ ಸದಸ್ಯಳಾಗಿದ್ದಾರೆ. ಆಗಾಗ ಮಹಿಳೆಯರ ಬಗ್ಗೆ, ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಈ ಹಿಂದೆ ಆಕೆ ತನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಎದುರಿಸಿದ್ದಾಗಿ ಹೇಳಿದ್ದರು. ನನಗೆ ಎಂಟು ವರ್ಷ ವಯಸ್ಸಿರುವಾಗಲೇ ನನ್ನ ತಂದೆಯಿಂದ ನನ್ನ ಮೇಲೆ ದೌರ್ಜನ್ಯಗಳು ಶುರುವಾದವು. ಎಲ್ಲವನ್ನೂ ಎದುರಿಸಲು ನನಗೆ ತುಂಬಾನೆ ಸಮಯ ಬೇಕಾಯಿತು ಎಂದಿದ್ದಾರೆ.ಇನ್ನೂ ಈ ವಿಚಾರವನ್ನು ನಮ್ಮ ತಾಯಿಗೆ ತಿಳಿಸಿದರೂ ಸಹ ಆಕೆ ನಂಬುತ್ತಿರಲಿಲ್ಲ. ಆಕೆ ತನ್ನ ಪತಿಯನ್ನು ದೈವ ಎಂಬ ಭಾವನೆಯಲ್ಲಿದ್ದರು. ಏನೆ ಆದರೂ ಆತನೇ ತನ್ನ ಆರಾಧ್ಯ ಧೈವ ಎಂಬ ಭಾವನೆಯಲ್ಲಿದ್ದರು. ಆದರೆ ನನಗೆ 15 ವರ್ಷ ವಯಸ್ಸಾದಾಗ ನಾನು ನನ್ನ ತಂದೆಯ ವಿರುದ್ದ ತಿರುಗಿಬಿದ್ದೆ ಎಂದು ಈ ಹಿಂದೆ ಹೇಳಿದ್ದರು.

ಇದೀಗ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಲ್ಲಿ ತೆರೆಕಂಡ ಯಾನಿಮಲ್ ಸಿನೆಮಾದ ಬಗ್ಗೆ ಮಾತನಾಡಿದ್ದಾರೆ. ರಣಬೀರ್‍ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ತೆರೆಕಂಡ ಯಾನಿಮಲ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸಕ್ಸಸ್ ಕಂಡಿತ್ತು. ಸುಮಾರು 800 ಕೋಟಿಯಷ್ಟು ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸಿನೆಮಾದ ಬಗ್ಗೆ ಖುಷ್ಬು ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ್ದಾರೆ. ಅಷ್ಟಕ್ಕೂ ಯಾನಿಮಲ್ ಸಿನೆಮಾ ಅಷ್ಟೊಂದು ಜಯ ಹೇಗೆ ಗಳಿಸಿದೆ ಎಂಬುದು ಅರ್ಥವಾಗುತ್ತಿಲ್ಲ. ಇದು ಈಗಲೂ ಸಹ ನನಗೆ ತುಂಬಾ ಆಶ್ವರ್ಯ ತಂದಿದೆ. ಜನರ ಮನೋಭಾವ ಈ ರೀತಿಯಲ್ಲಿದೆ ಎಂಬುದು ನನಗೆ ಶಾಕಿಂಗ್ ಆಗಿದೆ. ಅಂತಹ ಮನೋಭಾವ ಇರುವಂತಹವರು ಸಮಸ್ಯೆ ಎಂದು ಖುಷ್ಬು ಹೇಳಿದ್ದಾರೆ.

ಯಾನಿಮಲ್ ಸಿನೆಮಾದಲ್ಲಿ ತೋರಿಸುವಂತಹವು ಹೊರಗಿನ ಪ್ರಪಂಚದಲ್ಲೂ ಸಹ ನಡೆಯುತ್ತಿರುತ್ತವೆ ಎಂದು ಹೇಳಿದ್ದಾರೆ. ಯಾನಿಮಲ್ ಸಿನೆಮಾ ಸಮಾಜಕ್ಕೆ ಒಳ್ಳೆಯ ಸಂದೇಶವಲ್ಲ ಎಂಬ ಅರ್ಥದಲ್ಲಿ ಖುಷ್ಬು ಕಾಮೆಂಟ್ ಮಾಡಿದ್ದಾರೆ. ಈ ಸಿನೆಮಾದ ಬಗ್ಗೆ ಈಗಾಗಲೇ ಅನೇಕರು ವಿಮರ್ಶೆ ಮಾಡಿದ್ದಾರೆ. ಇದೀಗ ಖುಷ್ಬು ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top