Film News

ಮದುವೆ ಬಗ್ಗೆ ನಟಿ ರಾಗಿಣಿ ದ್ವಿವೇದಿ ವೈರಲ್ ಹೇಳಿಕೆಗಳು, ಮದುವೆ ಬಗ್ಗೆ ಕ್ಲಾರಿಟಿ ಕೊಟ್ಟ ಹಾಟ್ ತುಪ್ಪದ ಬೆಡಗಿ…!

ಕನ್ನಡ ಸಿನಿರಂಗದ ನಟಿ ರಾಗಿಣಿ ಗ್ಲಾಮರ್‍ ಹಾಗೂ ಅಭಿನಯದ ಮೂಲಕವೇ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಹಾಟ್ ನಟಿಯರಲ್ಲೊಬ್ಬರಾಗಿದ್ದಾರೆ. ಆಕೆ ಬಹುತೇಕ ಎಲ್ಲಾ ಸಿನೆಮಾಗಳಲ್ಲಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಆಕೆಯ ಹಾಟ್ ನೆಸ್ ಗೆ ಮರುಳಾಗಿ ಫಿದಾ ಆಗಿದ್ದಾರೆ. ಇದೀಗ ಆಕೆಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದ್ದು ಶಾಕಿಂಗ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ವೈರಲ್ ಆಗುತ್ತಿವೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಮದುವೆಯ ಬಗ್ಗೆ ಅನೇಕ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. ಅದರಲ್ಲೂ ನಟಿಯರಿಗಂತೂ ಸದಾ ಎದುರಾಗುವ ಒಂದೇ ಪ್ರಶ್ನೆ ಮದುವೆ ಯಾವಾಗ ಎಂದು. ಸದ್ಯ ರಾಗಿಣಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ. ಸದ್ಯ ಹಿಂದಿ ಭಾಷೆಯ ಏಳು ಸಿನೆಮಾಗಳಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಕೆಲವು ದಿನಗಳಲ್ಲೇ ಕನ್ನಡ ಸಿನಿರಂಗದ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಟ ಸಿಂಹ ಮದುವೆ ನಡೆಯಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಅದಿತಿ ಪ್ರಭುದೇವ ಮದುವೆ ಸಹ ನಡೆದಿದ್ದು, ಇದೀಗ ರಾಗಿಣಿ ಮದುವೆ ಯಾವಾಗ ಎಂಬ ಪ್ರಶ್ನೆ ಉದ್ಬವಿಸಿದೆ.

ಇನ್ನೂ ನಟಿ ರಾಗಿಣಿಗೆ ಸಹ ಅನೇಕ ಅಭಿಮಾನಿಗಳು ಸೇರಿದಂತೆ ಅನೇಕರು ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಆಕೆ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆಯ ಬಗ್ಗೆ ಎದುರಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸದ್ಯ ನನ್ನ ಕೈಯಲ್ಲಿ ಅನೇಕ ಸಿನೆಮಾಗಳಿವೆ. ಮದುವೆಯ ಬಗ್ಗೆ ಸದ್ಯ ನನಗೆ ಯಾವುದೇ ರೀತಿಯ ಆಲೋಚನೆಯಿಲ್ಲ. ಸಿನೆಮಾಗಳಲ್ಲಿ ನಟಿಸುತ್ತಿರುವುದು ನನಗೆ ತುಂಬಾನೆ ಖುಷಿ ಕೊಡುತ್ತಿದೆ. ಎಲ್ಲರೂ ಸಂತೋಷದಿಂದ ಮದುವೆಯಾಗಲಿ ನಾನೂ ಸಹ ಮದುವೆಗಳಿಗೆ ಹೋಗಿ ಸಂಭ್ರಮಿಸುತ್ತೇನೆ ಎಂದು ಹೇಳಿರುವ ರಾಗಿಣಿ ಒಂದು ತಿಂಗಳು ಟೈಂ ಕೊಡಿ ನಿಮಗೆ ನಾನು ದೊಡ್ಡ ಸುದ್ದಿಯೊಂದನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ರಾಗಿಣಿ ನೀಡುವ ಆ ದೊಡ್ಡ ಸುದ್ದಿ ಏನಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು. ಆಕೆ ಜೀವನದಲ್ಲಿ ಎದುರಾದ ಕಹಿ ಘಟನೆಗಳನ್ನು ಮರೆತು ಆಕೆ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆಯ ಕೈಯಲ್ಲಿ ಈಗ ಅನೇಕ ಸಿನೆಮಾಗಳಿವೆ. ಆಕೆ ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top