Film News

ಕ್ರಿಸ್ ಮಸ್ ಸೆಲೆಬ್ರೆಷನ್ ಗೆ ಲಂಡನ್ ಗೆ ಹಾರಿದ ಯಶ್-ರಾಧಿಕಾ, ವೈರಲ್ ಆದ ರೊಮ್ಯಾಂಟಿಕ್ ಪೊಟೋಸ್……!

ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುವ ಯಶ್ ಹಾಗೂ ರಾಧಿಕಾ ಸದ್ಯ ವೆಕೇಷನ್ ಮೂಡ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆಜಿಎಫ್-2 ಸಿನೆಮಾದ ಬಳಿಕ ಯಶ್ ಸಂಪೂರ್ಣವಾಗಿ ತನ್ನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಇನ್ನೇನು ನಟ ಯಶ್ ಮತ್ತೆ ಸಿನೆಮಾದ ಶೂಟೀಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಬ್ಯುಸಿಯಾಗುವದಕ್ಕೂ ಮುಂಚೆ ಅವರು ಪತ್ನಿಯೊಂದಿಗೆ ಲಂಡನ್ ಗೆ ಹಾರಿದ್ದಾರೆ. ಕ್ರಿಸ್ ಮಸ್ ಸೆಲೆಬ್ರೇಷನ್ ಗಾಗಿ ಈ ಕ್ಯೂಟ್ ಜೋಡಿ ಲಂಡನ್ ಗೆ ಹಾರಿದ್ದು, ಅಲ್ಲಿನ ರೊಮ್ಯಾಂಟಿಕ್  ಪೊಟೋಸ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕನ್ನಡ ಸಿನಿರಂಗದ ಕ್ಯೂಟ್ ಕಪಲ್ ಯಶ್ ಅಂಡ್ ರಾಧಿಕಾ ಲಂಡನ್ ನಲ್ಲಿ ಕ್ರಿಸ್ ಮಸ್ ಸೆಲೆಬ್ರೇಷನ್ ಗಾಗಿ ಹಾರಿದ್ದಾರೆ. ಜೊತೆಗೆ ಅಲ್ಲೇ ಈ ಜೋಡಿ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಸಹ ಲಂಡನ್ ಗೆ ಹಾರಿದ್ದಾರೆ. ಇನ್ನೂ ಯಶ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ರು ಕುಟುಂಬಕ್ಕೆ ತುಂಬಾನೆ ಸಮಯ ನೀಡಲು ಇಷ್ಟಪಡುತ್ತಾರೆ. ಪತ್ನಿ ಹಾಗೂ ಮಕ್ಕಳ ಜೊತೆಗೆ ಆಗಾಗ ವೆಕೇಷನ್ ಗಳಿಗೆ ಹಾರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ಲಂಡನ್ ನ ರೀಜೆಂಟ್ ಸ್ಟ್ರೀಟ್ ನಲ್ಲಿ ನಿಂತು ರೊಮ್ಯಾಂಟಿಕ್ ಸೆಲ್ಫಿ ತೆಗೆದು ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕಡಿಮೆ ಸಮಯದಲ್ಲೇ ರಾಧಿಕಾ ಹಂಚಿಕೊಂಡ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಅದರಲ್ಲೂ ನಟಿ ಹಾಗೂ ಸಂಸದೆ ಸುಮಲತಾ ಸಹ ಕಾಮೆಂಟ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಲಂಡನ್ ನಲ್ಲಿ ಓದುತ್ತಿದ್ರು, ಅದು 2 ವರ್ಷ ಅಭಿಗೆ ಮನೆಯಾಗಿತ್ತು. ಸಾಕಷ್ಟು ಅದ್ಬುತ ನೆನಪುಗಳಿವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ರಾಧಿಕಾ ಪಂಡಿತ್ ಹಾಗೂ ಯಶ್ ರವರು ಮದುವೆಯಾಗಿ 7 ವರ್ಷ ಕಳೆದಿದೆ. ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಈ ಜೋಡಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಜಿಎಫ್ ಸಿನೆಮಾದ ಬಳಿಕ ಯಶ್ ಟಾಕ್ಸಿಕ್ ಸಿನೆಮಾ ಘೋಷಣೆ ಮಾಡಿದ್ದು, ಈ ಸಿನೆಮಾದ ಮೇಲೆ ಇಡೀ ದೇಶದಾದ್ಯಂತ ಭಾರಿ ನಿರೀಕ್ಷೆ ಸಹ ಹುಟ್ಟಿದೆ.

Most Popular

To Top