Film News

ಕಾಟೇರಾ ಸಿನೆಮಾದ ಟ್ರೈಲರ್ ರಿಲೀಸ್, ದರ್ಶನ್ ಮಾಸ್ ಅವತಾರಕ್ಕೆ ಫಿದಾ ಅದ ಡಿ-ಬಾಸ್ ಫ್ಯಾನ್ಸ್….!

ಕನ್ನಡ ಸಿನಿರಂಗದಲ್ಲಿ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಕಾಟೇರಾ ಸಿನೆಮಾ ಮೊದಲ ಸ್ಥಾನದಲ್ಲಿದೆ. ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಈ ಸಿನೆಮಾದ ಹಿರೋ ಆಗಿದ್ದು, ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಡಿ-ಬಾಸ್ ಅಭಿಮಾನಿಗಳಿಟ್ಟುಕೊಂಡಿದ್ದಾರೆ. ಈ ಸಿನೆಮಾದ ಮೇಲೆ ಈಗಾಗಲೇ  ಭಾರಿ ಹೈಪ್ ಕ್ರಿಯೇಟ್ ಆಗಿದೆ. ಈ ಸಿನೆಮಾಗಾಗಿ ಡಿ ಬಾಸ್ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಈ ಸಿನೆಮಾದ ಟ್ರೈಲರ್‍ ರಿಲೀಸ್ ಆಗಿದ್ದು, ದರ್ಶನ್ ಮಾಸ್ ಅವತಾರಕ್ಕೆ ಫಿದಾ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ಈ ಸಿನೆಮಾದ ಟ್ರೈಲರ್‍ ರಿಲೀಸ್ ಈವೆಂಟ್ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕದ ಹುಬ್ಬಳಿಯ ರೈಲ್ವೇ ಗ್ರೌಂಡ್ ಸ್ಥಳದಲ್ಲಿ ಕಾಟೇರಾ ಸಿನೆಮಾದ ಟ್ರೈಲರ್‍ ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಂಡಿದ್ದರು. ಈ ಸಿನೆಮಾ 1970ರಲ್ಲಿ ನಡೆಯುವಂತಹ ಕಥೆಯನ್ನು ಆಧರಿಸಿ ಈ ಸಿನೆಮಾ ತೆರೆಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ನೈಜ್ ಘಟನೆಯಿಂದ ಸ್ಪೂರ್ತಿ ಪಡೆದು ಕಾಟೇರಾ ಸಿನೆಮಾ ಸೆಟ್ಟೇರಿದೆ. ಈ ಸಿನೆಮಾ ಇದೇ ವರ್ಷ ಡಿ.29 ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಟ್ರೈಲರ್‍ ರಿಲೀಸ್ ಈವೆಂಟ್ ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ಆಗಮಿಸಿದ್ದರು. ಅವರೊಟ್ಟಿಗೆ ಸಿನೆಮಾ ನಟ ಚಾಲೆಂಜಿಂಗ್ ಸ್ಟಾರ್‍ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಟಕೇಶ್, ನಿರ್ದೇಶಕ ತರುಣ್ ಸುಧೀರ್‍, ನಟಿ ಆರಾಧನ ರಾಮ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟ ಅಭಿಷೇಕ್ ಅಂಬರೀಶ್, ಸೂರ್ಯ, ಅವಿನಾಶ್, ಚಿಕ್ಕಣ್ಣ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.

ಇನ್ನೂ ದರ್ಶನ್ ಅಭಿನಯದ ಕಾಟೇರಾ ಸಿನೆಮಾ ಡಿ.29 ರಂದು ತೆರೆಕಾಣಲಿದೆ. ಈ ಸಿನೆಮಾ ಘೋಷಣೆಯಾದಾಗಿನಿಂದ ಭಾರಿ ಹೈಪ್ ಕ್ರಿಯೇಟ್ ಮಾಡಿತ್ತು. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದೆ. ಈ ಹಾದಿಯಲ್ಲೇ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಭಾರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಟ್ರೈಲರ್‍ ರಿಲೀಸ್ ಆದ ಬಳಿಕ ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಆಗಿದೆ. ಈ ಸಿನೆಮಾವನ್ನು ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ರಾಬರ್ಟ್ ಸಿನೆಮಾದ ಬಳಿಕ ತರುಣ್ ಸುಧೀರ್‍ ಮತ್ತೊಮ್ಮೆ ದರ್ಶನ್ ರವರ ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ದರ್ಶನ್ ಜೊತೆಗೆ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಾಡುಗಳು ರಿಲೀಸ್ ಆಗಿದೆ. ಎರಡೂ ಹಾಡುಗಳೂ ಸಹ ಒಳ್ಳೆಯ ಸಕ್ಸಸ್ ಕಂಡಿದ್ದು, ಒಳ್ಳೆಯ ವೀಕ್ಷಣೆ ಪಡೆದುಕೊಂಡಿದೆ.

Most Popular

To Top