ಮೂರನೇ ಮದುವೆಯಾದರೇ ಸೀನಿಯರ್ ನಟಿ ಜಯಸುಧ, ವೈರಲ್ ಆದ ಸುದ್ದಿ, ಇದಕ್ಕೆ ಸ್ಪಷ್ಟನೆ ಕೊಟ್ಟ ನಟಿ…!

80 ರ ದಶಕದಲ್ಲಿ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ ಜಯಸುಧ ಬಗ್ಗೆ ಹೆಚ್ಚಿನ ಪರಿಚಯ ಬೇಕಾಗಿಲ್ಲ. ಅನೇಕ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ಈಕೆ ಇದೀಗ ತೆಲುಗಿನ ಅನೇಕ ಸಿನೆಮಾಗಳಲ್ಲಿ ತಾಯಿಯ ಪಾತ್ರಗಳನ್ನು ಪೋಷಣೆ ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ರೂಮರ್‍ ಗಳಿಗೆ ಆಕೆ ಸ್ಪಷ್ಟನೆ ಸಹ ನೀಡಿದ್ದಾರೆ.

ಸೀನಿಯರ್‍ ನಟಿ ಜಯಸುಧ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಅನೇಕ ಪಾತ್ರಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ತಾಯಿ ಪಾತ್ರದಲ್ಲಿ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬೊಮ್ಮರಿಲ್ಲು, ಶತಮಾನಂ ಭವತಿ, ಪರುಗು, ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು, ಅಮ್ಮಾ ನಾನ್ನ ಓ ತಮಿಳಮ್ಮಾಯಿ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ಆಕೆ ತಾಯಿಯ ಪಾತ್ರ ಪೋಷಣೆ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಇನ್ನೂ ಜಯಸುಧ ಜೀವನದಲ್ಲಿ ಅನೇಕ ಸಮಸ್ಯೆಗಳಿವೆ. ಈ ಹಿಂದೆ ಆಕೆಗೆ ಎರಡು ಮದುವೆಯಾಗಿತ್ತು. ಇದೀಗ ಮೂರನೇ ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜಯಸುಧ ವಯಸ್ಸು ಸದ್ಯ 64 ವರ್ಷ ಆಗಿದ್ದು, ಆಕೆ ರಹಸ್ಯವಾಗಿ ಮೂರನೇ ಮದುವೆಯಾಗಿದ್ದಾರೆ ಎಂದು ರೂಮರ್‍ ಒಂದು ಹರಿದಾಡುತ್ತಿದೆ.

ಇನ್ನೂ ಈ ಮೂರನೇ ಮದುವೆ ರೂಮರ್‍ ಹರಿದಾಡಲು ಒಂದು ಸನ್ನಿವೇಶ ಕಾರಣವಾಗಿದೆ. ನಟಿ ಜಯಸುಧ ಇತ್ತಿಚಿಗೆ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರೊಂದಿಗೆ ಹಾಜರಾಗಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಆಕೆ ಆ ವ್ಯಕ್ತಿಯೊಂದಿಗೆ ಹಾಜರಾಗುತ್ತಿರುವ ಕಾರಣದಿಂದ ಅವರಿಬ್ಬರು ಮೂರನೇ ಮದುವೆಯಾದರೇ ಎಂಬ ಸುದ್ದಿ ಶುರುವಾಗಿತ್ತು. ಆಕೆ ಒಬ್ಬ ಉದ್ಯಮಿಯೊಂದಿಗೆ ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಜಯಸುಧ ರಿಯಾಕ್ಟ್ ಆಗಿದ್ದಾರೆ. ಅದೆಲ್ಲಾ ಸುಳ್ಳುಸುದ್ದಿ ಎಂದು ಹೇಳಿದ್ದಾರೆ. ಆಕೆಯೊಂದಿಗೆ ಬರುವ ವ್ಯಕ್ತಿ ತನ್ನ ಸ್ನೇಹಿತ. ಅಮೇರಿಕಾದಿಂದ ಬಂದಿದ್ದಾರೆ. ಒಂದು ಸಿನೆಮಾದ ನಿಮಿತ್ತ ನಾವು ಭೇಟಿಯಾದೆವು. ಆತನ ಹೆಸರು ಪೆಲಿಪೆ. ಬಯೋಪಿಕ್ ಸಿನೆಮಾಗಳನ್ನು ತೆಗೆಯುತ್ತಿರುತ್ತಾರೆ ಎಂದಿದ್ದಾರೆ.

ಇನ್ನೂ ನನ್ನ ಬಯೋಪಿಕ್ ಸಹ ಪೆಲಿಪೆ ಮಾಡುತ್ತಿದ್ದಾರೆ. ನಾನು ಕ್ರಿಶ್ಚಿಯನ್ ಆಗಿ ಹೇಗೆ ಬದಲಾದೆ. ಅದಕ್ಕೂ ಮುಂಚೆ ನನ್ನ ಜೀವನದಲ್ಲಿ ಏನೆಲ್ಲಾ ನಡೆದಿತ್ತು ಎಂಬ ಅನೇಕ ಅಂಶಗಳು ಇರುತ್ತವೆ. ಈ ಕಾರಣದಿಂದ ನಾವು ಜೊತೆಯಲ್ಲಿ ಬಂದೆವು. ವಿನಾಕಾರಣ ಮೂರನೇ ಮದುವೆ ಎಂದು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ನಗುತ್ತಾ ಸುಮ್ಮನಾಗಿದ್ದಾರೆ. ಇನ್ನೂ ಜಯಸುಧ ಕಾಕರ್ಲಪೂಡಿ ರಾಜೇಂದ್ರಪ್ರಸಾದ್ ಎಂಬಾತನನ್ನು ಮದುವೆಯಾದರು, ಕೆಲವೊಂದು ಕಾರಣಗಳಿಂದ ಆಕೆ ಆತನೊಂದಿಗೆ ಬೇರೆಯಾದರು. ಬಳಿಕ ನಿತಿನ್ ಕಪೂರ್‍ ಎಂಬಾತನೊಂದಿಗೆ ಮದುವೆಯಾದರು. ಆತ ಸಹ ಅನಾರೋಗ್ಯದ ನಿಮಿತ್ತ ಆತ್ಮಹತ್ಯೆಗೆ ಶರಣಾಗಿದ್ದರು.

Previous articleಕಾಶ್ಮೀರಿ ಫೈಲ್ಸ್ ನಿರ್ದೇಶಕನ ಸಿನೆಮಾದಲ್ಲಿ ಕಾಂತಾರ ಬ್ಯೂಟಿ ಸಪ್ತಮಿ ಗೌಡ, ಭರ್ಜರಿ ಆಫರ್ ಗಿಟ್ಟಿಸಿಕೊಂಡ ಬ್ಯೂಟಿ….!
Next articleಮದುವೆ ಬಗ್ಗೆ ನಟಿ ರಾಗಿಣಿ ದ್ವಿವೇದಿ ವೈರಲ್ ಹೇಳಿಕೆಗಳು, ಮದುವೆ ಬಗ್ಗೆ ಕ್ಲಾರಿಟಿ ಕೊಟ್ಟ ಹಾಟ್ ತುಪ್ಪದ ಬೆಡಗಿ…!