News

ಕೋಳಿ ಮೊಟ್ಟೆ ಆಫರ್ ನಂಬಿ 48 ಸಾವಿರ ಕಳೆದುಕೊಂಡ ಮಹಿಳೆ, ರೂ.49 ಕ್ಕೆ 48 ಮೊಟ್ಟೆ ಎಂದು ಆಫರ್ ಕೊಟ್ಟ ಮೋಸ….!

ತಂತ್ರಜ್ಞಾನ ಹೆಚ್ಚಾದಂತೆ ಸೈಬರ್‍ ಖದೀಮರು ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿರುತ್ತಾರೆ. ಮೊಬೈಲ್ ಗಳಿಗೆ ಕೆಲವೊಂದು ಲಿಂಕ್ ಗಳನ್ನು ಕಳುಹಿಸಿ ಹಣ ದೋಚುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಮಹಿಳೆಯೊಬ್ಬರಿಗೆ ಕೋಳಿ ಮೊಟ್ಟೆ ಆಫರ್‍ ಕೊಟ್ಟು ಬರೊಬ್ಬರಿ 48 ಸಾವಿರ ಕಳೆದುಕೊಂಡಿದ್ದಾರೆ.

ಅರ್ಚನಾ ಸಿಂಗ್ ಎಂಬಾಕೆ ಹಣ ಕಳೆದುಕೊಂಡವರು. ಆನ್ ಲೈನ್ ಶಾಪಿಂಗ್ ನಲ್ಲಿ ಕೇವಲ 49 ರೂಪಾಯಿಗೆ 48 ಮೊಟ್ಟೆ ಕೊಡುವುದಾಗಿ ಆಫರ್‍ ಕಾಣಿಸಿದ್ದು, ಅದನ್ನು ನಂಬಿದ ಅರ್ಚನಾ ಸಿಂಗ್ ಎಂಬಾಕೆ ಖರೀದಿಸಲು ಮುಂದಾಗಿದ್ದಾರೆ. ಫೆ.17 ರಂದು ಅರ್ಚನಾ ರವರ ಮೊಬೈಲ್ ನ ಇ-ಮೇಲ್ ಗೆ ನ್ಯೂಟ್ರಿಫ್ರಶ್ ಎಗ್ ಟಾಟಾ ಎಂಬ ಆನ್ ಲೈನ್ ಶಾಪಿಂಗ್ ಲಿಂಕ್ ಬಂದಿದೆ. ಈ ಲಿಂಕ್ ಅನ್ನು ಆಕೆ ಓಪೆನ್ ಮಾಡಿದ್ದಾಳೆ. ಆ ಲಿಂಕ್ ಒಪೆನ್ ಮಾಡಿಆಗ 4 ಡಜನ್ ಫ್ರೆಶ್ ಕೋಳಿ ಮೊಟ್ಟೆ ಕೇವಲ 49 ಮಾತ್ರ ಎಂದು ಕಾಣಿಸಿದೆ. ಅದನ್ನು ಕ್ಲಿಕ್ ಮಾಡಿ ಅರ್ಚನಾ ಸಿಂಗ್ 48 ಸಾವಿರ ಕಳೆದುಕೊಂಡಿದ್ದಾರೆ.

ಇನ್ನೂ ಅರ್ಚನಾ ಸಿಂಗ್ ಗೆ ಕಳುಹಿಸಲಾಗಿದ್ದ ಲಿಂಕ್ ನಲ್ಲಿ ಕೇಳಿದಂತಹ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ್ದಾರೆ. ಈ ವೇಳೆ 49 ರೂಪಾಯಿ ಪಾವತಿಸಲು ಕ್ರೆಡಿಟ್ ಕಾರ್ಡ್ ಮಾಹಿತಿ ಭರ್ತಿ ಮಾಡಿದ್ದಾರೆ. ಒಳಿಕ ಮೊಬೈಲ್ ಗೆ ಒಟಿಪಿ ಬಂದಿದೆ. ಒಟಿಪಿ ಸಂಖ್ಯೆ ನಮೂದಿಸಿದಾಗ ಆಕೆಯ ಖಾತೆಯಿಂದ ಬರೊಬ್ಬರಿ 48 ಸಾವಿರ ಕಡಿತವಾಗಿದೆ. 49 ರೂಪಾಯಿ ಬದಲಿಗೆ 48 ಸಾವಿರ ಖಡಿತವಾಗಿದೆ. ಇದರಿಂದ ಕಂಗೆಟ್ಟ ಅರ್ಚನಾ ಸಿಂಗ್ ದೂರು ನೀಡಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Most Popular

To Top