Film News

ಕಾಶ್ಮೀರಿ ಫೈಲ್ಸ್ ನಿರ್ದೇಶಕನ ಸಿನೆಮಾದಲ್ಲಿ ಕಾಂತಾರ ಬ್ಯೂಟಿ ಸಪ್ತಮಿ ಗೌಡ, ಭರ್ಜರಿ ಆಫರ್ ಗಿಟ್ಟಿಸಿಕೊಂಡ ಬ್ಯೂಟಿ….!

ಸ್ಯಾಂಡಲ್ ವುಡ್ ನಲ್ಲಿ ಇತ್ತಿಚಿಗೆ ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನೆಮಾ ಈಗಾಗಲೇ ದೊಡ್ಡ ಕ್ರೇಜ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ದೇಶದ ಅನೇಕ ಸಿನೆಮಾ ರಂಗಗಳ ಸೆಲೆಬ್ರೆಟಿಗಳಿಗೂ ಸಹ ಈ ಸಿನೆಮಾ ತುಂಬಾನೆ ಇಷ್ಟವಾಗಿದೆ. ಇನ್ನೂ ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸಪ್ತಮಿ ಗೌಡ ಸಹ ತುಂಬಾನೆ ಅದ್ಬುತವಾಗಿ ನಟಿಸಿದ್ದು, ಈ ಸಿನೆಮಾದ ಬಳಿಕೆ ಆಕೆಗೆ ಅವಕಾಶಗಳು ಹರಿದುಬಂದಿದೆ. ಇದೀಗ ಆಕೆಗೆ ಬಾಲಿವುಡ್ ಸಿನೆಮಾದಲ್ಲಿ ಅವಕಾಶ ಬಂದಿದೆ.

ಕಾಂತಾರ ಬ್ಯೂಟಿ ಸಪ್ತಮಿ ಗೌಡ ದಿ ಕಾಶ್ಮೀರ್‍ ಫೈಲ್ಸ್ ಸಿನೆಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರ ರವರ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಪ್ತಮಿ ಗೌಡ ಕಾಂತಾರ ಸಿನೆಮಾದಲ್ಲಿ ಲೀಲಾ ಪಾತ್ರದ ಮೂಲಕ ತುಂಬಾನೆ ಅದ್ಬುತವಾಗಿ ನಟಿಸಿ ಎಲ್ಲರನ್ನು ಮೆಚ್ಚಿಸಿದ್ದರು. ಇನ್ನೂ ನಟಿ ಸಪ್ತಮಿ ಗೌಡ ಸಹ ಆಕೆಗೆ ಬಂದ ಅವಕಾಶಗಳನ್ನು ಕೂಡಲೇ ಒಪ್ಪಿಕೊಳ್ಳುವುದಿಲ್ಲ ಬದಲಿಗೆ ಆಕೆ ಅಳೆದು ತೂಗಿ ಸಿನೆಮಾಗಳನ್ನು ಒಪ್ಪಿಗೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆಕೆಗೆ ಬಾಲಿವುಡ್ ನಲ್ಲಿ ಅವಕಾಶ ಬಂದಿದ್ದು, ಈ ಸಿನೆಮಾಗೆ ಆಕೆ ಒಪ್ಪಿಗೆ ಸಹ ನೀಡಿದ್ದಾರೆ. ಸದ್ಯ ಆಕೆ ಬಾಲಿವುಡ್ ಸಿನೆಮಾ ಒಪ್ಪಿಕೊಂಡಿದ್ದು ಆಕೆಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಇನ್ನೂ ಆಕೆಯ ಮುಂದಿನ ಸಿನೆಮಾಗಳ ಮೇಲೆ ಮತಷ್ಟು ಇಂಟ್ರಸ್ಟ್ ಹುಟ್ಟಿದೆ ಎನ್ನಲಾಗುತ್ತಿದೆ.

ಇನ್ನೂ ನಟಿ ಸಪ್ತಮಿ ಗೌಡ್ ಸೆನ್ಷೇಷನ್ ಕ್ರಿಯೇಟ್ ಮಾಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರ ಸಿನೆಮಾದಲ್ಲಿ ನಟಿಸಲಿದ್ದಾರೆ. ದಿ ಕಾಶ್ಮೀರಿ ಫೈಲ್ಸ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅಗ್ನಿಹೋತ್ರ ರವರ ಮುಂದಿನ ಸಿನೆಮಾದ ಮೇಲೂ ಸಹ ತುಂಬಾ ನಿರೀಕ್ಷೆ ಹುಟ್ಟಿದೆ.  ಇನ್ನೂ ಅಗ್ನಿಹೋತ್ರ ದಿ ವಾಕ್ಸಿನ್ ವಾರ್‍ ಎಂಬ ಸಿನೆಮಾ ನಿರ್ದೇಶನ ಮಾಡುತ್ತಿರುವ ವಿಚಾರ ತಿಳಿದೇ ಇದೆ. ಈ ಸಿನೆಮಾದ ಶೂಟಿಂಗ್ ಸಹ ಈಗಾಗಲೇ ಶುರುವಾಗಿದೆ. ಈ ಸಿನೆಮಾಗಾಗಿಯೇ ವಿವೇಕ್ ಅಗ್ನಿ ಹೋತ್ರ ಸಪ್ತಮಿ ಗೌಡ ರವರನ್ನು ಆಯ್ಕೆ ಮಾಡಿದ್ದಾರೆ. ಇನ್ನೂ ಈ ಸಿನೆಮಾವನ್ನು ಕೋವಿಡ್ ವ್ಯಾಕ್ಸಿನ್ ಬಗ್ಗೆ ನಿರ್ಮಾಣವಾಗುತ್ತಿರುವ ಸಿನೆಮಾ ಆಗಿದೆ.

ಇನ್ನೂ ಇತ್ತೀಚಿಗಷ್ಟೆ ನಿರ್ದೇಶಕ ಅಗ್ನಿ ಹೋತ್ರ ಖಾಸಗಿ ಸುದ್ದಿ ಮಾಹಿತಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಕಾಂತಾರ ಸಿನೆಮಾ ನೋಡಿ ಅದರಲ್ಲಿ ಲೀಲಾ ಪಾತ್ರದಲ್ಲಿ ಕಾಣಿಸಿಕೊಂಡ ಸಪ್ತಮಿ ಗೌಡ ಅಭಿನಯ ನನಗೆ ತುಂಬಾ ಇಷ್ಟವಾಯಿತು. ಈ ಕಾರಣದಿಂದ ನನ್ನ ಸಿನೆಮಾದಲ್ಲಿ ನಟಿಸುವಂತೆ ಆಕೆಗೆ ಕೇಳಿದ್ದೆ. ಆಕೆ ಸಹ ಒಪ್ಪಿಕೊಂಡಿದ್ದು ನನಗೆ ಖುಷಿ ತಂದಿದೆ ಎಂದು ಅನೇಕ ವಿಚಾರಗಳನ್ನು ಹಮಚಿಕೊಂಡಿದ್ದಾರೆ. ಇನ್ನೂ ಈ ಸಿನೆಮಾ ಆಗಸ್ಟ್ 15 ರಂದು ತೆರೆಯ ಮೇಲೆ ಅಬ್ಬರಿಸಲಿದ್ದು. ಹಿಂದಿ ಸೇರಿದಂತೆ ದೇಶದ 11 ಭಾಷೆಗಳಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ. ಇನ್ನೂ ಈ ಸಿನೆಮಾದಲ್ಲಿ ನಟಿಸಲು ಸಪ್ತಮಿಗೌಡ ಸಹ ತುಂಬಾ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

Most Popular

To Top