Film News

ಗಾಯಗೊಂಡ ಸಮಂತಾ ಪೊಟೋ ನೋಡಿ ಶಾಕ್ ಆದ ಅಭಿಮಾನಿಗಳು, ಸಮಂತಾ ಕೈಗೆ ಗಾಯ ವೈರಲ್ ಆದ ಪೊಟೋ…..!

ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆ ಹೊಂದಿರುವ ನಟಿ ಸಮಂತಾ ಇತ್ತೀಚಿಗಷ್ಟೆ ಮಯೋಸೈಟಿಸ್ ಎಂಬ ಮಾರಕ ಕಾಯಿಲೆಯಿಂದ ಹೊರಬಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಯೋಸೈಟೀಸ್ ವ್ಯಾದಿಯಿಂದ ತುಂಬಾ ಸಮಸ್ಯೆ ಅನುಭವಿಸಿದ್ದರು ಸಮಂತಾ, ಇದೀಗ ಮೊದಲಿನಂತೆ ಬಲವಾಗಿ ಕಾಣಿಸಿಕೊಳ್ಳಲು ನಿರಂತರವಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಇದೀಗ ಸಮಂತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಗಾಯಗೊಂಡ ಪೊಟೋ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಟಿ ಸಮಂತಾ ಮಯೋಸೈಟಿಸ್ ಕಾರಣದಿಂದ ಸುಮಾರು ತಿಂಗಳುಗಳ ಕಾಲ ಹೊರಗಿನ ಪ್ರಪಂಚದಲ್ಲಿ ಕಾಣಿಸಿಕೊಂಡಿರಲಿಲ್ಲ. ಯಶೋಧ ಸಿನೆಮಾದ ಪ್ರಮೋಷನ್ ವೇಳೆ ಆಕೆ ತಾನು ಗುರಿಯಾದ ವ್ಯಾದಿಯ ಬಗ್ಗೆ ರಿವೀಲ್ ಮಾಡಿದರು. ಅಂದು ಆಕೆ ತುಂಬಾ ವೀಕ್ ಆಗಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಚಿಕಿತ್ಸೆ ಪಡೆದುಕೊಂಡು ಇದೀಗ ಗುಣಮುಖರಾಗುತ್ತಿದ್ದಾರೆ. ಈಗಲೂ ಸಹ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದು, ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಮೊದಲಿನಂತೆ ಬಲಿಷ್ಟವಾಗಿ ಕಾಣಿಸಿಕೊಳ್ಳಲು ಆಕೆ ನಿರಂತರ ಯೋಗ, ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಆಕೆ ವರ್ಕೌಟ್ ಮಾಡುವಂತಹ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸದ್ಯ ನಟಿ ಸಮಂತಾ ಸಿಟಾಡೆಲ್ ಎಂಬ ಇಂಡಿಯನ್ ವರ್ಷನ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸೀರಿಸ್ ನಲ್ಲಿ ಕೆಲವೊಂದು ಆಕ್ಷನ್ ದೃಶ್ಯಗಳಿದ್ದು ಇದಕ್ಕಾಗಿ ಆಕೆ ಶಿಕ್ಷಣ ಸಹ ಪಡೆದುಕೊಳ್ಳುತ್ತಿದ್ದಾರೆ.  ಈ ಸಿರೀಸ್ ಗಾಗಿ ಆಕೆ ಜಿಮ್ ನಲ್ಲಿ ತುಂಬಾನೆ ಕಷ್ಟಪಡುತ್ತಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಸಿರೀಸ್ ನ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ, ಇದೀಗ ಆಕೆ ಹಂಚಿಕೊಂಡ ಪೊಟೋ ಒಂದು ವೈರಲ್ ಆಗುತ್ತಿದೆ. ಸಮಂತಾ ಎರಡೂ ಕೈಗಳು ರಕ್ತ ಹಾಗೂ ಗಾಯಗಳಾಗಿದೆ. ಸಿನೆಮಾದ ಶೂಟಿಂಗ್ ಸಮಯದಲ್ಲಿ ಸಮಂತಾ ಗಾಯಗೊಂಡಿದ್ದಾರೆ. ಇನ್ನೂ ಈ ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಅಭಿಮಾನಿಗಳು ಆಕೆ ಪೊಟೋ ನೋಡಿ ದಂಗಾಗಿದ್ದಾರೆ. ಆಕೆ ಶೀಘ್ರವಾಗಿ ಗುಣಮುಖರಾಗುವಂತೆ ಅಭಿಮಾನಿಗಳು ಕೋರುತ್ತಿದ್ದಾರೆ.

ಇನ್ನೂ ಅದೇ ಮಾದರಿಯಲ್ಲಿ ಕೆಲವರು ಆಕೆಯ ಹಾರ್ಡ್ ವರ್ಕ್ ಮಾಡುತ್ತಿದ್ದು ಆಕೆಯನ್ನು ಪ್ರಶಂಸೆ ಸಹ ಮಾಡುತ್ತಿದ್ದಾರೆ. ಇನ್ನೂ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top