ಕಾಲಿವುಡ್ ಸ್ಟಾರ್ ನಟ ಅಜಿತ್ ಅಭಿನಯದ ವಿಶ್ವಾಸಂ ಸಿನೆಮಾದಲ್ಲಿ ಅಜಿತ್ ಹಾಗೂ ನಯನತಾರಾ ಜೋಡಿಯ ಮಗಳ ಪಾತ್ರದಲ್ಲಿ ನಟಿಸಿದ್ದರು ಅನಿಖಾ ಸುರೇಂದ್ರನ್. ಈ ಸಿನೆಮಾದಲ್ಲಿ ಆಕೆ ಕ್ಯೂಟ್ ನಟನೆಯ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದರು. ಇನ್ನೂ ಬಾಲನಟಿಯಾಗಿ ಎಂಟ್ರಿ ಕೊಟ್ಟ ಈಕೆ ಇದೀಗ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಬುಟ್ಟಬೊಮ್ಮ ಎಂಬ ತೆಲುಗು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಓ ಮೈ ಡಾರ್ಲಿಂಗ್ ಎಂಬ ರೊಮ್ಯಾಂಟಿಕ್ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾದಲ್ಲಿ ಆಕೆ ಅನೇಕ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕೆಲವೊಂದು ಪೊಟೋಗಳು ವೈರಲ್ ಆಗುತ್ತಿವೆ
ನಟಿ ಅನಿಖಾ ಸುರೇಂದ್ರನ್ ಮಲಯಾಳಂ ಸಿನೆಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಇದೀಗ ಆಕೆ ನಟಿಯಾಗಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲನಟಿಯಾಗಿ ಭಾಸ್ಕರ್ ದಿ ರಾಸ್ಕೆಲ್, ತಮಿಳಿನ ಯನ್ನೈ ರಿಂಧಾಲ್, ವಿಶ್ವಾಸಂ, ನಾನ್ನುಮ್ ರೌಡಿ, ಮಾ ಮನಿಥಾನ್, ದಿ ಘೋಸ್ಟ್ ಸಿನೆಮಾಗಳಲ್ಲೂ ಸಹ ಅನಿಖಾ ನಟಿಸಿದ್ದರು. ಬುಟ್ಟಬೊಮ್ಮ ಸಿನೆಮಾದ ಮೂಲಕ ಅನಿಖಾ ಹಿರೋಯಿನ್ ಆಗಿದ್ದಾರೆ. ಇದೀಗ ಆಕೆ ಓ ಮೈ ಡಾರ್ಲಿಂಗ್ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ರೊಮ್ಯಾಂಟಿಕ್ ಎಂಟರ್ ಟ್ರೈನರ್ ಆಗಿ ತೆರೆಗೆ ಬಂದಿದೆ. ಈ ಸಿನೆಮಾದಲ್ಲಿ ಆನೇಕ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೆಲವೊಂದು ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ. ಇನ್ನೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಗ್ಗೆ ಅನಿಖಾ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟಿ ಅನಿಖಾ ಓ ಮೈ ಡಾರ್ಲಿಂಗ್ ಎಂಬ ರೊಮ್ಯಾಂಟಿಕ್ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಫೆ.24 ರಂದು ತೆರೆಕಂಡಿದೆ. ಈ ಸಿನೆಮಾದ ಹಿರೋ ಮೆಲ್ವಿನ್ ಜೀ ಬಾಬು ಜೊತೆಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಲಿಪ್ ಲಾಕ್ ದೃಶ್ಯಗಳಲ್ಲೂ ಸಹ ಆಕೆ ನಟಿಸಿದ್ದಾರೆ. ಇನ್ನೂ ಎರಡನೇ ಸಿನೆಮಾದಲ್ಲೇ ಈ ರೇಂಜಿಗೆ ಆಕೆ ಬೋಲ್ಡ್ ಆಗಿ ನಟಿಸಿದ್ದು ಅಭಿಮಾನಿಗಳನ್ನು ಫಿದಾ ಮಾಡಿದೆ. ಇನ್ನೂ ಕೆಲವೊಂದು ಲಿಪ್ ಲಾಕ್ ದೃಶ್ಯಗಳಲ್ಲಿ ಆಕೆ ನಟನೆ ಮಾಡಿದ್ದಾರಾ ಅಥವಾ ನಿಜಕ್ಕೂ ಲಿಪ್ ಕಿಸ್ ಕೊಟ್ಟರೇ ಎಂಬ ಅನುಮಾನ ಮೂಡುವಂತೆ ಮಾಡಿದೆ. ಈ ಸಿನೆಮಾದಲ್ಲಿ ಆಕೆ ಸಂಪೂರ್ಣವಾಗಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಲಿಪ್ ಲಾಕ್ ದೃಶ್ಯಗಳಲ್ಲಿ ಆಕೆ ನಟಿಸಿದ ಬಗ್ಗೆ ಸಹ ಮಿಡಿಯಾದೊಂದಿಗೆ ಮಾತನಾಡಿದ್ದಾರೆ.
ಮಿಡಿಯಾದೊಂದಿಗೆ ಮಾತನಾಡಿದ ಅನಿಖಾ ಕಿಸ್ ಕೊಡುವುದು ಖಾಸಗಿ ಜೀವನದ ಭಾಗ ಎಂದು ನಾನು ನಂಬುತ್ತೇನೆ. ಆದರೆ ಸಿನೆಮಾದಲ್ಲಿ ಸೀನ್ ಗಳು ಡಿಮ್ಯಾಂಡ್ ಮಾಡಿದ ಕಾರಣದಿಂದ ನನಗೆ ಬೇರೆ ಅವಕಾಶ ಇರಲಿಲ್ಲ. ಆ ಕಾರಣದಿಂದ ನಾನು ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದೆ. ಆದರೆ ಆ ದೃಶ್ಯಗಳಲ್ಲಿ ನನಗೆ ನಟಿಸಲು ತುಂಬಾನೆ ಕಿರಿಕಿರಿಯಾಗಿತ್ತು. ಆದರೆ ನಾನು ಪ್ರೊಫೆಷನಲ್ ಆಗಿ ನಿರ್ವಹಿಸಿ, ಆ ದೃಶ್ಯಗಳನ್ನು ಪೂರ್ಣಗೊಳಿಸಿದೆ. ಆದರೆ ತೆರೆ ಮೇಲೆ ಆ ದೃಶ್ಯಗಳನ್ನು ನಾನು ನೋಡಿದರೇ ನನಗೆ ತುಂಬಾ ಇರುಸು ಮುರುಸು ಉಂಟಾಗಿತ್ತು ಎಂದು ಅನಿಖಾ ತಿಳಿಸಿದ್ದಾರೆ.
